Class 10 | MATHS |
Chapter | ನೇ ಸಾಲಿನ ಗಣಿತ ಮಾದರಿ ಪ್ರಶ್ನೆಪತ್ರಿಕೆ |
CAMBRIDGE PUBLICATION(KANNAD) | Example |
Number Of Questions | 75 |
Academic Year | 2023-24 |
ಈ ಕೆಳಗಿನ ಸಂಖ್ಯೆಗಳಲ್ಲಿ ಅಭಾಗಲಬ್ದ ಸಂಖ್ಯೆಯು.
`sinA = 1/sqrt 2` ಆದರೆ `/_ A` ನ ಆಳತೆಯು
ಒಂದು ವೃತ್ತಕ್ಕೆ ಅದರ ಬಾಹ್ಯಬಿಂದುವಿನಿಂದ ಎಳೆಯಬಹುದಾದ ಗರಿಷ್ಠ ಸ್ಪರ್ಶಕಗಳ ಸಂಖ್ಯೆ.
ಒಂದು ಶಂಕುವಿನ ತ್ರಿಜ್ಯ(r) , ಎತ್ತರ(h) ಮತ್ತು ಓರೆ ಎತ್ತರ (l) ಆದರೆ ಅದರ ಪಾರ್ಶ್ವ ಮೇಲ ವಿಸ್ತೀರ್ಣ ಕಂಡುಹಿಡಿಯುವ ಸೂತ್ರವು.
`P(x) = x^(2) -x -k` ಬಹುಪದೋಕ್ತಿಯ ಒಂದು ಶೂನ್ಯತೆಯು 2 ಆದಾಗ 'K' ನ ಬೆಲೆಯು.
ಸಮಾಂತರ ಶ್ರೇಡಿ 5,9, 13... ನ 10 ನೇ ಪದವು
`triangle ABC` ಯಲ್ಲಿ DE||BC, DE =5 cm, BC =8cm ಮತ್ತು
AD =3.5 cm ಆದರೆ AB ಉದ್ದವು .
P(E) = 0.05, ಆದರೆ "E" ಅಲ್ಲದ ಘಟನೆಯ ಸಂಭವನೀಯ ಎಷ್ಟು?
`P(x) = x^(3) + 2x^(2) +x +6` ಬಹುಪದೋಕ್ತಿಯ ಡಿಗಿ ಯನ್ನು ಬರೆಯಿರಿ.
`ax^(2) +bx +c =0` ವರ್ಗಸಮೀಕರಣದ 'ಶೋಧಕ' ವನ್ನು ಬರೆಯಿರಿ.
ಒಂದು ಸಮಾಂತರ ಶ್ರೇಡಿಯ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸವು ಕ್ರಮವಾಗಿ 6 ಮತ್ತು 5 ಆಗಿದೆ. ಆ ಶ್ರೇಡಿಯ 3 ನೇ ಪದವನ್ನು ಕಂಡುಹಿಡಿಯಿರಿ.
'ಮೂಲ ಸಮಾನುಪಾತತೆಯ ಪ್ರಮೇಯ' ವನ್ನು ನಿರೂಪಿಸಿ.
ಯ್ಲೂಕ್ಲಿಡ್‌ನ ಭಾಗಾಕಾರ ಅನುಪ್ರಮೇಯ `a = 3q + r` ಆದಾಗ 'r' ನ ಎಲ್ಲಾ ಬೆಲೆಗಳನ್ನು ಬರೆಯಿರಿ.
`sintheta = 3/5` ಮತ್ತು `costheta =4/5` ಆದರೆ `sin^(2) theta + cos^(2) theta` ನ ಬೆಲೆಯನ್ನು ಕಂಡುಹಿಡಿಯಿರಿ.
`sin30^circ + cos60^circ` ಯ ಬೆಲೆಯು
ಒಂದು ಆಯತಘನಾಕೃತಿ ಆಕಾರದ ಕಬ್ಬಿಣದ ತುಂಡಿನ ಆಯಾಮಗಳು 10 cm x 5cm x 2cm ಗಳಾದರೆ ಅದರ ಘನಫಲವನ್ನು ಕಂಡುಹಿಡಿಯಿರಿ.
`sqrt2 + sqrt 3` ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.
Solve for x and y:
`10x+3y=75" and "6x-5y=11`
`6x^(2) + 7x-10 =0` ಸಮೀಕರಣದ ಮೂಲಗಳನ್ನು ಕಂಡುಹಿಡಿಯಿರಿ.
A(8, -3) ಮತ್ತು B(0,9) ಬಿಂದುಗಳ ನಡುವಿನ ದೂರವನ್ನು 'ದೂರ ಸೂತ್ರ' ಬಳಸಿ ಕಂಡುಹಿಡಿಯಿರಿ.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣ ಕ್ರಮವಾಗಿ 25 ಚದರ cm ಮತ್ತು 16 ಚದರ cm ಗಳಾಗಿವೆ. ಮೊದಲನೆಯ ತ್ರಿಭುಜದ ಒಂದು ಬಾಹುವಿನ ಅಳತೆಯು 9 cm ಆದರೆ, ಮತ್ತೊಂದು ತ್ರಿಭುಜದ ಅನುರೂಪ ಬಾಹುವಿನ ಆಳತೆಯನ್ನು ಕಂಡುಹಿಡಿಯಿರಿ.
1 ರಿಂದ 6 ವರೆಗಿನ ಸಂಖ್ಯೆಗಳನ್ನು ನಮೂದಿಸಿರುವ ಎರಡುಘನಾಕೃತಿಯ ದಾಳಗಳನ್ನು ಏಕಕಾಲದಲ್ಲಿ ಉರುಳಿಸಲಾಗಿದೆ. ಮೇಲೆ ಬರುವ ಮುಖಗಳಲ್ಲಿ ಸಂಖ್ಯೆಗಳ ಮೊತ್ತ 7 ಕ್ಕಿಂತ ಹೆಚ್ಚಗಿರುವ ಸಂಭವನೀಯತೆಯನ್ನು ಕಂಡುಹಿಡಿಯಿರಿ.
`costheta = 0.6` ಆದಾಗ `5 sintheta -3 tantheta =0` ಎಂದು ತೋರಿಸಿ.
`sec^(4)theta - sec^(2)theta = tan^(2)theta + tan^(4) theta` ಎಂದು ಸಾಧಿಸಿ.
ಒಂದು ದತ್ತ ಭಿನ್ನರಾಶಿಯಲ್ಲಿನ ಅಂಶ ಮತ್ತು ಛೇದಗಳ ಮೊತ್ತವು 12 ಆಗಿದೆ. ಈ ಭಿನ್ನರಾಶಿಯ ಛೇದಕ್ಕೆ 3 ನ್ನುಕೂಡಿದಾಗ ಆ ಭಿನ್ನರಾಶಿಯು 1/2 ಆಗುತ್ತದೆ. ಹಾಗಾದರೆ ಆ ಭಿನ್ನರಾಶಿಯನ್ನು ಕಂಡುಹಿಡಿಯಿರಿ.
ಎರಡು ಅಂಕಿಯ ಒಂದು ಸಂಖ್ಯೆಯ 7 ರಷ್ಟು ಅದರ ಸ್ಥಾನಗಳನ್ನು ಅದಲು ಬದಲು ಮಾಡಿದಾಗ ಉಂಟಾಗುವ ಸಂಖ್ಯೆಯ 4 ರಷ್ಟಕ್ಕೆ ಸಮನಾಗಿದೆ. ಅಂಕಿಗಳ ವ್ಯತ್ಯಾಸವು 3 ಆದರೆ, ಆ ಸಂಖ್ಯೆಯನ್ನು ಕಂಡುಹಿಡಿಯಿರಿ.
`P(x) = x^(4) +x^(3) - 11x^(2) -9x +18` ಬಹುಪದೋಕ್ತಿಯ ಎರಡು ಶೂನ್ಯತೆಗಳು 3 ಮತ್ತು - 3 ಆಗಿವೆ. ಬಹುಪದೋಕ್ತಿಯ ಉಳಿದ ಎರಡು ಶೂನ್ಯತೆಗಳನ್ನು ಕಂಡುಹಿಡಿಯಿರಿ.
ಎರಡು ವರ್ಗಗಳ ವಿಸ್ತೀರ್ಣಗಳ ಮೊತ್ತ `640m^(2)` ಮತ್ತು ಅವುಗಳ ಸುತ್ತಳತೆಗಳ ವ್ಯತ್ಯಾಸ `64m `ಆದಾಗ, ಆ ಎರಡು ವರ್ಗಗಳ ಬಾಹುಗಳ ಅಳತೆಯನ್ನು ಕಂಡುಹಿಡಿಯಿರಿ.
`(a^(2) + b^(2))x^(2) +2 (bc - ad)x + c^(2) + d^(2) =0` ಸಮೀಕರಣದ ಮೂಲಗಳು ಸಮವಾದಾಗ ac +bd=0 ಎಂದು ತೋರಿಸಿ.
P(2, X) ಬಿಂದುವು A(- 2,2) ಮತ್ತು B(3,7) ಗಳನ್ನು ಸೇರಿಸುವ ರೇಖೆಯನ್ನು ಅಂತರಿಕವಾಗಿ ವಿಭಾಗಿಸುವ ಅನುಪಾತವನ್ನು ಕಂಡುಹಿಡಿಯಿರಿ. ಹಾಗೆಯೇ X ನ ಬೆಲೆಯನ್ನು ಕಂಡುಹಿಡಿಯಿರಿ.
A(2, 2), B(4, 4) ಮತ್ತು C(2, 6) ಶೃಂಗಗಳನ್ನು ಹೊಂದಿರುವ ತ್ರಿಭುಜದ ಬಾಹುಗಳ ಮಧ್ಯಬಿಂದುಗಳನ್ನು ಸೇರಿಸಿದಾಗ ಉಂಟಾಗುವ ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಒಂದು ವೃತ್ತಕ್ಕೆ ಅದರ ಬಾಹ್ಯಬಿಂದುವಿನಿಂದ ಎಳೆದ ಸ್ಪರ್ಶಕಗಳು ಸಮಾನವಾಗಿರುತ್ತದೆ. ಎಂದು ಸಾಧಿಸಿ.
ಚಿತ್ರದಲ್ಲಿ ABCD ವರ್ಗದ ಶೃಂಗಗಳು ವೃತ್ತದ ಮೇಲಿವೆ
ವೃತ್ತ ಪರಿಧಿಯು 88 cm ಆದಾಗ ಛಾಯೆಗೊಳಿಸಿದ
ಭಾಗದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಒಂದು ಗ್ರಾಮದ 100 ಹೊಲಗಳಲ್ಲಿ ಹೆಕ್ಟರ್‌ಗೆ ಉತ್ಪಾದಿಸಿರುವ ಗೋಧಿಯ ಇಳುವರಿಯನ್ನು ಕೆಳಗಿನ ಕೋಷ್ಟಕವು
ನೀಡುತ್ತಿದೆ. ಈ ದತ್ತಾಂಶಗಳಿಗೆ ಅಧಿಕ ವಿಧಾನದ ಓಜೀವ್ ರಚಿಸಿ.
ನಕ್ಷೆಯ ವಿಧಾನದಿಂದ `x- 2y =0` ಮತ್ತು `3x + 4y = 20` ರೇಖಾತ್ಮಕ ಸಮೀಕರಣಗಳನ್ನು ಬಿಡಿಸಿ.
ಒಂದು ಸಮಾಂತರ ಶ್ರೇಡಿಯ p ನೇ q ನೇ ಮತ್ತು r ನೇ ಪದಗಳು ಕ್ರಮವಾಗಿ a,b ಶಮತ್ತು c ಗಳಾಗಿವೆ. `a(q - r) + b(r -p) + c(p-q) =0` ಎಂದು ಸಾಧಿಸಿ.
ಒಂದು ಸಮಾಂತರ ಶ್ರೇಡಿಯ ಮೊದಲ ಮೂರು ಪದಗಳ ಮೊತ್ತ 33 ಆಗಿದೆ. ಮೊದಲನೇ ಪದ ಮತ್ತು 3 ನೇ ಪದಗಳ ಗುಣಲಬ್ದವು ಅದರ 2ನೇ ಪದಕ್ಕಿಂತ 29 ಹೆಚ್ಚಾಗಿದ್ದರೆ, ಸಮಾಂತರ ಶ್ರೇಡಿಯನ್ನು ಕಂಡುಹಿಡಿಯಿರಿ.
ಅಪೂರ್ಣವಾಗಿರುವ ಒಂದು ನೇರ ಕಟ್ಟಡದ ತುದಿಯು ಅದೇ ನೆಲದಲ್ಲಿನ ಕಟ್ಟಡದ ಬುಡದಿಂದ 100 ಮೀ ದೂರದಲ್ಲಿರುವ ಒಂದು ಬಿಂದುವಿನಿಂದ `45^circ` ಉನ್ನತಕೋನವನ್ನು ಉಂಟುಮಾಡುತ್ತದೆ. ಆ ಬಿಂದುವಿನಿಂದ ಕಟ್ಟಡದ ಗರಿಷ್ಠ ಎತ್ತರದ ತುದಿಗೆ `60^circ` ಉನ್ನತಕೋನವನ್ನು ಉಂಟುಮಾಡಿಸಲು, ಅಪೂರ್ಣಗೊಂಡಿರುವ ಕಟ್ಟಡವನ್ನು ಗರಿಷ್ಠ ಮಟ್ಟ ತಲುಪಲು ಇನ್ನು ಎಷ್ಟು ಎತ್ತರಕ್ಕೆ ಏರಿಸಬೇಕೆಂದು ಕಂಡುಹಿಡಿಯಿರಿ. (`sqrt3 =1.73` ತೆಗೆದುಕೊಳ್ಳಿ)
'ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ'' . ಎಂದು ಸಾಧಿಸಿ.
ರೇಖಾತ್ಮಕ ಸಮೀಕರಣಗಳ ಜೋಡಿಗಳು `x + y =9` ಮತ್ತು` x-y= 1`ಅದರೆ x ಮತ್ತು y ನ ಬೆಲೆಯು
120 ನ್ನು ಅವಿಭಾಜ್ಯ ಅಪವರ್ತನಗಳ ಗುಣಲಬ್ಧಗಳಾಗಿ ಬರೆದಾಗ.
ಚಿತ್ರದಲ್ಲಿ sin C ದ ಬೆಲೆಯು.
(4, -3) ಬಿಂದುವಿನಿಂದ ಮೂಲಬಿಂದುವಿಗೆ ಇರುವ ದೂರವು.
ಚಿತ್ರದಲ್ಲಿ BC ಯು .
ಒಂದು ಸಮಾಂತರ ಶ್ರೇಢಿಯ 'n' ನೇ ಪದವು `4n^(2) -1` ಆದರೆ 8 ನೇ ಪದವು
ಇಂಗ್ಲೀಷ್ ವರ್ಣಮಾಲೆಯ. 26 ಅಕ್ಷರಗಳನ್ನು ಕಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಬರೆದು (ಯಾವುದೇ ಅಕ್ಷರವನ್ನು ಪುನರಾವತಿಸದೆ) ಒಂದು ಪೆಟ್ಟಿಗೆಯಲ್ಲಿ ಇಡಲಾಗಿದೆ. ಇದರಿಂದ ಯಾದೃಚ್ಛಿಕವಾಗಿ ಒಂದು ಕಾರ್ಡ್‌ನ್ನು ಆರಿಸಿದಾಗ ಸ್ವರಾಕ್ಷರಗಳು ಮೇಲೆ ಬರದ ಸಂಭವನೀಯತೆಯು.
ಈ ಚಿತ್ರದಲ್ಲಿ ಉನ್ನತ ಕೋನ `theta`ದ ಅಳತೆಯು.
24 ಮತ್ತು 16 ಎಂಬ ಎರಡು ಸಂಖ್ಯೆಗಳ ಲ.ಸಾ.ಅ ವು 48 ಆದರೆ ಅದರ ಮ.ಸಾ.ಅ ವನ್ನು ಕಂಡುಹಿಡಿಯಿರಿ.
`x^(2) + 7x +12 =0` ಈ ವರ್ಗಸಮೀಕರಣದ ಮೂಲಗಳನ್ನು ಕಂಡುಹಿಡಿಯಿರಿ.
`sin90^circ` + `tan45^@` ಯ ಬೆಲೆ ಕಂಡುಹಿಡಿಯಿರಿ.
A (-2, 2) ಮತ್ತು B (2, 8) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು 4 ಸಮಭಾಗಗಳನ್ನಾಗಿ ಮಾಡುವ ಬಿಂದುಗಳ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
A ಯು ಒಂದು ಯಾದೃಚ್ಛಿಕ ಪ್ರಯೋಗದ ಘಟನೆ ಆಗಿದ್ದು P(A) : P(`overlineA`) = 1:2 ಆದರೆ P(`overlineA`) ನ್ನು ಕಂಡುಹಿಡಿಯಿರಿ.
ಒಂದು ವೃತ್ತದ ಸುತ್ತಳತೆಯು ಅದರ ವಿಸ್ತೀರ್ಣಕ್ಕೆ ಸಾಂಖ್ಯಿಕವಾಗಿ ಸಮವಾಗಿದ್ದರೆ ಆ ವೃತ್ತದ ತ್ರಿಜ್ಯ ಕಂಡುಹಿಡಿಯಿರಿ.
ಗೋಳದ ಘನಫಲ ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ.
O' ಕೇಂದ್ರವುಳ್ಳ ಒಂದು ವೃತ್ತದ ಪರಿಧಿಯು 24 cm ಆಗಿದೆ. ಆ ವೃತ್ತದ ಒಂದು ಕಂಸದಿಂದ ಕೇಂದ್ರದಲ್ಲಿ ಉಂಟಾಗುವ
ಕೋನವು `30^circ` ಆಗಿದ್ದರೆ, ಕಂಸದ ಉದ್ದವನ್ನು ಕಂಡುಹಿಡಿಯಿರಿ.
`sqrt 5` ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.
`alpha` ಮತ್ತು `beta` ಗಳು `P(x) = 3x^(2) -12x + 15` ಬಹುಪದೋಕ್ತಿಯ ಶೂನ್ಯತೆಗಳಾದರೆ `alpha^(2) + beta^(2)` ನ ಬೆಲೆ ಕಂಡುಹಿಡಿಯಿರಿ.
ಸಮತಟ್ಟಾದ ನೆಲದ, ಮೇಲಿರುವ ಒಂದು ನೇರ ಕಟ್ಟಡದ ತುದಿಗೆ ಅದೇ ನೆಲದಲ್ಲಿ ಕಟ್ಟಡದ ಬುಡದಿಂದ 9`sqrt`3m ದೂರದಲ್ಲಿರುವ ಒಂದು ಬಿಂದುವಿನಿಂದ ಉಂಟಾಗುವ ಉನ್ನತ ಕೋನವು `60^circ` ಆಗಿದೆ. ಕಟ್ಟಡದ ಎತ್ತರ ಕಂಡುಹಿಡಿಯಿರಿ.
ಚಿತ್ರದಲ್ಲಿ ತ್ರಿಜ್ಯ 7 cm ಇರುವಂತೆ 'O' ಕೇಂದ್ರವಿರುವ ವೃತ್ತದಲ್ಲಿ
ಒ೦ದು ಕಂಸವು ಅದರ ಕೇಂದ್ರದಲ್ಲಿ `30^circ` ಕೋನವನ್ನು ಉಂಟುಮಾಡುತ್ತದೆ.
ಹಾಗಾದರೆ ಛಾಯೆಗೊಳಿಸದೆ ಇರುವ ಭಾಗದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಒಂದು ನೇರ ವೃತ್ತಪಾದ ಸಿಲಿಂಡರಿನ ಪಾರ್ಶ್ವ ಮೇಲ್ಮೈ ವಿಸ್ತೀರ್ಣವು '440 cm^(2)' ಮತ್ತು ಅದರ ವೃತ್ತಪಾದದ ತ್ರಿಜ್ಯವು 7 cm ಆಗಿದೆ. ಹಾಗಾದರೆ ಸಿಲಿಂಡರಿನ ಘನಫಲವನ್ನು ಕಂಡುಹಿಡಿಯಿರಿ.
ಒಂದು ದತ್ತ ಭಿನ್ನರಾಶಿಯ ಅಂಶ ಮತ್ತು ಛೇದಗಳಿಗೆ 3 ನ್ನು ಕೂಡಿಸಿದಾಗ ಆ ಭಿನ್ನರಾಶಿಯು 8/11 ಆಗುತ್ತದೆ. ಅದೇ ಭಿನ್ನರಾಶಿಯ ಆಂತ ಮತ್ತು ಛೇದಗಳಿಂದ 3 ನ್ನು ಕಳೆದರೆ ಭಿನ್ನರಾಶಿಯು 2/5 ಆಗುತ್ತದೆ. ಆ ದತ್ತ ಭಿನ್ನರಾಶಿಯನ್ನು ಕಂಡುಹಿಡಿಯಿರಿ.
ಎರಡು ಅನುಕ್ರಮ ಧನ ಪೂರ್ಣಾಂಕಗಳ ವರ್ಗಗಳ ಮೊತ್ತವು 365 ಆದರೆ ಆ ಸಂಖ್ಯೆಗಳನ್ನು ಕಂಡುಹಿಡಿಯಿರಿ.
A(-2, 1), B(4, 6), C(6, - 3) ನಿರ್ದೇಶಾಂಕಗಳು ತ್ರಿಭುಜದ ಶೃಂಗಗಳಾದರೆ, ಆ ತ್ರಿಭುಜದ ಸುತ್ತಳತೆಯನ್ನು ಕಂಡುಹಿಡಿಯಿರಿ.
ಒಂದು ಸಮಾಂತರ ಚತುರ್ಭುಜದ ಮೂರು ಶೃಂಗಗಳ ನಿರ್ದೇಶಾಂಕಗಳು ಕ್ರಮವಾಗಿ A(1, 2), B(2, 3), C(8,5) ಆದರೆ 4 ನೇ ಶೃಂಗಬಿಂದುವಿನ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ ಲಂಬವಾಗಿರುತ್ತದೆ. ಎಂದು ಸಾಧಿಸಿ.
ಭಿನ್ನಕದ ರೂಪದಲ್ಲಿರುವ ಒಂದು ಹೂ ಕುಂಡದ ಎರಡು ಬದಿಯ ವೃತ್ತದ ಸುತ್ತಳತೆಗಳು ಕ್ರಮವಾಗಿ 44 cm ಮತ್ತು 8.4`pi`cm ಆಗಿದೆ. ಇದರ ಆಳ 14 cm ಆದರೆ, ಹೂ ಕುಂಡದಲ್ಲಿ ತುಂಬುವ ಮಣ್ಣಿನ ಗರಿಷ್ಠ ಪ್ರಮಾಣವನ್ನು ಕಂಡುಹಿಡಿಯಿರಿ.
ಸಮನಾದ ತ್ರಿಜ್ಯವುಳ್ಳ ಒಂದು ಶಂಕುವನ್ನು ಒಂದು ಅರ್ಧಗೋಳಾಕೃತಿಯ ಮೇಲೆ ಜೋಡಿಸಿ ಒಂದು ಆಟಿಕೆಯನ್ನು ಮಾಡಲಾಗಿದೆ. ಶಂಕುನಿನ ಪಾದದ ವ್ಯಾಸವು 6 cm ಮತ್ತು ಎತ್ತರ 4 cm ಇದ್ದರೆ ಆಟಿಕೆಯ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯಿರಿ.(`pi` = 3.14 ತೆಗೆದುಕೊಳ್ಳಿ)
ನಕ್ಷೆಯ ಕ್ರಮದಿಂದ ಬಿಡಿಸಿ. `2x - 2y =2`, `5x + y = 17`
ಕಾರ್ಬಾನೆ 50 ಕೆಲಸಗಾರರ ದೈನಂದಿನ ಆದಾಯವನ್ನು ಈ ಕೆಳಗಿನ ವಿತರಣೆಯು ನೀಡುತ್ತದೆ.
ಮೇಲಿನ ವಿತರಣೆಯನ್ನು 'ಕಡಿಮೆ ಇರುವ ವಿಧಾನದ' ಸಂಚಿತ ಆವೃತ್ತಿಗೆ ಬದಲಾಯಿಸಿ ಮತ್ತು ಅದರ ಓಜೀವ್
ಎಳೆಯಿರಿ.
ಒಂದು ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತವು 210 ಮತ್ತು ಮೊದಲ (n - 1) ಪದಗಳ ಮೊತ್ತವು 171 ಆಗಿದ್ದು, ಶ್ರೇಢಿಯ ಮೊದಲನೇ ಪದವು 3 ಆದಾಗ ಆ ಸಮಾಂತರ ಶ್ರೇಢಿಯನ್ನು ಬರೆಯಿರಿ.
ಒಂದು ಸಮಾಂತರ ಶ್ರೇಢಿಯ ಮೊದಲ 8 ಪದಗಳ ಮೊತ್ತ 136 ಮತ್ತುಅದರ ಮೊದಲ 15 ಪದಗಳವರೆಗಿನ ಮೊತ್ತ 465 ಆದರೆ ಶ್ರೇಢಿಯ ಮೊದಲ 25 ಪದಗಳ ಮೊತ್ತ ಕಂಡುಹಿಡಿಯಿರಿ.
ಒಂದು ಸಮಾಂತರ ಶ್ರೇಢಿಯ 5 ನೇ ಮತ್ತು 9 ನೇ ಪದಗಳ ಮೊತ್ತ 40 ಹಾಗೂ 8 ನೇ ಮತ್ತು 14 ನೇ ಪದಗಳ ಮೊತ್ತ 64 ಆಗಿದೆ. ಸಮಾಂತರ ಶ್ರೇಢಿಯ ಮೊದಲ 20 ಪದಗಳ ಮೊತ್ತ ಕಂಡುಹಿಡಿಯಿರಿ.
ಈ ಕೆಳಗೆ ಕೊಟ್ಟರುವ ದತ್ತಾಂಶಗಳ ಬಹುಲಕವು 15 ಆಗಿದೆ. ಇದರ ಸರಾಸರಿಯನ್ನು ಕಂಡುಹಿಡಿದು, ಮಧ್ಯಾಂಕ,
ಸರಾಸರಿ ಮತ್ತು ಬಹುಲಕ ಸಂಬಂಧಗಳ ಸೂಕ್ತವಾದ ಸೂತ್ರ ಬಳಸಿ ಅದರ ಮಧ್ಯಾಂಕ ಕಂಡುಹಿಡಿಯಿರಿ,
Prove that:`(sintheta)/(1+costheta)+(1+costheta)/(sintheta)=2cosectheta`
''ಒಂದು ತ್ರಿಭುಜದಲ್ಲಿ ಅತ್ಯಂತ ದೊಡ್ಡ ಬಾಹುವಿನ ಮೇಲಿನ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾದ್ಧರೆ ಆ ಎರಡು ಬಾಹುಗಳ ನಡುವೆ ಲಂಬಕೋನ ಏರ್ಪಡುತ್ತದೆ.'' ಎಂದು ಸಾಧಿಸಿ.
Example questions and complete solutions for chapter ನೇ ಸಾಲಿನ ಗಣಿತ ಮಾದರಿ ಪ್ರಶ್ನೆಪತ್ರಿಕೆ of CAMBRIDGE MATHS (KANNADA) of Class 10