Class 10 | MATHS |
Chapter | ನೂತನ ಮಾದರಿ ಪ್ರಶ್ನೆಪತ್ರಿಕೆ 1 |
CAMBRIDGE PUBLICATION(KANNAD) | Example |
Number Of Questions | 41 |
Academic Year | 2023-24 |
70 ಮತ್ತು 125ನ್ನು ಭಾಗಿಸಿ, 5 ಮತ್ತು 8 ನ್ನು ಕ್ರಮವಾಗಿ ಶೇಷವನ್ನು ಉಳಿಸುವ ಅತಿ ದೊಡ್ಡಸಂಖ್ಯೆ.
ಸಮಾಂತರ ಶ್ರೇಢಿಯ 7ನೇ ಪದದ 7 ರಷ್ಟು 11ನೇ ಪದದ 11ರಷ್ಟು ಸಮವಾದರೆ 18ನೇ ಪದ
`f(x) = (x-2)^(2)+ 4` ಬಹುಪದೋಕ್ತಿಯ ಶೂನ್ಯತೆಗಳು
`tantheta =4/3 `ಅದರೆ `(3sintheta + 2costheta)/(3sintheta - 2costheta)`
P(E) = 0.05, ಆದರೆ "E" ಅಲ್ಲದ ಘಟನೆಯ ಸಂಭವನೀಯ ಎಷ್ಟು?
ಕೊಟ್ಟಿರುವ ಚಿತ್ರದಲ್ಲಿ `/_BAC = 90` AD`bot` BC ಆದಾಗ .
ಕೊಟ್ಟರುವ ಚಿತ್ರದಲ್ಲಿ 'O' ವೃತ್ತದ ಕೇಂದ್ರವಾಗಿದ್ದು PQ ಯು ಜ್ಯಾ P ಬಿಂದುವಿನಲ್ಲಿ ಎಳೆದ ಸ್ಪರ್ಶಕದಿಂದ `/_ QPR = 50^circ`
ಆಗಿದೆ `/_POQ` =?
ಎರಡು ಗೋಳಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತ 16:9 ಆದರೆ ಅವುಗಳ ಘನಫಲಗಳ ಅನುಪಾತ.
ಯೂಕ್ಲಿಡನ ಭಾಗಾಕಾರದ ಅನುಪ್ರಮೇಯವನ್ನು ನಿರೂಪಿಸಿ.
ಸಮಾಂತರ ಶ್ರೇಢಿಯಲ್ಲಿ ಮೊದಲ ಪದ -4 ಮತ್ತು ಸಾಮಾನ್ಯ ವ್ಯತ್ಯಾಸ -2 ಆದರೆ ಈ ಶ್ರೇಢಿಯ 6 ನೇ ಪದ ಕಂಡುಹಿಡಿಯಿರಿ.
`x^(3) - 6x^(2) + 6x +K `ಇದು (x-3) ರಿಂದ ನಿಶ್ಶೇಷವಾಗಿ ಭಾಗವಾದರೆ K ನ ಜೆಲೆಯನ್ನು ಕಂಡುಹಿಡಿಯಿರಿ.
ವರ್ಗ ಸಮೀಕರಣ `ax^(2) + bx +c =0` ಆದರೆ ಇದರ ಮೂಲಗಳನ್ನು ಬರೆಯಿರಿ.
`sin60^circ . cos30^circ + sin30^circ . cos60^circ` ನ ಬೆಲೆಯನ್ನು ಕಂಡುಹಿಡಿಯಿರಿ.
`tantheta = 3/4` ಮತ್ತು `sectheta = 5/4` ಆದರೆ `sec^(2) theta - tan^(2) theta` ದ ಬೆಲೆಯನ್ನು ಕಂಡುಹಿಡಿಯಿರಿ.
ಕೆಳಗಿನ ಚತುರ್ಭುಜಗಳು ಸಮರೂಪವೇ? ಇಲ್ಲವೆ ತಿಳಿಸಿ,
ಈ ಘನಾಕೃತಿಯ ವಕ್ರಮೇಲ್ಮೈ ವಿಸ್ತೀರ್ಣವೇನು?
`3 + 2 sqrt 5 `ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.
ಎರಡು ಸಂಖ್ಯೆಗಳ ವರ್ಗಗಳ ವ್ಯತ್ಯಾಸವು 180 ಆಗಿದೆ . ಚಿಕ್ಕ ಸಂಖ್ಯೆಯ ವರ್ಗವು ದೊಡ್ಡ ಸಂಖ್ಯೆಯ ಎಂಟರಷ್ಟಿದ್ದರೆ ಆ ಎರಡು ಸಂಖ್ಯೆಗಳನ್ನು ಕಂಡುಹಿಡಿಯಿರಿ.
ABCD ಸಮಾಂತರ ಚತುರ್ಭುಜದ AD ಬಾಹುವನ್ನು ವೃದ್ದಿಸಿದ ಭಾಗದಲ್ಲಿ E ಬಿಂದುವಿದೆ ಮತ್ತು BE ಮತ್ತು CD ಗಳು ಪರಸ್ಪರ F ಬಿಂದುವಿನಲ್ಲಿ ಛೇದಿಸಿದರೆ `triangleABE` ~ `triangleCFB` ಎಂದು ಸಾದಿಸಿ. .
ABC ಯು ಸಮದ್ವಿಬಾಹು ತ್ರಿಭುಜದಲ್ಲಿ C ಯು ಲಂಬಕೋನವಾಗಿದೆ `AB^(2) = 2AC^(2)` ಎಂದು ಸಾಧಿಸಿ
ಒಂದು ಆಟದಲ್ಲಿ ಒಂದು ರೂಪಾಯಿಯ ಒಂದು ನಾಣ್ಯವನ್ನು 3 ಸಲ ಚಿಮ್ಮಿಸಲಾಗುತ್ತದೆ ಮತ್ತು ಪ್ರತಿ ಸಲದ ಫಲಿತವನ್ನು ದಾಖಲಿಸಲಾಗುತ್ತದೆ. ಹನೀಫನು, ಪ್ರತಿ ಸಲವೂ ಒಂದೇ ಫಲಿತಾಂಶ ಅಂದರೆ, 3 ಶಿರಗಳು ಅಥವಾ 3 ಪುಚ್ಛಗಳು ಬಂದರೆ, ಆಟದಲ್ಲಿ ಗೆಲ್ಲುತ್ತಾನೆ. ಇಲ್ಲದಿದ್ದರೆ ಸೋಲುತ್ತಾನೆ. ಹನೀಫನು ಆಟದಲ್ಲಿ ಸೋಲುವ ಸಂಭವನೀಯತೆಯನ್ನು ಲೆಕ್ಕಾಚಾರ ಮಾಡಿ.
ಎರಡು ಏಕಕೇಂದ್ರಿಯ ವೃತ್ತಗಳ ತ್ರಿಜ್ಯಗಳು 5cm ಮತ್ತು 3 cm ಆಗಿವೆ. ಚಿಕ್ಕ ವೃತ್ತಕ್ಕೆ ಸ್ಪರ್ಶಿಸುವಂತೆ ದೊಡ್ಡ ವೃತ್ತದ ಜ್ಯಾದ ಉದ್ದವನ್ನು ಕಂಡುಹಿಡಿಯಿರಿ.
`cottheta - tantheta `= `(2cos^(2)theta-1)`/ `sinthetacostheta` ಎಂದು ಸಾಧಿಸಿ.
A ಲಘುಕೋನವಾದಾಗ `(frac{1 + tanA}{ 1 + cotA})^2 = tan^2 A` ಎಂದು ಸಾಧಿಸಿ.
ಶೃಂಗ ಬಿಂದುಗಳು (1, -1), (-4, 6) ಮತ್ತು (-3, -5) ಆಗಿರುವ ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಒಂದು ಭಿನ್ನರಾಶಿಯ ಅಂಶದಿಂದ 1ನ್ನು ಕಳೆದಾಗ ಅದು 1/3 ಆಗುತ್ತದೆ ಮತ್ತು ಆ ಭಿನ್ನರಾಶಿಯ ಛೇದಕ್ಕೆ 8ನ್ನು ಸೇರಿಸಿದಾಗ ಅದು 1/4 ಆಗುತ್ತದೆ. ಹಾಗಾದರೆ ಆ ಭಿನ್ನರಾಶಿಯನ್ನುಕಂಡುಹಿಡಿಯಿರಿ.
ಒಂದು ಆಯತದ ಉದ್ದವನ್ನು 5 ಮಾನಗಳಷ್ಟು ಕಡಿಮೆಗೊಳಿಸಿ, ಅಗಲವನ್ನು 3 ಮಾನಗಳಷ್ಟು ಹೆಚ್ಚಿಸಿದರೆ ಅದರ ವಿಸ್ತೀರ್ಣವು 9 ಚದರ ಮಾನಗಳಷ್ಟು ಕಡಿಮೆಯಾಗುತ್ತದೆ. ಉದ್ದವನ್ನು 3 ಮಾನಗಳಷ್ಟು ಮತ್ತು ಅಗಲವನ್ನು 2 ಮಾನಗಳಷ್ಟು ಹೆಚ್ಚಿಸಿದರೆ, ವಿಸ್ತೀರ್ಣವು 67 ಚದರ ಮಾನಗಳಷ್ಟು ಹೆಚ್ಚಾಗುತ್ತದೆ.ಆಯತದ ಉದ್ದ, ಅಗಲಗಳನ್ನುಕಂಡುಹಿಡಿಯಿರಿ.
`x^(4) - 5x^(3) + x^(2) +Kx -12`, `x^(2) -5x +4` ರಿಂದ ಸಂಪೂರ್ಣವಾಗಿ ಭಾಗವಾದರೆ K ನ ಬೆಲೆಯನ್ನು ಕಂಡುಹಿಡಿಯಿರಿ.
ಒಂದು ಕಿರು ಪರೀಕ್ಷೆಯಲ್ಲಿ ಶಿಫಾಲಿಯು ಗಣಿತ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಪಡೆದ ಅಂಕಗಳ ಮೊತ್ತ 30 ಆಗಿದೆ. ಅವಳು ಗಣಿತದಲ್ಲಿ ಇನ್ನು 2 ಹೆಚ್ಚು ಅಂಕಗಳನ್ನು ಮತ್ತು ಇಂಗ್ಲೀಷನಲ್ಲಿ 3 ಕಡಿಮೆ ಅಂಕಗಳನ್ನು ಪಡೆದಿದ್ದರೆ, ಆಗ ಆ ಅಂಕಗಳ ಗುಣಲಬ್ಧ 210 ಆಗುತಿತ್ತು ಅವಳ ಗಣಿತ ಮತ್ತು ಇಂಗ್ಲೀಷನಲ್ಲಿ ಪಡೆದ ಅಂಕಗಳನ್ನು ಕಂಡುಹಿಡಿಯಿರಿ.
`(1 /x+1) + (2/x+2) = (4/x+4)` ನ್ನು ಬಿಡಿಸಿ.
(0, 0) (5, 5) ಮತ್ತು (-5. 5) ಗಳು ಸಮದ್ವಿಬಾಹು ತ್ರಿಭುಜದ ಶೃಂಗಗಳು ಎಂದು ಸಾಧಿಸಿ.
ಕೊಟ್ಟಿರುವ ಶೃಂಗ ಬಿಂದುಗಳು A(2, -2) B(14, 10) C(11, 13) ಮತ್ತು D(-1, 1) ಆಯತದ ಶೃಂಗಬಿಂದುಗಳಾಗಿನೆ ಎಂದು ಸಾಧಿಸಿ.
ಒಂದು ಗಿಡದ 40 ಎಲೆಗಳ ಉದ್ದಗಳನ್ನು ಸಮೀಪದ ಮಿಲಿಮೀಟರ್‌ಗೆ ಸರಿಯಾಗುವಂತೆ ಅಳತೆ ಮಾಡಿದೆ. ಪಡೆದ
ದತ್ತಾಂಶಗಳನ್ನು ಕೆಳಗಿನ ಕೋಷ್ಟಕದಲ್ಲಿ ಪ್ರತಿನಿಧಿಸಿದೆ.ಎಲೆಗಳ ಉದ್ದಗಳ ಮಧ್ಯಾಂಕವನ್ನು ಕಂಡುಹಿಡಿಯಿರಿ.
ಒಂದು ವೃತ್ತಕ್ಕೆ ಅದರ ಬಾಹ್ಯಬಿಂದುವಿನಿಂದ ಎಳೆದ ಸ್ಪರ್ಶಕಗಳು ಸಮಾನವಾಗಿರುತ್ತದೆ. ಎಂದು ಸಾಧಿಸಿ.
3cm ತ್ರಿಜ್ಯವುಳ್ಳ ವೃತ್ತವನ್ನು ಚೌಕದಲ್ಲಿರಿಸಲಾಗಿದೆ. ಶೇಡ್ ಮಾಡಿರುವ ಭಾಗದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ABCD ವರ್ಗದಲ್ಲಿ ಬಾಹುವನ ಅಳತೆ 28cm. ಚಿತ್ರದಲ್ಲಿ ತೋರಿಸಿರುವಂತೆ ಶೇಡ್ ಮಾಡಿರುವ ಭಾಗದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
9,7, 5... ಮತ್ತು 24, 21, 18.. ಈ ಎರಡು ಸಮಾಂತರ ಶ್ರೇಢಿಗಳ n ನೇ ಪದ ಸಮವಾಗಿದೆ. ಆದ್ದರಿಂದ n ನ ಬೆಲೆ ಹಾಗೂ n ನೇ ಪದವನ್ನು ಕಂಡುಹಿಡಿಯಿರಿ.
ಒಂದು ಸಮಾಂತರ ಶ್ರೇಢಿಯ 11ನೇ ಪದ ಮತ್ತು 18ನೇ ಪದಗಳ ಅನುಪಾತವು 2:3 ಆಗಿದೆ. 5ನೇ ಪದ ಹಾಗೂ 21ನೇ ಪದಗಳ ಅನುಪಾತ ಕಂಡುಹಿಡಿಯಿರಿ. ಹಾಗೆಯೇ ಮೊದಲ ಐದು ಪದಗಳ ಮೊತ್ತ ಹಾಗೂ ಮೊದಲ 21 ಪದಗಳ ಮೊತ್ತಗಳಿಗಿರುವ ಅನುಪಾತವನ್ನು ಕಂಡುಹಿಡಿಯಿರಿ.
'ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ'' . ಎಂದು ಸಾಧಿಸಿ.
`5x - y= 5` ಮತ್ತು `3x -y = 3` ಈ ಸಮೀಕರಣದ ಜೋಡಿಗಳನ್ನು ನಕ್ಷಾಕ್ರಮದಿಂದ ಬಿಡಿಸಿ.
`1cdot6m` ಎತ್ತರದ ಪ್ರತಿಮೆಯೊಂದನ್ನು ಒಂದು ಪೀಠದ ಮೇಲ್ಭಾಗದಲ್ಲಿ ಇರಿಸಲಾಗಿದೆ. ನೆಲದ ಮೇಲಿನ ಒಂದು ಬಿಂದುವಿನಿಂದ ಪ್ರತಿಮೆಯ ಮೇಲ್ತುದಿಯ ಉನ್ನತ ಕೋನವು `60^o` ಮತ್ತು ಅದೇ ಬಿಂದುವಿನಿಂದ ಪೀಠದ ಮೇಲ್ತುದಿಯ ಉನ್ನತ ಕೋನವು `45^o` ಆಗಿದೆ. ಪೀಠದ ಎತ್ತರವನ್ನು ಕಂಡುಹಿಡಿಯಿರಿ.
Example questions and complete solutions for chapter ನೂತನ ಮಾದರಿ ಪ್ರಶ್ನೆಪತ್ರಿಕೆ 1 of CAMBRIDGE MATHS (KANNADA) of Class 10