Class 10 | MATHS |
Chapter | ನೂತನ ಮಾದರಿ ಪ್ರಶ್ನೆ ಪತ್ರಿಕೆ-3 |
CAMBRIDGE PUBLICATION(KANNAD) | Example |
Number Of Questions | 41 |
Academic Year | 2023-24 |
(0,4) (0,0) ಮತ್ತು (3,0) ಹೊಂದಿರುವ ತ್ರಿಭುಜದ ಸುತ್ತಳತೆ
-5 ಮತ್ತು 4 ಶೂನ್ಯತೆಗಳನ್ನು ಹೊಂದಿರುವ ಬಹುಪದೋಕ್ತಿ
P(E) = 0.05, ಆದರೆ "E" ಅಲ್ಲದ ಘಟನೆಯ ಸಂಭವನೀಯ ಎಷ್ಟು?
ಒಂದು ಗೋಳದ ವ್ಯಾಸ d ಅದರ ಫನಫಲ
ಕೊಟ್ಟಿರುವ ಎರಡು ರೆಖಾತ್ಮಕ ಸಮೀಕರಣಗಳು ಸ್ಥಿರತೆಯನ್ನು ಹೊಂದಿದ್ದಾಗ ಆ ರೇಖೆಗಳು
A(-2 ,-5) ಮತ್ತು B(2,5) ಬಿಂದುಗಳಿಗಿರುವ AB ರೇಖಾಖಂಡದ ಲಂಬಾರ್ಧಕಗಳು ಸೇರುವ ಬಿಂದು
ಮೂಲ 3 ಆಗಿರುವ ಈ ಸಮೀಕರಣ `Kx^2 - 7x + 3 `, ದಲ್ಲಿ K ನ ಬೆಲೆ
ಥೇಲ್ಸ್ ನ ವಿಲೋಮ ಪ್ರಮೇಯವನ್ನು ನಿರೂಪಿಸಿ.
O ಕೇಂದ್ರವಿರುವ ವೃತ್ತಕ್ಕೆ P ಬಿಂದುವಿನಿಂದ ಎಳೆದ ಸ್ಪರ್ಶಕಗಳಾದ PA ಮತ್ತು PB ಗಳ ನಡುವಿನ ಕೋನ `100^o` ಆದರೆ `angle POA` ದ ಅಳತೆಯನ್ನು ಕಂಡುಹಿಯಿರಿ.
2520ರ ಅವಿಭಾಜ್ಯ ಅಪವರ್ತನಗಳನ್ನು `2^3 *3^p * q * 7` ಪ್ರತಿನಿಧಿಸಿದಾಗ p, q ಗಳ ಬೆಲೆಗಳನ್ನು ಕಂಡುಹಿಡಿಯಿರಿ.
P ಮತ್ತು `frac{2}{p}` ಗಳು `x^2+ 4x + 2a` ನ ಶೂನ್ಯತೆಗಳಾದರೆ a ಬೆಲೆಯನ್ನು ಕಂಡುಹಿಡಿಯಿರಿ.
`(alpha, beta)` ಮತ್ತು ಮೂಲ ಬಿಂದು ಗಳಿರುವ ದೂರವನ್ನು ಕಂಡು ಹಿಡಿಯಿರಿ.
ಕೆಳಗಿನ ಪ್ರತಿ ಸಂಖ್ಯೆಯನ್ನು ಅದರ ಅವಿಭಾಜ್ಯ ಅಪವರ್ತನಗಳ ಗುಣಲಬ್ಧವಾಗಿ ವ್ಯಕ್ತಪಡಿಸಿ. 7429
ಕೆಳಗಿನ ಸಮಾಂತರ ಶ್ರೇಢಿಗಳ ಮೊತ್ತವನ್ನು ಕಂಡುಹಿಡಿಯಿರಿ. (i) 2, 7, 12, ......, ರ 10 ಪದಗಳವರೆಗೆ.
ABC ಯು ಸಮದ್ವಿಬಾಹು ತ್ರಿಭುಜದಲ್ಲಿ C ಯು ಲಂಬಕೋನವಾಗಿದೆ `AB^(2) = 2AC^(2)` ಎಂದು ಸಾಧಿಸಿ
3x - y = 3 ಮತ್ತು 9x - 3y = 9 , ಈ ಸಮೀಕರಣ ಬಿಡಿಸಿ x ಮತ್ತುy ಬೆಲೆಗಳನ್ನು ಕಂಡುಹಿಡಿಯಿರಿ.
ಎರಡು ಸಂಖ್ಯೆಗಳ ವ್ಯತ್ಯಾಸ 26 ಮತ್ತು ಒಂದು ಸಂಖ್ಯೆಯು ಇನ್ನೊಂದರ ಮೂರರಷ್ಟಿದೆ. ಅವುಗಳನ್ನು ಕಂಡುಹಿಡಿಯಿರಿ.
ಕಾರಿನ ಪ್ರತಿ ಚಕ್ರದ ವ್ಯಾಸ 80cm ಇದೆ. ಕಾರು ಪ್ರತಿ ಗಂಟೆಗೆ 60cm ಜವದಲ್ಲಿ ಚಲಿಸುವಾಗ ಪ್ರತಿ ಚಕ್ರವು 10 ನಿಮಿಷಗಳಲ್ಲಿ ಎಷ್ಟು ಸಂಪೂರ್ಣ ಸುತ್ತುಗಳನ್ನುಸುತ್ತುತ್ತದೆ?
ಚಿತ್ರದಲ್ಲಿ ಕೇಂದ್ರ O ಇರುವ ಎರಡು ಏಕ ಕೇಂದ್ರೀಯ ವೃತ್ತಗಳ ತ್ರಿಜ್ಯಗಳು ಕ್ರಮವಾಗಿ `7cm` ಮತ್ತು `14cm` ಇವೆ . ಮತ್ತು `angle AOC = 40^o` ಆದರೆ ಛಾಯಾಕೃತ ಭಾಗದ ವಿಸ್ತೀರ್ಣದಲ್ಲಿ ಕಂಡುಹಿಡಿಯಿರಿ.
AB ವ್ಯಾಸವಾಗಿರುವ ವೃತ್ತದ ಕೇಂದ್ರ (2, -3) ಮತ್ತು B (1, 4) ಆದರೆ, A ಬಿಂದುವಿನ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
`sqrt 5` ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.
ಈ ಕೆಳಗಿನ ವರ್ಗ ಬಹುಪದೋಕ್ತಿಗಳ ಶೂನ್ಯಗಳನ್ನು ಕಂಡುಹಿಡಿಯಿರಿ ಹಾಗೂ ಶೂನ್ಯಗಳು ಮತ್ತು ಸಹಗುಣಗಳು ನಡುವಿನ ಸಂಬಂಧವನ್ನು ತಾಳೆ ನೋಡಿ. `x^2 - 2x - 8`
`3x^4-4x^3-6x^2+4` ಕ್ಕೆ ಎಷ್ಟನ್ನು ಕೂಡಿದಾಗ ಆದು `x^2 - 2` ರಿಂದ ನಿತ್ಯೇಷವಾಗಿ ಭಾಗವಾಗುತ್ತದೆ.
ವರ್ಗ ಸಮೀಕರಣಗಳ ಮೂಲಗಳನ್ನು ವರ್ಗ ಸಮೀಕರಣದ ಸೂತ್ರದ ಸಹಾಯದಿಂದ ಕಂಡುಹಿಡಿಯಿರಿ. (i) `4x^2` + `4sqrt3x` + 3 = 0
A,B ಮತ್ತು C ಗಳು `triangle ABC` ಯ ಒಳಕೋನಗಳಾದರೆ, `sin (frac{B + C}{2})=cos frac{A}{2}`ಎಂದು ತೋರಿಸಿ.
ಬಿರುಗಾಳಿಗೆ ಸಿಕ್ಕಿ ಒಂದು ಮರವು ಮುರಿದು, ನೆಲಕ್ಕೆ ತಾಗಿದಾಗ ನೆಲದೊಂದಿಗೆ `30^o` ಕೋನವನ್ನು ಉಂಟುಮಾಡಿದೆ ಮತ್ತು ಮರದ ತುದಿಯು ಮರದ ಬುಡದಿಂದ 8 m ದೂರದಲ್ಲಿ ನೆಲಕ್ಕೆ ತಾಗಿದೆ. ಹಾಗಾದರೆ ಮುರಿದು ಬೀಳುವ ಮುನ್ನ ಮರದ ಎತ್ತರ ಎಷ್ಟಿತ್ತೆಂದು ಕಂಡುಹಿಡಿಯಿರಿ
ಸಮುದ್ರ ಮಟ್ಟದಿಂದ 75m ಎತ್ತರದಲ್ಲಿರುವ ದೀಪಸ್ತಂಭವೊಂದರ ಮೇಲಿನಿಂದ ಎರಡು ಹಡಗುಗಳನ್ನು ನೋಡಿದಾಗ ಉಂಟಾದ ಅವನತ ಕೋನಗಳು ಕ್ರಮವಾಗಿ 30 ° ಮತ್ತು 45 ° ಆಗಿದೆ , ದೀಪಸ್ತಂಭದ ಒಂದೇ ಪಾರ್ಶ್ವದಲ್ಲಿ ಒಂದು ಹಡಗಿನ ಹಿಂದೆ ಮತ್ತೊಂದಿದ್ದರೆ ಎರಡು ಹಡಗುಗಳಿಗಿರುವ ದೂರವನ್ನು ಕಂಡುಹಿಡಿಯಿರಿ .
ಒಂದು ದಾಳವನ್ನು 2 ಸಲ ಎಸೆಯಲಾಗಿದೆ. ಕನಿಷ್ಟ ಒಂದು ಸಲ 5 ಮೇಲೆ ಬರುವ ಸಂಭವನೀಯತೆಯು ಎಷ್ಟು? (ಸುಳುಹು: ಒಂದು ದಾಳವನ್ನು ಎರಡು ಸಲ ಎಸೆಯುವುದು ಮತ್ತು ಎರಡು ದಾಳಗಳನ್ನು ಏಕಕಾಲದಲ್ಲಿ ಎಸೆಯುವುದು, ಈ ಎರಡೂ ಪ್ರಯೋಗಗಳನ್ನು ಒಂದೇ ಎಂದು ಪರಿಗಣಿಸುವುದು]
ಒಂದು ದಾಳವನ್ನು 2 ಸಲ ಎಸೆಯಲಾಗಿದೆ. ಕನಿಷ್ಟ ಒಂದು ಸಲ 5 ಮೇಲೆ ಬರುವ ಸಂಭವನೀಯತೆಯು ಎಷ್ಟು? (ಸುಳುಹು: ಒಂದು ದಾಳವನ್ನು ಎರಡು ಸಲ ಎಸೆಯುವುದು ಮತ್ತು ಎರಡು ದಾಳಗಳನ್ನು ಏಕಕಾಲದಲ್ಲಿ ಎಸೆಯುವುದು, ಈ ಎರಡೂ ಪ್ರಯೋಗಗಳನ್ನು ಒಂದೇ ಎಂದು ಪರಿಗಣಿಸುವುದು]
ಒಂದು ಔಷದದ ಕ್ಯಾಪುಲ್‌ನ ಆಕಾರವು. ಒಂದು ಸಿಲಿಂಡರಿನ ಪ್ರತಿ ಪಾದಗಳಲ್ಲಿ ಎರಡು ಅರ್ಧಗೋಳವನ್ನು ಅಂಟಿನದೆ. ಕ್ಯಾಪ್ಸುಲ್‌ನ ಸಂಪೂರ್ಣ ಉದ್ದವು 14 mm ಮತ್ತು ಅದರ ವ್ಯಾಸವು 5mm ಇದೆ. ಅದರ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ ಲಂಬವಾಗಿರುತ್ತದೆ. ಎಂದು ಸಾಧಿಸಿ.
ಕೆಳಗಿನ ಸಮಸ್ಯೆಗಳಿಗೆ ರೇಖಾತ್ಮಕ ಸಮೀಕರಣಗಳ ಜೋಡಿಗಳನ್ನು ವರ್ಜಿಸುವ ವಿಧಾನದಿಂದ ಅವುಗಳಿಗೆ ಪರಿಹಾರಗಳನ್ನೂ (ಇರುವಾದರೆ) (i) ಎರಡಂಕೆಯ ಒಂದು ಸಂಖ್ಯೆಯ ಅಂಕೆಗಳ ಮೊತ್ತ 9 ಇದರಲ್ಲಿರುವ ಅಂಕೆಗಳ ಕ್ರಮವನ್ನು ಅದಲು ಬದಲು ಮಾಡಿದಾಗ ಸಿಗುವ ಸಂಖ್ಯೆಯನ್ನು ಇಮ್ಮುಡಿಗೊಳಿಸಿದರೆ, ಅದು ಮೊದಲನೇ ಸಂಖ್ಯೆಯ ಒಂಬತ್ತರಷ್ಟಕ್ಕೇ ಸಮವಾಗುತ್ತದೆ ಆ ಸಂಖ್ಯೆಯನ್ನು ಕಂಡುಹಿಡಿಯಿರಿ.
k ಯ ಯಾವಬೆಲೆಗೆ ಕೆಳಗೆ ನೀಡಿದ ರೇಖಾತ್ಮಕ ಸಮೀಕರಣಗಳ ಜೋಡಿಯು ಯಾವುದೇಪರಿಹಾರವನ್ನು ಹೊಂದಿರುವುದಿಲ್ಲ? `3x + y =1` `(2k-1)x + (k-1)y = 2k +1`
ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(cosecA-sinA)(secA-cosA)=1/(tanA+cotA)`
ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(sin theta - 2sin^3 theta) / (2cos^3 theta - cos theta) = tan theta`
ಕೆಳಗಿನ ಆವೃತಿ ವಿತರಣೆಯ ಒಂದು ಪ್ರದೇಶದ 68 ಗ್ರಾಹಕರ ಮಾಸಿಕ ವಿದ್ಯುತ್ ಬಳಕೆಯನ್ನು ನೀಡುತ್ತದೆ. ಈ ದತ್ತಾಂಶಗಳ ಸರಾಸರಿಯನ್ನು ಕಂಡು ಹಿಡಿಯಿರಿ.
ಒಂದು ತರಗತಿಯ 35 ವಿದ್ಯಾರ್ಥಿಗಳ ತೂಕಗಳು, ಅವರ ವೈದ್ಯಕೀಯ ತಪಾಸಣೆಯ ಸಮದರ್ಭದಲ್ಲಿ ಈ ಕೆಳಗಿನಂತೆ ದಾಖಲಾದವು.
ಈ ದತ್ತಾಂಶಗಳಿಗೆ ಕಡಿಮೆ ವಿಧಾನದ ಓಜೀವ್ ಎಳೆಯಿರಿ.
ಸಮಾಂತರ ಶ್ರೇಡಿಯಲ್ಲಿರುವ ಮೊದಲ ಮೂರು ಪದಗಳ ಮೊತ್ತವು 24 ಮತ್ತು ಆ ಪದಗಳ ವರ್ಗಗಳ ಮೊತ್ತವು 224 ಆದರೆ, ಸಮಾಂತರ ಶ್ರೇಡಿಯಲ್ಲಿರುವ ಆ ಮೂರು ಪದಗಳನ್ನು ಕಂಡುಹಿಡಿಯಿರಿ.
`20m` ಆಳ 7 m ವ್ಯಾಸವನ್ನು ಹೊಂದಿರುವ ಒಂದು ಬಾವಿಯನ್ನು ತೋಡಿದೆ ಮತ್ತು ಭೂಮಿಯಿಂದ ತೆಗೆದ ಮಣ್ಣನ್ನು ಸಮವಾಗಿ ಹರಡಿ `22m` ಮತ್ತು `14m` ಅಗಲವಿರುವಂತೆ ವೇದಿಕೆಯನ್ನು ನಿರ್ಮಿಸಲಾಗಿದೆ.ಆ ವೇದಿಕೆಯ ಎತ್ತರವನ್ನು ಕಂಡುಹಿಡಿಯಿರಿ.
ವರ್ಗ ಘನಾಕೃತಿಯ ಮರದ ವಸ್ತುವಿನ ಒಂದು ಮುಖದ ಒಳಭಾಗವು ತಗ್ಗಾಗುವಂತೆ ಅರ್ಧಗೋಳವನ್ನು ಕೊರೆಯಲಾಗಿದೆ. ವರ್ಗ ಘನದ ಅಂಚಿನ ಉದ್ದವು ಅರ್ಧಗೋಳದ ವ್ಯಾಸ L ಗೆ ಸಮನಾಗಿದ್ದರೆ, ನೂತನವಾಗಿ ಉಂಟಾದ ಘನದ ಒಟ್ಟು ಮೇಲ್ಮೆ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಪೈಥಾಗೊರಸ್ ನ ಪ್ರಮೇಯವನ್ನು ನಿರೂಪಿಸಿ ಮತ್ತು ಸಾಧಿಸಿ.
Example questions and complete solutions for chapter ನೂತನ ಮಾದರಿ ಪ್ರಶ್ನೆ ಪತ್ರಿಕೆ-3 of CAMBRIDGE MATHS (KANNADA) of Class 10