Class 10 | MATHS |
Chapter | ನೂತನ ಮಾದರಿ ಪ್ರಶ್ನೆ ಪತ್ರಿಕೆ 7 |
CAMBRIDGE PUBLICATION(KANNAD) | Example |
Number Of Questions | 38 |
Academic Year | 2023-24 |
`triangleABC` ಮತ್ತು `triangleBDE` ಗಳು ಎರಡು ಸಮಬಾಹು ತ್ರಿಭುಜಗಳು Dಯು BC ಯ ಮಧ್ಯಬಿಂದು ಆದರೆ `triangleABC` ಮತ್ತು `triangleBDE` ಗಳ ವಿಸ್ತರಣಗಳ ಅನುಪಾತ. (A) 2 : 1 (B) 1 : 2 (C) 4 : 1 (D) 1 : 4
ಸಮಾಂತರ ಶ್ರೇಢಿಯ 'n' ನೇ ಪದವು `9-5n` ಆದಾಗ ಅದರ 15ನೇ ಪದವು ____
`cos 30^circ - sin 60^circ` ನ ಜೆಲೆ _____
ಒಂದು ಶಂಕುವಿನ ತ್ರಿಜ್ಯ(r) , ಎತ್ತರ(h) ಮತ್ತು ಓರೆ ಎತ್ತರ (l) ಆದರೆ ಅದರ ಪಾರ್ಶ್ವ ಮೇಲ ವಿಸ್ತೀರ್ಣ ಕಂಡುಹಿಡಿಯುವ ಸೂತ್ರವು.
ಅಸಂಭವ ಘಟನೆಯ ಸಂಭವನೀಯತೆ ಎಷ್ಟು?
120 ನ್ನು ಅವಿಭಾಜ್ಯ ಅಪವರ್ತನಗಳ ಗುಣಲಬ್ಧಗಳಾಗಿ ಬರೆದಾಗ.
ಒಂದು ವರ್ಗ ಬಹುಪದೋಕ್ತಿಯ ಡಿಗ್ರಿ ಎಷ್ಟು?
`sinA =3/4` ಆದರೆ tan A ಬೆಲೆಯನ್ನು ಕಂಡುಹಿಡಿಯಿರಿ.
`b^(2) - 4ac> 0` ಆದರೆ ವರ್ಗ ಸಮೀಕರಣದ ಮೂಲಗಳ ಸ್ವಭಾವ ತಿಳಿಸಿ.
ಫೈಥಾಗೊರಸ್‌ನ ವಿಲೋಮ ಪ್ರಮೇಯವನ್ನು ನಿರೂಪಿಸಿ.
ತ್ರಿಜ್ಯ7 cm ಇರುವ ಗೋಳದ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಮೊದಲ 'n' ಧನ ಪೂರ್ಣಾಂಕಗಳ ಮೊತ್ತ ಕಂಡು ಹಿಡಿಯುವ ಸೂತ್ರ ಬರೆಯಿರಿ.
`P(t)=t^(2)-15` ಈ ಬಹುಪದೋಕ್ತಿಯು ಶೂನ್ಯತೆಗಳನ್ನು ಕಂಡುಹಿಡಿಯಿರಿ.
`17 =6 xx2 +5 `ಇದನ್ನು ಯೂಕ್ಷಿಡ್ ಭಾಗಾಕಾರ ಅನುಪ್ರಮೇಯ a = bq +r, ಗೆ ಹೋಲಿಸಿದಾಗ ಶೇಷವನ್ನು ಸೂಚಿಸುವ ಸಂಖ್ಯೆ ಯಾವುದು?
ಪಕ್ಕದ ಚಿತ್ರದಲ್ಲಿ `/_AOB = 105^circ`, AP & BP ಗಳು 'O' ಕೇಂದ್ರವುಳ್ಳ ವೃತ್ತಕ್ಕೆ ಸ್ಪರ್ಶಕಗಳಾಗಿದ್ದರೆ `/_APB` ನ
ಬೆಲೆಯನ್ನು ಕಂಡುಹಿಡಿಯಿರಿ.
A,B ಮತ್ತು C ಗಳು `triangle ABC` ಯ ಒಳಕೋನಗಳಾದರೆ, `sin (frac{B + C}{2})=cos frac{A}{2}`ಎಂದು ತೋರಿಸಿ.
ಕೆಳಗಿನ ಪ್ರತಿಯೊಂದು ವರ್ಗ ಸಮೀಕರಣವು ಸಮನಾದ ಎರಡು ಮೂಲಗಳನ್ನು ಹೊಂದಿದ್ದರೆ k ಯ ಬೆಳೆಯನ್ನು ಕಂಡುಹಿಡಿಯಿರಿ. (i) `2x^2` + kx + 3 = 0
6m ಮತ್ತು 11m ಉದ್ದದ ಎರಡು -ಕಂಬಗಳು ಸಮತಟ್ಟಾದನೆಲದ ಮೇಲೆ ನಿಂತಿವೆ. ಆ ಕಂಬಗಳ ಪಾದಗಳ ನಡುವಿನ ಅಂತರ 12m ಆದರೆ ಅವುಗಳ ತುದಿಗಳ ನಡುವಿನ ಅಂತರವೇನು?
'p' ಯ ಯಾವ ಬೆಲೆಗೆ ಕೆಳಗೆ ನೀಡಿದ ಸಮೀಕರಣಗಳ ಜೋಡಿಗೆ ಅನನ್ಯ ಪರಿಹಾರವಿರುತ್ತದೆ? `4x +py+ 8 =0` `2x + 2y +2 =0`
Q (0,1) ಬಿಂದುವು P (5,-3) ಮತ್ತು R (x,6) ರಿಂದ ಸಮಾನ ದೂರದಲ್ಲಿದ್ದರೆ, x ನ ಬೆಲೆಯನ್ನು ಕಂಡುಹಿಡಿಯಿರಿ. QR ಮತ್ತು PR ದೂರಗಳನ್ನು ಕೂಡಾ ಕಂಡುಹಿಡಿಯಿರಿ.
ಒಂದು ದಾಳವನ್ನು 2 ಬಾರಿ ಎಸೆಯಲಾಗಿದೆ ಮೇಲೆ ಬರುವ ಸಂಖ್ಯೆಗಳ ಗುಣಲಬ್ಧ 10 ಆಗಿರುವ ಸಂಭವನೀಯತೆ ಎಷ್ಟು?
`5 + sqrt 3` ಒಂದು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.
ಎರಡು ಕ್ರಮಾನುಗತ ಬೆಸ ಧನ ಪೂರ್ಣಾಂಕಗಳ ವರ್ಗಗಳ ಮೊತ್ತವು 290 ಆದರೆ ಆ ಪೂರ್ಣಾಂಕಗಳನ್ನು ಕಂಡುಹಿಡಿಯಿರಿ.
`(b-c) x^(2) +(c-a)x + (a-b)` = 0 ಸಮೀಕರಣದ ಮೂಲಗಳು ಸಮನಾಗಿದ್ದರೆ 2b = a+c ಎಂದು ಸಾಧಿಸಿ.
`x -3y -3 =0`, `3x - 9y-2 =0` ಈ ರೇಖಾತ್ಮಕ ಸಮೀಕರಣಗಳ ಜೋಡಿಗಳನ್ನು ಬಿಡಿಸಿ.
A ಮತ್ತು B ಗಳು ಕ್ರಮವಾಗಿ (-2, -2) ಮತ್ತು (2, -4) ಆಗಿದ್ದು AP = 3:7 AB ಆಗುವಂತೆ ರೇಖಾಕಂಡ AB ಯ ಮೇಲೆ ಇರುವ P ಬಿಂದುವಿನ ನಿರ್ದೆಶಾಂಕಗಳನ್ನು ಕಂಡುಹಿಡಿಯಿರಿ.
ಚಿತ್ರದಲ್ಲಿ ABC ಯು 14 ಸೆಂ.ಮೀ ತ್ರಿಜ್ಯವುಳ್ಳ ವೃತ್ತ ಚತುರ್ಥಕವಾಗಿದೆ ಮತ್ತು BC ವ್ಯಾಸವಾಗಿರುವಂತೆ ಒಂದು
ಆದ ವೃತ್ತವನ್ನು ಎಳೆದಿದೆ ಛಾಯೆಗೊಳಿಸಿದ ಭಾಗದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
`sqrt2` ಮತ್ತು ` -sqrt2` ಇವು `2x^(4)-3x^(3) -3x^(2)+ 6x-2` ರ ಎರಡು ಶೂನ್ಯತೆಗಳಾದರೆ ಬಹುಪದೋಕ್ತಿಯ ಉಳಿದ ಶೂನ್ಯತೆಗಳನ್ನು ಕಂಡುಹಿಡಿಯಿರಿ.
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳ ಉದ್ದವು ಸಮನಾಗಿರುತ್ತದೆ". ಎಂದು ಸಾಧಿಸಿ.
O' ವೃತ್ತ ಕೇಂದ್ರವನ್ನು ಹೊಂದಿರುವ ವೃತ್ತಕ್ಕೆ ಬಾಹ್ಯ ಬಿಂದು T ಯಿಂದ TP ಮತ್ತು TQ ಎರಡು ಸ್ಪರ್ಶಕಗಳನ್ನು ಎಳೆದಿದೆ `/_PTQ = 2/_OPQ` ಎಂದು ಸಾಧಿಸಿ.
ಕೆಳಗಿನ ದತ್ತಾಂಶಗಳಿಂದ ಬಹುಲಕ ಆಥವಾ ರೂಢಿಬೆಲೆ ಕಂಡುಹಿಡಿಯಿರಿ.
ಕೆಳಗಿನ ದತ್ತಾಂಶಗಳಿಂದ ಸರಾಸರಿ ಕಂಡುಹಿಡಿಯಿರಿ.
ಒಂದು ತರಗತಿಯ 35 ವಿದ್ಯಾರ್ಥಿಗಳ ತೂಕಗಳು ಅವರ ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ ಕೆಳಗಿನಂತೆ
ದಖಾಲಾದವು ಈ ದತ್ತಾಂಶಗಳಿಗೆ ಕಡಿಮೆ ವಿಧಾನದ ಓಜೀವ್ ರಚಿಸಿ.
ಸಮಾಂತರ ಶ್ರೇಢಿಯ 2ನೇ ಮತ್ತು 4ನೇ ಪದಗಳು ಕ್ರಮವಾಗಿ 14 ಮತ್ತು 18 ಆದರೆ ಮೊದಲ 51 ಪದಗಳ ಮೊತ್ತ ಕಂಡುಹಿಡಿಯಿರಿ.
`x +3y =6` & `2x-3y= 12` ಈ ರೇಖಾತ್ಮಕ ಸಮೀಕರಣಗಳನ್ನು ನಕ್ಷಾಕ್ರಮದಿಂದ ಬಿಡಿಸಿ.
'ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ'' . ಎಂದು ಸಾಧಿಸಿ.
ಗೋಪುರವೊಂದರ ಪಾದದಿಂದ 4m ಮತ್ತು 9m ದೂರದಲ್ಲಿ ಒಂದೇ ಸರಳರೇಖೆಯ ಮೇಲಿನ ಬಿಂದುಗಳ ಮೇಲಿನ ಬಿಂದುವಿನಿಂದ ಗೋಪುರದ ಮೇಲ್ತುದಿಗೆ ಉನ್ನತ ಕೋನಗಳು ಪರಸ್ಪರ ಪೂರಕಗಳಾಗಿವೆ. ಗೋಪುರದ ಎತ್ತರವು 6m ಎಂದು ಸಾಧಿಸಿ.
ಒಂದು ಬಹುಮಹಡಿ ಕಟ್ಟಡದ ಮೇಲಿನಿಂದ 8 ಮೀ ಎತ್ತರದ ಕಟ್ಟಡವೊಂದರ ಮೇಲ್ತುದಿ ಮತ್ತು ಪಾದಗಳನ್ನು ನೋಡಿದಾಗ ಉಂಟಾದ ಅವನತ ಕೋನಗಳು ಕ್ರಮವಾಗಿ `30^circ` ಮತ್ತು `45^circ` ಆಗಿದೆ. ಹಾಗಾದರೆ ಬಹುಮಹಡಿ ಕಟ್ಟಡದ ಎತ್ತರವನ್ನು ಮತ್ತು ಆ ಎರಡು ಕಟ್ಟಡಗಳ ನಡುವಿನ ದೂರವನ್ನು ಕಂಡುಹಿಡಿಯಿರಿ.
Example questions and complete solutions for chapter ನೂತನ ಮಾದರಿ ಪ್ರಶ್ನೆ ಪತ್ರಿಕೆ 7 of CAMBRIDGE MATHS (KANNADA) of Class 10