Class 10 | CHEMISTRY |
Chapter | ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು |
OSWAAL PUBLICATION | EXERCISE |
Number Of Questions | 100 |
Academic Year | 2023-24 |
`(Si+CrarrSiC)` ಈ ರಾಸಾಯನಿಕ ಸಮೀಕರಣವು ಇದಕ್ಕೆ ಉದಾಹರಣೆ
ಹೊಂದಿಸಿ ಬರೆಯಿರಿ
,
ರಾಸಾಯನಿಕ ಸಂಯೋಗ ಕ್ರಿಯೆ ಎಂದರೇನು?
ರಾಸಾಯನಿಕ ಕ್ರಿಯೆ ಎಂದರೇನು?
ಕಬ್ಬಿಣ ತುಕ್ಕು ಹಿಡಿಯುವುದು, ಕಬ್ಬಿಣ ದ್ರವಿಸುವುದು ಇವುಗಳಲ್ಲಿ ರಾಸಾಯನಿಕ ಕ್ರಿಯೆ ಯಾವುದು?
ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸುವಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ನಿಯಮವನ್ನು ಹೆಸರಿಸಿ ಮತ್ತು ನಿರೂಪಿಸಿ
ಭೌತ ಬದಲಾವಣೆ ಮತ್ತು ರಾಸಾಯನಿಕ ಬದಲಾವಣೆಗಳ ನಡುವಿನ ಒಂದು ಮೂಲಭೂತ ವ್ಯತ್ಯಾಸವನ್ನು ತಿಳಿಸಿ
ಸುಟ್ಟ ಸುಣ್ಣವನ್ನು ನೀರಿಗೆ ಹಾಕಿದಾಗ ಏನಾಗುತ್ತದೆ?
`(ZnCO_3)`ಗಾಳಿಯ ಸಂಪರ್ಕ ಸಿಗದಂತೆ ಕಾಯಿಸಿದಾಗ ಏನಾಗುತ್ತದೆ? ಸೂಕ್ತವಾದ ಸಮೀಕರಣವನ್ನು ಬರೆಯಿರಿ.
ಮೇಣದ ಬತ್ತಿ ಉರಿಯುವುದು, ಭೌತ ಬದಲಾವಣೆಯೋ ಅಥವಾ ರಾಸಾಯನಿಕ ಬದಲಾವಣೆಯೋ?
ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ. `FeSO_4(s) overset (ಉಷ್ಣ) underset (Fe_2O_3(s)+SO_2(g)+SO_3(g)) (rarr)`
ಲೆಡ್ ನೈಟ್ರೇಟ್ ಮತ್ತು ಪೊಟ್ಯಾಷಿಯಂ ಅಯೋಡೈಡ್ ದ್ರಾವಣಗಳನ್ನು ಬೆರೆಸಿದಾಗ ನಡೆಯುವ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆಯಿರಿ?
ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ. ಪ್ರಬಲ ಸಲ್ಫೂರಿಕ್ ಆಮ್ಲ `(H_2SO_4)`ಜೊತೆ ಇದ್ದಾಗ, ಎಥನಾಲ್ ಅನ್ನು ಎಥನೋಯಿಕ್ ಆಮ್ಲದ ಜೊತೆ ಬಿಸಿಮಾಡಿದರೆ ಈಥೈಲ್ ಅಸಿಟೇಟ್ ಉತ್ಪತಿಯಾಗುತ್ತದೆ.
ಪ್ರನಾಳ A ಮತ್ತು B ಗಳಲ್ಲಿ ಕ್ರಮವಾಗಿ ಸತುವಿನ ಸಲ್ಫೇಟ್ ಮತ್ತು ಸಿಲ್ವರ್ ನೈಟ್ರೇಟ್ ದ್ರಾವಣಗಳನ್ನು ತೆಗೆದುಕೊಳ್ಳಲಾಗಿದೆ. ತಾಮ್ರದ ಚೂರುಗಳನ್ನು ಎರಡೂ ಪ್ರನಾಳಗಳಿಗೆ ಹಾಕಲಾಗಿದೆ. ಎರಡು ಪ್ರನಾಳಗಳ ಪೈಕಿ ಯಾವುದರಲ್ಲಿ ರಾಸಾಯನಿಕ ಕ್ರಿಯೆಯನ್ನು ಗಮನಿಸುವಿರಿ ನಿಮ್ಮ ಉತ್ತರವನ್ನು ವೈಜ್ಞಾನಿಕ ಕಾರಣದೊಂದಿಗೆ ಸಮರ್ಥಿಸಿರಿ
ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ. ಪೊಟ್ಯಾಷಿಯಂ ಬ್ರೋಮೈಡ್, ಬೇರಿಯಂ ಅಯೋಡೈಡ್ ಜೊತೆ ವರ್ತಿಸುವುದು.
ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ. ಜಿಂಕ್ ಕಾರ್ಬೋನೇಟನ್ನು ಕಾಯಿಸುವುದು.
ಲೆಡ್ ನೈಟ್ರೇಟನ್ನು ಕಾಯಿಸಿದಾಗ ಯಾವ ಬಣ್ಣದ ಧೂಮವು ಹೊಮ್ಮುತ್ತದೆ. ಈ ಕ್ರಿಯೆಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ. ಈ ರಾಸಾಯನಿಕ ಕ್ರಿಯೆಯ ವಿಧವನ್ನು ಹೆಸರಿಸಿ.
ರಾಸಾಯನಿಕ ಕ್ರಿಯೆ ನಡೆದಿದೆ ಎಂಬುದನ್ನು ನಿರ್ಧರಿಸಲು ನಮಗೆ ನೆರವಾಗುವ ನಾಲ್ಕು ವೀಕ್ಷಣೆಗಳನ್ನು ಪಟ್ಟಿಮಾಡಿ
ರಾಸಾಯನಿಕ ಸಮೀಕರಣವನ್ನು ಸರಿದೂಗಿಸುವಾಗ ಅನುಸರಿಸುವ ನಿಯಮವನ್ನು ನಿರೂಪಿಸಿ
ರಾಸಾಯನಿಕ ಸಮೀಕರಣವನ್ನು ಸರಿದೂಗಿಸಿ : `(Fe+H_2Orarr Fe_3O_4+H_2)`
ಸುಣ್ಣದ ತಿಳಿ ನೀರಿನ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹಾಯಿಸಿದಾಗ ಏನನ್ನು ಗಮನಿಸುವಿರಿ? ಕಡಿಮೆ ಅವಧಿಗೆ
ಸುಣ್ಣದ ತಿಳಿ ನೀರಿನ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹಾಯಿಸಿದಾಗ ಏನನ್ನು ಗಮನಿಸುವಿರಿ? ದೀರ್ಘಅವಧಿಗೆ
ತಾಮ್ರದ ತಟ್ಟೆಯೊಂದನ್ನು ಸಿಲ್ವರ್ ನೈಟ್ರೇಟ್ ದ್ರಾವಣದಲ್ಲಿ ಮುಳಗಿಸಿದೆ. ಸ್ವಲ್ಪ ಸಮಯದ ನಂತರ ತಾಮ್ರದ ತಟ್ಟೆಯ ಮೇಲೆ ಒಂದು ಕಪ್ಪು ಪದರ ಉಂಟಾಗಿರುವುದು ಕಂಡು ಬರುತ್ತದೆ. ಈ ಕ್ರಿಯೆಗೆ ಕಾರಣ ತಿಳಿಸಿ ಮತ್ತು ಈ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆಯಿರಿ.
ಕಬ್ಬಿಣದ ತುಂಡೊಂದನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಸ್ವಲ್ಪ ಸಮಯ ಮುಳುಗಿಸಿಟ್ಟಾಗ ಕಬ್ಬಿಣದ ತುಂಡಿನ ಮೇಲೆ ಕಂದು ಬಣ್ಣದ ಲೇಪವುಂದು ಉಂಟಾಗುತ್ತದೆ. ದ್ರಾವಣದ ಬಣ್ಣದಲ್ಲಿ ಯಾವ ಬದಲಾವಣೆಯನ್ನು ಗಮನಿಸಲಾಗುತ್ತದೆ? ಹಾಗೆಯೇ ರಾಸಾಯನಿಕ ಕ್ರಿಯೆಗೆ ಸಮೀಕರಣ ಬರೆಯಿರಿ.
ಕಾಯಿಸಿದ ತಾಮ್ರದ (II) ಆಕ್ಸೈಡ್ ಮೇಲೆ ಹೈಡ್ರೋಜನ್ ಅನಿಲವನ್ನು ಹಾಯಿಸಿದಾಗ, ತಾಮ್ರ ಮತ್ತು ಹಬೆ ಉಂಟಾಗುತ್ತದೆ. ಈ ಕ್ರಿಯೆಗೆ ವಸ್ತುಗಳ ಸ್ಥಿತಿಗಳ ಸಹಿತ ಸರಿದೂಗಿಸಿದ ಸಮೀಕರಣ ಬರೆಯಿರಿ. ಇದು ಯಾವ ವಿಧದ ರಾಸಾಯನಿಕ ಕ್ರಿಯೆ?
ಈ ಕೆಳಗಿನ ಕ್ರಿಯೆಗಳಿಗೆ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ. ಹೈಡ್ರೋಜನ್ ಸಲ್ಫೈಡ್, ಸಲ್ಫರ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿ ಸಲ್ಫರ್ ಮತ್ತು ನೀರನ್ನು ಉಂಟುಮಾಡುತ್ತದೆ.
ಈ ಕೆಳಗಿನ ಕ್ರಿಯೆಗಳಿಗೆ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ. ಮೀಥೇನನ್ನು ಉರಿಸಿದಾಗ ಆಕ್ಸಿಜನ್ ಜೊತೆ ಸೇರಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಕೊಡುತ್ತದೆ. ಸರಿದೂಗಿಸಿದ ಸಮೀಕರಣದ ಅಗತ್ಯವೇನು?
ಈ ಕೆಳಗಿನ ಹೇಳಿಕೆಯನ್ನು ರಾಸಾಯನಿಕ ಸಮೀಕರಣ ರೂಪಕ್ಕೆ ಪರಿವರ್ತಿಸಿ ನಂತರ ಸರಿದೂಗಿಸಿ : "ರಿಬ್ಬನ್ ಮಾದರಿ ಇರುವ ಒಂದು ಲೋಹದ ಪಟ್ಟಿಯು ಕೋರೈಸುವ ಬಿಳಿ ಜ್ವಾಲೆಯೊಂದಿಗೆ ಉರಿದು ಬಿಳಿ ಪುಡಿಯಾಗಿ ಬದಲಾಗುತ್ತದೆ."
ಜಿಂಕ್ (ಸತು)ನ ಹರಳುಗಳನ್ನು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದೊಂದಿಗೆ ಕಾಯಿಸಿದಾಗ ಏನಾಗುತ್ತದೆ? ಈ ಕ್ರಿಯೆಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ. ಈ ಕ್ರಿಯೆಯಲ್ಲಿ ಉಂಟಾಗುವ ಪ್ರಮುಖ ಉತ್ಪನ್ನವನ್ನು ಹೆಸರಿಸಿ.
ದುರ್ಬಲ ನೈಟ್ರಿಕ್ ಆಮ್ಲದ ಜೊತೆಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂಗಳ ರಾಸಾಯನಿಕ ಕ್ರಿಯೆಗಳನ್ನು ಬರೆಯಿರಿ.
ಕೆಳಗಿನ ಕ್ರಿಯೆಗಳ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ. ಸಿಲ್ವರ್ ಬ್ರೋಮೈಡನ್ನು ಸೂರ್ಯನ ಬೆಳಕಿಗೆ ಒಡ್ಡಿದಾಗ ಅದು ಸಿಲ್ವರ್ ಮತ್ತು ಬ್ರೋಮೀನ್ ಆಗಿ ವಿಭಜಿಸಲ್ಪಡುತ್ತದೆ.
ಕೆಳಗಿನ ಕ್ರಿಯೆಗಳ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ. ಸೋಡಿಯಂ ಲೋಹವು ನೀರಿನೊಂದಿಗೆ ವರ್ತಿಸಿ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೋಜನ್ ಅನಿಲವನ್ನು ಉಂಟುಮಾಡುತ್ತದೆ.
ಪ್ರನಾಳದಲ್ಲಿರುವ ಜಿಂಕ್ ನ ತುಣುಕುಗಳ ಮೇಲೆ ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಯಲಾಗಿದೆ. ಇಲ್ಲಿ ರಾಸಾಯನಿಕ ಕ್ರಿಯೆ ನಡೆದಿದೆ ಎಂಬುದನ್ನು ಸೂಚಿಸುವ ಎರಡು ಗಮನಾರ್ಹ ಅಂಶಗಳನ್ನು ಪಟ್ಟಿಮಾಡಿ. `(HCl+ZnrarrZnCl_2+H_2)`
ಕೆಳಗಿನ ಹೇಳಿಕೆಗಳನ್ನು ಸರಿದೂಗಿಸಿದ ರಾಸಾಯನಿಕ ಸಮೀಕರಣಗಳಾಗಿ ಪರಿವರ್ತಿಸಿ : ಜಿಂಕ್, ಸಲ್ಫೂರಿಕ್ ಆಮ್ಲದ ಜೊತೆಗೆ ವರ್ತಿಸಿ ಜಿಂಕ್ ಸಲ್ಫೇಟ್ ಮತ್ತು ಹೈಡ್ರೋಜನ್ ಅನಿಲವನ್ನು ಉಂಟುಮಾಡುತ್ತದೆ.
ಕೆಳಗಿನ ಹೇಳಿಕೆಗಳನ್ನು ಸರಿದೂಗಿಸಿದ ರಾಸಾಯನಿಕ ಸಮೀಕರಣಗಳಾಗಿ ಪರಿವರ್ತಿಸಿ : ಮೆಗ್ನೀಷಿಯಂ, ಆಕ್ಸಿಜನ್‌ನೊಂದಿಗೆ ಉರಿದು ಮೆಗ್ನೀಷಿಯಂ ಆಕ್ಸೈಡನ್ನು ಕೊಡುತ್ತದೆ.
ರಾಸಾಯನಿಕ ಕ್ರಿಯೆಯನ್ನು ವ್ಯಾಖ್ಯಾನಿಸಿ. ರಾಸಾಯನಿಕ ಕ್ರಿಯೆ ನೆಡೆದಿದೆ ಎಂದು ತೀರ್ಮಾನಿಸಲು ನಮಗೆ ನೆರವಾಗುವ ಗಮನಾರ್ಹ ಅಂಶಗಳು ಯಾವುವು?
ʼವಿಭಜನ ಕ್ರಿಯೆʼ ಇದನ್ನು ವ್ಯಾಖ್ಯಾನಿಸಿ. ಉಷ್ಣವಿಭಜನ ಕ್ರಿಯೆ ಮತ್ತು ವಿದ್ಯುದ್ವಿಭಜನ ಕ್ರಿಯೆಗಳಿಗೆ ತಲಾ ಒಂದೊಂದು ಉದಾಹರಣೆ ಕೊಡಿ.
ನೈಟ್ರೋಜನ್ ಮತ್ತು ಹೈಡ್ರೋಜನ್‌ಗಳ ಸಂಯೋಗದಿಂದ ಅಮೋನಿಯಾ ಉತ್ಪತ್ತಿಯಾಗುವ ಕ್ರಿಯೆಗೆ, ರಾಸಾಯನಿಕ ಸಮೀಕರಣ ಸರಿದೂಗಿಸುವ ಹಂತಗಳನ್ನು ಬರೆಯಿರಿ?
ರಾಸಾಯನಿಕ ಸಮೀಕರಣವು ನೀಡುವ ನಾಲ್ಕು ಮಾಹಿತಿಗಳನ್ನು ತಿಳಿಸಿ.
ರಾಸಾಯನಿಕ ಕ್ರಿಯೆಗಳಲ್ಲಿ, ಅನ್ವಯವಾಗುವ ರಾಶಿ ಸಂರಕ್ಷಣಾ ನಿಯಮವನ್ನು ನಿರೂಪಿಸಿ.
ತಾಮ್ರದ ತಂತಿಯನ್ನು ಬೆಳ್ಳಿಯ ನೈಟ್ರೇಟ್ ದ್ರಾವಣದಲ್ಲಿ ಸ್ವಲ್ಪ ಸಮಯ ಬಿಟ್ಟ ನಂತರ, ದ್ರಾವಣವು ನೀಲಿಮಿಶ್ರಿತ ಹಸಿರು ಬಣ್ಣಕ್ಕೆ ತಿರುಗಿದ್ದನ್ನು ಗಮನಿಸಬಹುದು. ಗಮನಿಸಿದ್ದನ್ನು ವಿವರಿಸಿ.
ತಾಮ್ರದ ತಂತಿಯನ್ನು ಬೆಳ್ಳಿಯ ನೈಟ್ರೇಟ್ ದ್ರಾವಣದಲ್ಲಿ ಸ್ವಲ್ಪ ಸಮಯ ಬಿಟ್ಟ ನಂತರ, ದ್ರಾವಣವು ನೀಲಿಮಿಶ್ರಿತ ಹಸಿರು ಬಣ್ಣಕ್ಕೆ ತಿರುಗಿದ್ದನ್ನು ಗಮನಿಸಬಹುದು. ಉಂಟಾಗುತ್ತಿರುವ ಬದಲಾವಣೆಯನ್ನು ಪ್ರತಿನಿಧಿಸಲು ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ.
ಶುಷ್ಕ ಕುದಿಗೊಳವೆಯಲ್ಲಿ 2g ಫೆರಸ್ ಸಲ್ಫೇಟ್ ಹರಳುಗಳನ್ನು ಕಾಯಿಸಿದೆ. ಗಮನಿಸಬಹುದಾದ ಯಾವುದಾದರೂ 2 ಅಂಶಗಳನ್ನು ಪಟ್ಟಿಮಾಡಿ.
ಶುಷ್ಕ ಕುದಿಗೊಳವೆಯಲ್ಲಿ 2g ಫೆರಸ್ ಸಲ್ಫೇಟ್ ಹರಳುಗಳನ್ನು ಕಾಯಿಸಿದೆ. ಈ ಕ್ರಿಯೆಯ ರಾಸಾಯನಿಕ ಸಮೀಕರಣವನ್ನು ಬರೆಯಿರಿ.
ಕೆಳಗಿನ ಕ್ರಿಯೆಗಳಲ್ಲಿ ಉತ್ಕರ್ಷಣಗೊಂಡ ವಸ್ತುಗಳು ಮತ್ತು ಅಪಕರ್ಷಣಗೊಂಡ ವಸ್ತುಗಳನ್ನು ಗುರುತಿಸಿ. `CuO(s) + H_2(g) → Cu(s) + H_2O(l)`
ಕೆಳಗಿನ ಸಮೀಕರಣಗಳಲ್ಲಿ ಉತ್ಕರ್ಷಣೆ ಮತ್ತು ಅಪಕರ್ಷಣೆಗೊಳಗಾಗುವ ಪ್ರತಿವರ್ತಕಗಳನ್ನು ಹೆಸರಿಸಿ : `(CuO(ಘನ)+Zn(ಘನ)rarrZnO(ಘನ)+Cu(ಘನ))`
ಅಪಕರ್ಷಣೆಯ ಒಂದು ಕೈಗಾರಿಕಾ ಅನ್ವಯವನ್ನು ತಿಳಿಸಿ.
ಸುಣ್ಣದ ತಿಳಿ ನೀರಿನ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹಾಯಿಸಿದಾಗ ಏನನ್ನು ಗಮನಿಸುವಿರಿ? ಕಡಿಮೆ ಅವಧಿಗೆ
ಸುಣ್ಣದ ತಿಳಿ ನೀರಿನ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹಾಯಿಸಿದಾಗ ಏನನ್ನು ಗಮನಿಸುವಿರಿ? ದೀರ್ಘಅವಧಿಗೆ
ಕ್ಯಾಲ್ಸಿಯಂ ಕಾರ್ಬೋನೇಟ್‌ನ ಎರಡು ನೈಸರ್ಗಿಕ ರೂಪಗಳನ್ನು ಬರೆಯಿರಿ
ಕೆಳಗಿನ ಪ್ರತಿಯೊಂದು ಕ್ರಿಯೆಯ ವಿಧವನ್ನು ಗುರುತಿಸಿ, ಹಾಗೇ ಪ್ರತಿಯೊಂದಕ್ಕೂ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ. ಕರಗದ ವಸ್ತು ಉತ್ಪತ್ತಿಯಾಗುತ್ತದೆ.
ಕಾರ್ಬನ್ ಡೈ ಆಕ್ಸೈಡ್‌ನ ಪರೀಕ್ಷೆಗೆ 'x' ಎಂಬ ವಸ್ತುವಿನ ದ್ರಾವಣವನ್ನು ಬಳಸಲಾಗಿದೆ. ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ 'x' ವರ್ತಿಸುವ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆಯಿರಿ.
x' ನ್ನು ಹೇಗೆ ಪಡೆಯಲಾಗುತ್ತದೆ? ರಾಸಾಯನಿಕ ಸಮೀಕರಣ ಬರೆಯಿರಿ.
ಈ ಕೆಳಗಿನ ಸಂದರ್ಭದಲ್ಲಿ ಏನಾಗುತ್ತದೆ : ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವು ಘನಸ್ಥಿತಿಯಲ್ಲಿರುವ ಸೋಡಿಯಂ ಕಾರ್ಬೋನೇಟ್ ಜೊತೆ ಸೇರಿದಾಗ. ರಾಸಾಯನಿಕ ಸಮೀಕರಣ ಬರೆಯಿರಿ.
ಈ ಕೆಳಗಿನ ಸಂದರ್ಭದಲ್ಲಿ ಏನಾಗುತ್ತದೆ : ಸುಟ್ಟ ಸುಣ್ಣವನ್ನು ನೀರಿನೊಂದಿಗೆ ಸೇರಿಸಿದಾಗ. ರಾಸಾಯನಿಕ ಸಮೀಕರಣ ಬರೆಯಿರಿ.
ಈ ಕೆಳಗಿನ ಸಂದರ್ಭದಲ್ಲಿ ಏನಾಗುತ್ತದೆ : ಸೋಡಿಯಂ ಕ್ಲೋರೈಡ್ ದ್ರಾವಣವನ್ನು ಲೆಡ್ ನೈಟ್ರೇಟ್ ದ್ರಾವಣದ ಜೊತೆ ಸೇರಿಸಿದಾಗ. ರಾಸಾಯನಿಕ ಸಮೀಕರಣ ಬರೆಯಿರಿ.
ಈ ಕೆಳಗಿನ ಬದಲಾವಣೆ ಉಂಟಾಗಿರುವುದಕ್ಕೆ ತಲಾ ಒಂದು ಉದಾಹರಣೆ ಸಹಿತ ರಾಸಾಯನಿಕ ಕ್ರಿಯೆ ಬರೆಯಿರಿ. ಬಣ್ಣದಲ್ಲಿನ ಬದಲಾವಣೆ
ಈ ಕೆಳಗಿನ ಬದಲಾವಣೆ ಉಂಟಾಗಿರುವುದಕ್ಕೆ ತಲಾ ಒಂದು ಉದಾಹರಣೆ ಸಹಿತ ರಾಸಾಯನಿಕ ಕ್ರಿಯೆ ಬರೆಯಿರಿ. ತಾಪದಲ್ಲಿನ ಬದಲಾವಣೆ
ಈ ಕೆಳಗಿನ ಬದಲಾವಣೆ ಉಂಟಾಗಿರುವುದಕ್ಕೆ ತಲಾ ಒಂದು ಉದಾಹರಣೆ ಸಹಿತ ರಾಸಾಯನಿಕ ಕ್ರಿಯೆ ಬರೆಯಿರಿ. ಪ್ರಕ್ಷೇಪ ಉಂಟಾಗುವಿಕೆ.
ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಪೂರ್ಣಗೊಳಿಸಿ ಮತ್ತು ಸರಿದೂಗಿಸಿ : `(CaCO_3+HCl)`
ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಪೂರ್ಣಗೊಳಿಸಿ ಮತ್ತು ಸರಿದೂಗಿಸಿ : `(Al+HCl)`
ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಪೂರ್ಣಗೊಳಿಸಿ ಮತ್ತು ಸರಿದೂಗಿಸಿ : `(MnO_2+HCl)`
ಈ ಕೆಳಗಿನ ಸಂದರ್ಭಗಳಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಗಳ ಪದ ಸಮೀಕರಣ ಮತ್ತು ನಂತರ ಸರಿದೂಗಿಸಿದ ಸಮೀಕರಣ ಬರೆಯಿರಿ.ಸಾರರಿಕ್ತ ಸಲ್ಫ್ಯೂರಿಕ್ ಆಮ್ಲ ಅಲ್ಯುಮಿನಿಯಂ ಪುಡಿಯೊಂದಿಗೆ ವರ್ತಿಸಿದಾಗ.
ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ : ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವು ಸೋಡಿಯಂ ಕಾರ್ಬೋನೇಟ್ ನೊಂದಿಗೆ ವರ್ತಿಸುತ್ತದೆ.
ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ : ಕಾರ್ಬನ್ ಡೈ ಆಕ್ಸೈಡನ್ನು ಸುಣ್ಣದ ತಿಳಿನೀರಿನೊಂದಿಗೆ ಹಾಯಿಸಿದೆ.
ಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಿ ಮತ್ತು ಅವು ಅಂತರುಷ್ಣುಕ ಕ್ರಿಯೆಗಳೇ ಅಥವಾ ಬಹಿರುಷ್ಣಕ ಕ್ರಿಯೆಗಳೇ ತಿಳಿಸಿ : `(Na+H_2OrarrNaOH+H_2)`
ಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಿ ಮತ್ತು ಅವು ಅಂತರುಷ್ಣುಕ ಕ್ರಿಯೆಗಳೇ ಅಥವಾ ಬಹಿರುಷ್ಣಕ ಕ್ರಿಯೆಗಳೇ ತಿಳಿಸಿ : `(FeSO_4rarrFe_2O_3+SO_2+SO_3)`
ಈ ಕೆಳಗಿನ ರಾಸಾಯನಿಕ ಕ್ರಿಯೆಗಳು ಒಳಗೊಂಡಿರುವ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ : ಗೋಡೆಗಳಿಗೆ ಸುಣ್ಣ ಬಳಿಯುವಿಕೆ.
ಈ ಕೆಳಗಿನ ರಾಸಾಯನಿಕ ಕ್ರಿಯೆಗಳು ಒಳಗೊಂಡಿರುವ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ : ಕಪ್ಪು-ಬಿಳಿ ಛಾಯಾಗ್ರಹಣ.
ಕುದಿಗೊಳವೆಯಲ್ಲಿ 2g ಫೆರಸ್ ಸಲ್ಫೇಟ್ ಹರಳುಗಳನ್ನು ಕಾಯಿಸಲಾಗಿದೆ. ಕಾಯಿಸುವ ಮೊದಲು ಮತ್ತು ಕಾಯಿಸಿದ ನಂತರ ಫೆರಸ್ ಸಲ್ಫೇಟ್ ಹರಳುಗಳ ಬಣ್ಣ ತಿಳಿಸಿ.
ಕುದಿಗೊಳವೆಯಲ್ಲಿ 2g ಫೆರಸ್ ಸಲ್ಫೇಟ್ ಹರಳುಗಳನ್ನು ಕಾಯಿಸಲಾಗಿದೆ. ಕಾಯಿಸುವ ಸಂದರ್ಭದಲ್ಲಿ ಬಿಡುಗಡೆಯಾಗುವ ಅನಿಲಗಳನ್ನು ಹೆಸರಿಸಿ.
ಶುಷ್ಕ ಕುದಿಗೊಳವೆಯಲ್ಲಿ 2g ಫೆರಸ್ ಸಲ್ಫೇಟ್ ಹರಳುಗಳನ್ನು ಕಾಯಿಸಿದೆ. ಈ ಕ್ರಿಯೆಯ ರಾಸಾಯನಿಕ ಸಮೀಕರಣವನ್ನು ಬರೆಯಿರಿ.
ಕೆಳಗಿನ ಚಿತ್ರದಲ್ಲಿ ತೋರಿಸಿರುವ ಚಟುವಟಿಕೆಯಲ್ಲಿ ನೀವು ಏನನ್ನು ಗಮನಿಸುವಿರಿ?ಗಮನಿಸಿದ ಈ ಅಂಶಗಳಿಗೆ ಕಾರಣಗಳೇನು? ಸಮೀಕರಣದ ಸಹಿತ ವಿವರಿಸಿ.
ರಾಸಾಯನಿಕ ಕ್ರಿಯೆಯನ್ನು ವ್ಯಾಖ್ಯಾನಿಸಿ. ರಾಸಾಯನಿಕ ಕ್ರಿಯೆ ನೆಡೆದಿದೆ ಎಂದು ತೀರ್ಮಾನಿಸಲು ನಮಗೆ ನೆರವಾಗುವ ಗಮನಾರ್ಹ ಅಂಶಗಳು ಯಾವುವು?
ಕೆಳಗಿನ ಹೇಳಿಕೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ : ಬ್ಲೀಚಿಂಗ್ ಪುಡಿಯನ್ನು ಗಾಳಿಗೆ ತೆರೆದಿಟ್ಟಿದೆ.
ಕೆಳಗಿನ ಹೇಳಿಕೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ : ತಾಮ್ರದ ಸಲ್ಫೇಟ್ ನ ನೀಲಿ ಹರಳುಗಳನ್ನು ಕಾಯಿಸಿದೆ.
ಕೆಳಗಿನ ಹೇಳಿಕೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ : ಶುಷ್ಕವಾಗಿರುವ ಅರಳಿದ ಶುಷ್ಕ ಸುಣ್ಣದ ಮೇಲೆ ಕ್ಲೋರಿನ್ ಅನಿಲ ಹಾಯಿಸಿದೆ.
ಸುಣ್ಣದ ತಿಳಿ ನೀರಿನ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹಾಯಿಸಿದಾಗ ಏನನ್ನು ಗಮನಿಸುವಿರಿ? ಕಡಿಮೆ ಅವಧಿಗೆ
ಕೆಳಗಿನ ಹೇಳಿಕೆಗಳಲ್ಲಿನ ರಾಸಾಯನಿಕ ಸಮೀಕರಣದ ವಿಧಗಳನ್ನು ಗುರುತಿಸಿ ಮತ್ತು ಪ್ರತಿಯೊಂದನ್ನೂ ವ್ಯಾಖ್ಯಾನಿಸಿ : ನಮ್ಮ ದೇಹದಲ್ಲಿ ಆಹಾರ ಜೀರ್ಣವಾಗುವಿಕೆ
ಕೆಳಗಿನ ಹೇಳಿಕೆಗಳಲ್ಲಿನ ರಾಸಾಯನಿಕ ಸಮೀಕರಣದ ವಿಧಗಳನ್ನು ಗುರುತಿಸಿ ಮತ್ತು ಪ್ರತಿಯೊಂದನ್ನೂ ವ್ಯಾಖ್ಯಾನಿಸಿ : ಕಬ್ಬಿಣ ತುಕ್ಕು ಹಿಡಿಯುವುದು.
ಕೆಳಗಿನ ಹೇಳಿಕೆಗಳಲ್ಲಿನ ರಾಸಾಯನಿಕ ಸಮೀಕರಣದ ವಿಧಗಳನ್ನು ಗುರುತಿಸಿ ಮತ್ತು ಪ್ರತಿಯೊಂದನ್ನೂ ವ್ಯಾಖ್ಯಾನಿಸಿ : ಮ್ಯಾಂಗನೀಸ್ ಡೈ ಆಕ್ಸೈಡ್ ನ್ನು ಅಲ್ಯುಮಿನಿಯಂ ಪುಡಿಯೊಂದಿಗೆ ಕಾಯಿಸುವುದು.
ಕೆಳಗಿನ ಹೇಳಿಕೆಗಳಲ್ಲಿನ ರಾಸಾಯನಿಕ ಸಮೀಕರಣದ ವಿಧಗಳನ್ನು ಗುರುತಿಸಿ ಮತ್ತು ಪ್ರತಿಯೊಂದನ್ನೂ ವ್ಯಾಖ್ಯಾನಿಸಿ : ಕಾಪರ್ ಸಲ್ಫೇಟ್ ದ್ರಾವಣಕ್ಕೆ ಕಬ್ಬಿಣದ ಚೂರುಗಳನ್ನು ಹಾಕಿದಾಗ ಅದು ತನ್ನ ನೀಲಿ ಬಣ್ಣವನ್ನು ಕಳೆದುಕೊಳ್ಳುತ್ತದೆ.
ಸುಣ್ಣದ ತಿಳಿ ನೀರಿನ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹಾಯಿಸಿದಾಗ ಏನನ್ನು ಗಮನಿಸುವಿರಿ? ದೀರ್ಘಅವಧಿಗೆ
ಕೆಳಗಿನ ಹೇಳಿಕೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ: ಸಾರರಿಕ್ತ ಸಲ್ಫೂರಿಕ್ ಆಮ್ಲವು ಸೋಡಿಯಂ ಕಾರ್ಬೋನೇಟ್ ನೊಂದಿಗೆ ವರ್ತಿಸುವುದು.
ಕೆಳಗಿನ ಹೇಳಿಕೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ: ಮೊಟ್ಟೆಯ ಸಿಪ್ಪೆಯನ್ನು ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ಹಾಕಿದೆ.
ಕೆಳಗಿನ ಹೇಳಿಕೆಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣಗಳನ್ನು ಬರೆಯಿರಿ: ತಾಮ್ರ (II) ಅಕ್ಸೈಡ್ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸುತ್ತದೆ.
ರಾಸಾಯನಿಕ ಕ್ರಿಯೆ ನಡೆದಿದೆ ಎಂಬುದನ್ನು ನಿರ್ಧರಿಸಲು ನಮಗೆ ನೆರವಾಗುವ ನಾಲ್ಕು ವೀಕ್ಷಣೆಗಳನ್ನು ಪಟ್ಟಿಮಾಡಿ
ರಾಸಾಯನಿಕ ಸಮೀಕರಣವನ್ನು ಸರಿದೂಗಿಸಿ : `(Fe+H_2Orarr Fe_3O_4+H_2)`
ಈ ಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಿ. `(CO_2+H_2OrarrC_6H_12O_6+O_2)`
ಜಿಂಕ್ ನ ಚೂರುಗಳು H_2SO_4, HNO_3, ಗಳ ಸಾರರಿಕ್ತ ದ್ರಾವಣಗಳೊಂದಿಗೆ ವರ್ತಿಸಿದಾಗ ಏನಾಗುತ್ತದೆ? ಇವುಗಳಿಗೆ ರಾಸಾಯನಿಕ ಸಮೀಕರಣಗಳನ್ನೂ ಬರೆಯಿರಿ.
ಕೆಳಗಿನ ರಾಸಾಯನಿಕ ಕ್ರಿಯೆಯಲ್ಲಿ ಉತ್ಕರ್ಷಣೆಗೊಳಗಾದ ವಸ್ತು. `(MNO_2+4HClrarrMnCl_2+2H_2O+Cl_2)`
ಆಹಾರ ಪದಾರ್ಥಗಳು ವಾತಾವರಣಕ್ಕೆ ತೆರೆದಿಟ್ಟಾಗ ಕಮಟುವಿಕೆಗೊಳಗಾಗುವುದಕ್ಕೆ ಕಾರಣವಾದ ಕ್ರಿಯೆ :
ಹೊಂದಿಸಿ ಬರೆಯಿರಿ :
,
ದ್ಯುತಿ ಸಂಶ್ಲೇಷಣೆಯನ್ನು ಅಂತರುಷ್ಣಕ ಕ್ರಿಯೆ ಎಂದು ಪರಿಗಣಿಸುವುದು ಏಕೆ?
ತಮ್ಮ ಸ್ವಾಭಾವಿಕ ಆಕರಗಳಾದ ಕ್ಲೋರೈಡ್ ಗಳು ಮತ್ತು ಆಕ್ಸೈಡ್ ಗಳಿಂದ ಲೋಹಗಳನ್ನು ಉದ್ಧರಿಸುವ ಪ್ರಕ್ರಿಯೆಯಲ್ಲಿ ಬಳಕೆಯಾಗುವ ರಾಸಾಯನಿಕ ಕ್ರಿಯೆಯ ವಿಧವನ್ನು ತಿಳಿಸಿ.
ಹೈಡ್ರೋಜನ್ ಪೆರಾಕ್ಸೈಡನ್ನು ಬಣ್ಣದ ಸೀಸೆಗಳಲ್ಲಿ ಇಡಲು ಕಾರಣವೇನು?
`(N_2+3H_2rarr2NH_3)`, ಈ ಕ್ರಿಯೆಯ ವಿಧವನ್ನು ಹೆಸರಿಸಿ.
ಗಾಳಿಗೆ ತೆರೆದಿಟ್ಟಾಗ ಬೆಳ್ಳಿಯ ವಸ್ತುಗಳು ಕಾಲಕ್ರಮೇಣ ಕಪ್ಪಾಗಲು ಕಾರಣವೇನು?
ಚಿಪ್ಸ್ ತಯಾರಕರು ಸಾಮಾನ್ಯವಾಗಿ ಚಿಪ್ಸ್ ತುಂಬುವ ಚೀಲಗಳಲ್ಲಿ ನೈಟ್ರೋಜನ್ ನಂತಹ ಅನಿಲಗಳನ್ನು ಹಾಯಿಸುತ್ತಾರೆ ಏಕೆ?ಕಾರಣಕೊಡಿ.
ಕೆಳಗಿನ ಕ್ರಿಯೆಗಳಲ್ಲಿ ಉತ್ಕರ್ಷಣಗೊಂಡ ವಸ್ತುಗಳು ಮತ್ತು ಅಪಕರ್ಷಣಗೊಂಡ ವಸ್ತುಗಳನ್ನು ಗುರುತಿಸಿ. `CuO(s) + H_2(g) → Cu(s) + H_2O(l)`
EXERCISE questions and complete solutions for chapter ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು of OSWAAL PUBLICATION of Class 10