Class 8 | CHEMISTRY |
Chapter | ಬಲ ಮತ್ತು ಒತ್ತಡ |
CAMBRIDGE PUBLICATION(KANNAD) | EXERCISE |
Number Of Questions | 41 |
Academic Year | 2023-24 |
ನಿಮ್ಮ ತಳ್ಳುವಿಕೆ ಅಥವಾ ಎಳೆಯುವಿಕೆಯಿಂದ ಚಲನಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ತಿಳಿಸುವ ಪ್ರತಿ ಸಂದರ್ಭದ ಎರಡು ಉದಾಹರಣೆಗಳನ್ನು ನೀಡಿ.
ಬಲಪ್ರಯೋಗದಿಂದ ವಸ್ತುವಿನ ಆಕಾರದಲ್ಲಿ ಬದಲಾವಣೆಯಾಗುವುದನ್ನು ತಿಳಿಸುವ ಸಂದರ್ಭಗಳಿಗೆ ಎರಡು ಉದಾಹರಣೆಗಳನ್ನು ನೀಡಿ.
ಬಾವಿಯಿಂದ ನೀರು ಸೇದಲು ನಾವು ಹಗ್ಗವನ್ನು _______ ಪ್ರಯೋಗ ಮಾಡಬೇಕು.
ಆವೇಶಭರಿತ ವಸ್ತುವು ಆವೇಶರಹಿತ ವಸ್ತುವನ್ನು ತನ್ನೆಡೆಗೆ _________
ಸರಕು ತುಂಬಿದ ಟ್ರ್ಯಾಲಿಯನ್ನು ಚಲಿಸಲು ನಾವು ಅದರ ಮೇಲೆ _______
ಆಯಸ್ಕಾಂತದ ಉತ್ತರ ಧ್ರುವವು ಮತ್ತೊಂದು ಆಯಸ್ಕಾಂತದ ಉತ್ತರಧ್ರುವವನ್ನು _______
ಬಿಲ್ಲನ್ನು ಎಳೆಯಲು, ಬಿಲ್ಲುಗಾರ್ತಿಯು ಪ್ರಯೋಗಿಸುವ ಬಲವು ಅದರ ______ ದಲ್ಲಿನ ಬದಲಾವಣೆಗೆ ಕಾರಣವಾಗಿದೆ.
ಬಿಲ್ಲನ್ನು ಎಳೆಯಲು ಬಿಲ್ಲುಗಾರ್ತಿಯು ಪ್ರಯೋಗಿಸುವ ಬಲವು ______ ಬಲಕ್ಕೆ ಉದಾಹರಣೆಯಾಗಿದೆ.
ಬಾಣದ ಚಲನೆಯು ಸ್ಥಿತಿಯ ಬದಲಾವಣೆಗೆ ಕಾರಣವಾದ ಬಲದ ವಿಧವು ______ ಬಲಕ್ಕೆ ಉದಾಹರಣೆಯಾಗಿದೆ.
ಬಾಣವು ಅದರ ಗುರಿಯತ್ತ ಚಲಿಸುವಾಗ ಅದರ ಮೇಲೆ ಪ್ರಯೋಗವಾಗುತ್ತಿರುವ ಬಲಗಳು _______ ಗೆ ಕಾರಣ ಮತ್ತು ಗಾಳಿಯ _____ ಕಾರಣ.
ಈ ಕೆಳಗಿನ ಸಂದರ್ಭಗಳಲ್ಲಿ ಬಲಪ್ರಯೋಗಿಸುತ್ತಿರುವ ಮೂಲ ಮತ್ತು ಅದು ಯಾವ ವಸ್ತುವಿನ ಮೇಲೆ ವರ್ತಿಸುತ್ತಿದೆ ಎಂಬುದನ್ನು ಗುರುತಿಸಿ. ಪ್ರತಿ ಸಂದರ್ಭದಲ್ಲೂ ಬಲದ ಪರಿಣಾಮವನ್ನು ತಿಳಿಸಿ : ಒಂದು ನಿಂಬೆಹಣ್ಣಿನ ತುಂಡನ್ನು ರಸ ಪಡೆಯಲು ಬೆರಳುಗಳ ನಡುವೆ ಹಿಂಡುವುದು.
ಈ ಕೆಳಗಿನ ಸಂದರ್ಭಗಳಲ್ಲಿ ಬಲಪ್ರಯೋಗಿಸುತ್ತಿರುವ ಮೂಲ ಮತ್ತು ಅದು ಯಾವ ವಸ್ತುವಿನ ಮೇಲೆ ವರ್ತಿಸುತ್ತಿದೆ ಎಂಬುದನ್ನು ಗುರುತಿಸಿ. ಪ್ರತಿ ಸಂದರ್ಭದಲ್ಲೂ ಬಲದ ಪರಿಣಾಮವನ್ನು ತಿಳಿಸಿ : ಟೂತ್‌ಪೇಸ್ಟ ಟ್ಯೂಬ್‌ನಿಂದ ಪೇಸ್ಟನ್ನು ಹೊರತೆಗೆಯುವುದು.
ಈ ಕೆಳಗಿನ ಸಂದರ್ಭಗಳಲ್ಲಿ ಬಲಪ್ರಯೋಗಿಸುತ್ತಿರುವ ಮೂಲ ಮತ್ತು ಅದು ಯಾವ ವಸ್ತುವಿನ ಮೇಲೆ ವರ್ತಿಸುತ್ತಿದೆ ಎಂಬುದನ್ನು ಗುರುತಿಸಿ. ಪ್ರತಿ ಸಂದರ್ಭದಲ್ಲೂ ಬಲದ ಪರಿಣಾಮವನ್ನು ತಿಳಿಸಿ : ಸ್ಪ್ರಿಂಗ್‌ನಿಂದ ಭಾರವನ್ನು ತೂಗು ಹಾಕಿ ಅದರ ಇನ್ನೊಂದು ತುದಿಯನ್ನು ಸ್ಥಿರವಾಗಿ ಗೋಡೆಯಲ್ಲಿರುವ ಕೊಕ್ಕೆಗೆ ನೇತುಹಾಕಿದೆ.
ಈ ಕೆಳಗಿನ ಸಂದರ್ಭಗಳಲ್ಲಿ ಬಲಪ್ರಯೋಗಿಸುತ್ತಿರುವ ಮೂಲ ಮತ್ತು ಅದು ಯಾವ ವಸ್ತುವಿನ ಮೇಲೆ ವರ್ತಿಸುತ್ತಿದೆ ಎಂಬುದನ್ನು ಗುರುತಿಸಿ. ಪ್ರತಿ ಸಂದರ್ಭದಲ್ಲೂ ಬಲದ ಪರಿಣಾಮವನ್ನು ತಿಳಿಸಿ : ಒಬ್ಬ ಕ್ರೀಡಾಪಟು () ಎತ್ತರ ಜಿಗಿತದಿಂದ ನಿರ್ದಿಷ್ಟ ಎತ್ತರದಲ್ಲಿರುವ ಅಳತೆಕೋಲನ್ನು ದಾಟುವುದು.
ಉಬ್ಬಿದ ಬಲೂನನ್ನು ಸಿಂಥೆಟಿಕ್ ಬಟ್ಟೆಯ ಚೂರಿನಿಂದ ಉಜ್ಜಿದ ನಂತರ ಗೋಡೆಗೆ ಒತ್ತಲಾಯಿತು. ಬಲೂನ್ ಗೋಡೆಗೆ ಅಂಟಿಕೊಳ್ಳುವುದು ಕಂಡುಬಂತು. ಬಲೂನ್ ಮತ್ತು ಗೋಡೆಯ ನಡುವಿನ ಆಕರ್ಷಣೆಗೆ ಕಾರಣವಾದ ಬಲ ಯಾವುದು?
ನೀರು ತುಂಬಿದ ಪ್ಲಾಸ್ಟಿಕ್ ಬಕೆಟ್ ಅನ್ನು ಭೂಮಿಯ ಮೇಲ್ಮೈನಿಂದ ಮೇಲೆ ನಿಮ್ಮ ಕೈಯಲ್ಲಿ ಹಿಡಿದಾಗ ಆ ಪ್ಲಾಸ್ಟಿಕ್ ಬಕೆಟ್‌ನ ಮೇಲೆ ವರ್ತಿಸುವ ಬಲಗಳನ್ನು ಹೆಸರಿಸಿ. ಬಕೆಟ್‌ನ ಮೇಲೆ ವರ್ತಿಸುತ್ತಿರುವ ಬಲಗಳು ಅದರ ಚಲನೆಯ ಸ್ಥಿತಿಯನ್ನು ಏಕೆ ಬದಲಾಯಿಸುವುದಿಲ್ಲ ಎಂದು ಚರ್ಚಿಸಿ
ಒಂದು ಉಪಗ್ರಹವನ್ನು ಅದರ ಕಕ್ಷೆಯಲ್ಲಿಡಲು ಒಂದು ರಾಕೆಟನ್ನು ಉಡಾವಣೆ ಮಾಡಲಾಯಿತು. ಉಡಾವಣಾ ಕೇಂದ್ರವನ್ನು ಬಿಟ್ಟ ಕೂಡಲೇ ರಾಕೆಟ್‌ನ ಮೇಲೆ ವರ್ತಿಸುವ ಎರಡು ಬಲಗಳಾವುವು ಎಂದು ಹೆಸರಿಸಿ.
ಒಂದು ಡ್ರಾಪರ್‌ನ ನಳಿಕೆಯನ್ನು ನೀರಿನಲ್ಲಿಟ್ಟು ಅದರ ಬಿರಡೆಯನ್ನು ಒತ್ತಿದಾಗ, ಡ್ರಾಪರ್‌ನಲ್ಲಿರುವ ಗಾಳಿಯು ಗುಳ್ಳೆಗಳ ರೂಪದಲ್ಲಿ ಹೊರಬರುತ್ತದೆ. ನಾವು ಬಿರಡೆಯ ಮೇಲಿನ ಒತ್ತಡವನ್ನು ಬಿಡುಗಡೆ ಮಾಡಿದ ಕೂಡಲೇ ನೀರು ಹನಿಕೆ (ಡ್ರಾಪರ್) ಯೊಳಗೆ ತುಂಬಿಕೊಳ್ಳುತ್ತದೆ. ಡ್ರಾಪರ್‌ನಲ್ಲಿ ನೀರಿನ ಏರಿಕೆಗೆ ಕಾರಣ : ಅ) ನೀರಿನ ಒತ್ತಡ, ಬ)ಭೂಮಿಯ ಗುರುತ್ವಾಕರ್ಷಣೆ, ಕ) ರಬ್ಬರ್ ಬಿರಡೆಯ ಆಕಾರ, ಡ) ವಾತಾವರಣದ ಒತ್ತಡ.
ʼಬಲʼದ ಬಗ್ಗೆ ವಿವರಿಸಿ.
ಒತ್ತಡ ಎಂದರೇನು ? ಇದರ ಮೂಲಮಾನವೇನು ?
ಬಲದ ಪರಿಣಾಮಗಳಾವುವು?
ವಿವಿಧ ರೀತಿಯ ಬಲಗಳನ್ನು ಹೆಸರಿಸಿ ಮತ್ತು ವ್ಯಾಖ್ಯಾನಿಸಿ.
ಈ ಕೆಳಗಿನವುಗಳಲ್ಲಿ ಯಾವ ಬಲವು ಕೆಲಸ ಮಾಡಿದೆ ಎಂದು ತಿಳಿಸಿರಿ : ಎತ್ತುಗಳು ಸಾಮಾನು ತುಂಬಿದ ಗಾಡಿಯನ್ನು ಎಳೆಯುತ್ತಿದೆ.
ಈ ಕೆಳಗಿನವುಗಳಲ್ಲಿ ಯಾವ ಬಲವು ಕೆಲಸ ಮಾಡಿದೆ ಎಂದು ತಿಳಿಸಿರಿ : ಆಯಸ್ಕಾಂತವುಳ್ಳ ಚಿತ್ರವನ್ನು ಬೀರುವಿನ ಬಾಗಿಲ ಮೇಲೆ ಅಂಟು ಇಲ್ಲದೆ ತಗಲಿಸಿದೆ.
ಈ ಕೆಳಗಿನವುಗಳಲ್ಲಿ ಯಾವ ಬಲವು ಕೆಲಸ ಮಾಡಿದೆ ಎಂದು ತಿಳಿಸಿರಿ : ಕೈಯಲ್ಲಿದ್ದ ವಸ್ತು ಜಾರಿ ನೆಲದ ಮೇಲೆ ಬೀಳುತ್ತದೆ.
ಈ ಕೆಳಗಿನವುಗಳಲ್ಲಿ ಯಾವ ಬಲವು ಕೆಲಸ ಮಾಡಿದೆ ಎಂದು ತಿಳಿಸಿರಿ : ಪ್ಲಾಸ್ಟಿಕ್ ಹಾಳೆಯನ್ನು ಚೆನ್ನಾಗಿ ಉಜ್ಜಿದ ಮೇಲೆ ಅದು ಸಣ್ಣ ಸಣ್ಣ ಕಾಗದದ ಚೂರುಗಳನ್ನು ಆಕರ್ಷಿಸುತ್ತಿದೆ.
ಈ ಕೆಳಗಿನವುಗಳಲ್ಲಿ ಯಾವ ಬಲವು ಕೆಲಸ ಮಾಡಿದೆ ಎಂದು ತಿಳಿಸಿರಿ : ನೀರಿನ ಮೇಲೆ ಚಲಿಸುತ್ತಿರುವ ದೋಣಿ ಹುಟ್ಟು ಹಾಕುವುದನ್ನು ನಿಲ್ಲಿಸಿದ ನಂತರ ದೋಣಿಯು ನಿಲ್ಲುತ್ತದೆ.
ಒತ್ತಡ ಎಂದರೇನು ? ಇದರ ಮೂಲಮಾನವೇನು ?
ಸಂಪರ್ಕ ಬಲವನ್ನು ವ್ಯಾಖ್ಯಾನಿಸಿ.
ಕತ್ತರಿಸಲು ಉಪಯೋಗಿಸುವ ಚಾಕು ಮತ್ತು ಚುಚ್ಚಲು ಉಪಯೋಗಿಸುವ ಪಿನ್, ಮೊಳೆ ಮುಂತಾದವು ಮೊನಚಾದ ತುದಿಗಳನ್ನು ಹೊಂದಿರುವ ಕಾರಣವೇನು?
ಸಂಪರ್ಕ ರಹಿತ ಬಲಕ್ಕೆ ಒಂದು ಉದಾಹರಣೆಯನ್ನು ಕೊಡಿ
ವಾತಾವರಣದ ಒತ್ತಡದ ಒಂದು ಉದಾಹರಣೆಯನ್ನು ಕೊಡಿರಿ.
ವಿಜ್ಞಾನದಲ್ಲಿ ವಸ್ತುವಿನ _______ ಅಥವಾ ______ ಬಲ ಎನ್ನುತ್ತೇವೆ.
ಬಾವಿಯಿಂದ ನೀರು ಸೇದಲು ನಾವು ಹಗ್ಗವನ್ನು _______ ಪ್ರಯೋಗ ಮಾಡಬೇಕು.
ಒಂದು ಏಕಮಾನ ವಿಸ್ತೀರ್ಣದ ಮೇಲೆ ಪ್ರಯೋಗಿಸುವ ಬಲವೇ ________.
ಭೂಮಿಯು ತನ್ನೆಡೆಗೆ ವಸ್ತುಗಳನ್ನು ಸೆಳೆಯುವ ಬಲವನ್ನು ______ ಎನ್ನುತ್ತಾರೆ.
ವಸ್ತುಗಳು ಸಂಪರ್ಕದಲ್ಲಿದ್ದಾಗ ಮಾತ್ರ ಸ್ನಾಯುಬಲವನ್ನು ಪ್ರಯೋಗಿಸಲು ಸಾಧ್ಯವಾಗುವುದರಿಂದ ಇದನ್ನು ______ ಎನ್ನುತ್ತಾರೆ.
ಬಲಪ್ರಯೋಗದಿಂದ ವಸ್ತುವಿನ ಆಕಾರದಲ್ಲಿ ಬದಲಾವಣೆಯಾಗುವುದನ್ನು ತಿಳಿಸುವ ಸಂದರ್ಭಗಳಿಗೆ ಎರಡು ಉದಾಹರಣೆಗಳನ್ನು ನೀಡಿ.
ಬಲದ ಪರಿಣಾಮಗಳಾವುವು?
ಸಂಪರ್ಕ ಬಲವನ್ನು ವ್ಯಾಖ್ಯಾನಿಸಿ.
ಹೊಂದಿಸಿ ಬರೆಯಿರಿ
EXERCISE questions and complete solutions for chapter ಬಲ ಮತ್ತು ಒತ್ತಡ of CAMBRIDGE PUBLICATION(KANNAD) of Class 8