Class 10 | MATHS |
Chapter | ನೂತನ ಮಾದರಿ ಪ್ರಶ್ನೆ ಪತ್ರಿಕೆ 6 |
CAMBRIDGE PUBLICATION(KANNAD) | Example |
Number Of Questions | 44 |
Academic Year | 2023-24 |
`T_n = 5n -3` ಆದಾಗ `T_4` ಬೆಲೆಯು
ಯೂಕ್ಷಿಡನ ಅನು ಪ್ರಮೇಯದ ಸರಿಯಾದ ಸಮೀಕರಣ
ಒಂದು ನಾಣ್ಯವನ್ನು ಎರಡು ಬಾರಿ ಚಿಮ್ಮಿದಾಗ ಎರಡು ಶಿರಗಳು ಮೇಲೆ ಬರುವ ಸಂಭವನೀಯತೆ
ಒಂದು ವೃತ್ತದ ತ್ರಿಜ್ಯ 18 ಸೆಂ.ಮೀ ಮತ್ತು ತ್ರಿಜ್ಯಗಳ ನಡುವಿನ ಕೋನ` 30^circ `ಇರುವ ತ್ರಿಜ್ಯಾಂತರ ಖಂಡದ ಕಂಸದ ಉದ್ದ
ಮೂಲ ಬಿಂದುವಿನಿಂದ (4, 3) ಬಿಂದುವಿಗೆ ಇರುವ ದೂರ
`x^(2)-5x + x^(3)+7` ಈ ಬಹುಪದೋಕ್ತಿಯ ಮಹತ್ತಮ ಘಾತವು
ಒಂದು ಸಿಲಿಂಡರ್‌ನ ಎತ್ತರ 14 ಸೆಂ.ಮೀ ಮತ್ತು ಪಾದದ ತ್ರಿಜ್ಯ 7 ಸೆಂ.ಮೀ ಆದರೆ ಅದರ ಪಾರ್ಶ್ವ ಮೇಲ್ಮೈ ವಿಸ್ತೀರ್ಣ
`2x^(2)-4x+K =0` ವರ್ಗ ಸಮೀಕರಣದ ಮೂಲಗಳು ಸಮವಾಗಿದ್ದರೆ 'K' ನ ಬೆಲೆ
`(x_1,y_1)` ಮತ್ತು `(x_2,y_2)` ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯ ಬಿಂದುವಿನ ನಿರ್ದೇಶಾಂಕಗಳ ಸೂತ್ರವನ್ನು ಬರೆಯಿರಿ.
ಶುದ್ಧವರ್ಗ ಸಮೀಕರಣದ ಆದರ್ಶ ರೂಪವನ್ನು ಬರೆಯಿರಿ.
ಶಂಕುವಿನ ಭಿನ್ನಕದ ಘನಫಲವನ್ನು ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ.
625 ನ್ನು ಅವಿಭಾಜ್ಯ ಅಪವರ್ತನಗಳಾಗಿ ವ್ಯಕ್ತಪಡಿಸಿ.
sin`theta=3/5` ಮತ್ತು cos`theta`= `4/5` ಆದಾಗ tan`theta` ಬೆಲೆ ಎಷ್ಟು?
ಫೈಥಾಗೊರಸ್‌ನ ವಿಲೋಮ ಪ್ರಮೇಯವನ್ನು ನಿರೂಪಿಸಿ.
ಒಂದು ಸಮಾಂತರ ಶ್ರೇಢಿಯ ಮೊದಲನೆ ಪದವು 'a' ಮತ್ತು ಕೊನೆಯ ಹದವು `a_n`ಆದಾಗ, ಆ ಶ್ರೇಢಿಯ ಮೊದಲ 'n' ಪದಗಳದರೆಗಿನ ಮೊತ್ತವನ್ನು ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ.
ಒಂದು ಪೆಟ್ಟಿಗೆಯಲ್ಲಿ 3 ನೀಲಿ, 2 ಬಿಳಿ , 4 ಕೆಂಪು ಗೋಲಿಗಳಿವೆ ಒಂದು ಗೋಲಿಯನ್ನು ಯಾದೃಚ್ಛಿಕವಾಗಿ ತೆಗೆದಾಗ ಈ ಕೆಳಗಿನವುಗಳ ಸಂಭವನೀಯತೆಯನ್ನು ಕಂಡುಹಿಡಿಯಿರಿ. 1)ಬಿಳಿ
ಒಂದು ಪೆಟ್ಟಿಗೆಯಲ್ಲಿ 3 ನೀಲಿ, 2 ಬಿಳಿ 4, ಕೆಂಪು ಗೋಲಿಗಳಿವೆ ಒಂದು ಗೋಲಿಯನ್ನು ಯಾದೃಚ್ಛಿಕವಾಗಿ ತೆಗೆದಾಗ ಈ ಕೆಳಗಿನವುಗಳ ಸಂಭವನೀಯತೆಯನ್ನು ಕಂಡುಹಿಡಿಯಿರಿ. 2)ನೀಲಿ
ಒಂದು ಪೆಟ್ಟಿಗೆಯಲ್ಲಿ 3 ನೀಲಿ, 2 ಬಿಳಿ , 4 ಕೆಂಪು ಗೋಲಿಗಳಿವೆ ಒಂದು ಗೋಲಿಯನ್ನು ಯಾದೃಚ್ಛಿಕವಾಗಿ ತೆಗೆದಾಗ ಈ ಕೆಳಗಿನವುಗಳ ಸಂಭವನೀಯತೆಯನ್ನು ಕಂಡುಹಿಡಿಯಿರಿ. 3) ಕೆಂಪು
1+5+9+13... ಶ್ರೇಢಿಯ ಮೊದಲ 30 ಪದಗಳ ಮೊತ್ತವನ್ನು ಕಂಡುಹಿಡಿಯಿರಿ.
`triangleABC cong triangleDEF` ಮತ್ತು ಅವುಗಳ ವಿಸ್ತರಣಗಳು ಕ್ರಮವಾಗಿ 64 `cm^2` ಮತ್ತು 121 `cm^2` ಗಳಾಗಿದ್ದು EF = 15.4 cm, ಆದರೆ BC ಯನ್ನು ಕಂಡುಹಿಡಿಯಿರಿ.
ಈ ರೇಖಾತ್ಮಕ ಸಮೀಕರಣಗಳ ಜೋಡಿಗೆ ಪರಿಹಾರವನ್ನು ಕಂಡುಹಿಡಿಯಿರಿ : `x + y =14`, `x - y=4`
`3 + sqrt5` ನ್ನು ಅಭಾಗಲಬ್ಧ ಸಂಖ್ಯೆ ಎಂದು ಸಾಧಿಸಿ.
`P(x) = 3x^(3) +x^(2) + 2x +5` ನ್ನು `g(x) =x^(2) + 2x+1` ರಿಂದ ಭಾಗಿಸಿದಾಗ ದೊರಕುವ ಭಾಗಲಬ್ಧ ಮತ್ತು ಶೇಷವನ್ನು ಕಂಡುಹಿಡಿಯಿರಿ.
`sqrt` 2 ಮತ್ತು -`sqrt`2 ಎಂಬುವುವು `2x^(4)-3x^(3) -3x^(2) + 6x-2` ರ ಶೂನ್ಯತೆಗಳಾಗಿವೆಯೇ ಪರೀಕ್ಷಿಸಿ.
ABC ಲಂಭಕೋನ ತ್ರಿಭುಜದಲ್ಲಿ AB = 24cm, BC =7 cm ಆದರೆ ಕೆಳಗಿನವುಗಳನ್ನು ಕಂಡುಹಿಡಿಯಿರಿ.
SinA ,CosA
ABC ಲಂಭಕೋನ ತ್ರಿಭುಜದಲ್ಲಿ AB = 24cm, BC =7 cm ಆದರೆ ಕೆಳಗಿನವುಗಳನ್ನು ಕಂಡುಹಿಡಿಯಿರಿ.
SinC ,CosC.
2 ಮತ್ತು 3 ರಿಂದ ಭಾಗವಾಗುವ 6 ರಿಂದ 500 ರವರೆಗಿನ ಎಲ್ಲಾ ಪೂರ್ಣಾಂಕಗಳ ಮೊತ್ತ ಕಂಡುಹಿಡಿಯಿರಿ.
ಒಂದು ವೃತ್ತಕ್ಕೆ ಅದರ ಬಾಹ್ಯಬಿಂದುವಿನಿಂದ ಎಳೆದ ಸ್ಪರ್ಶಕಗಳು ಸಮಾನವಾಗಿರುತ್ತದೆ. ಎಂದು ಸಾಧಿಸಿ.
ಚಿತ್ರ ರಲ್ಲಿ, `angle POQ = 110^circ`, ಆಗಿರುವಂತೆ, O ಕೇಂದ್ರವುಳ್ಳ ವೃತ್ತ
TP ಮತ್ತು TQ ಸ್ಪರ್ಶಕಗಳಾಗಿವೆ. ಹಾಗ್ಳಾದರೆ `angle`PTQ ದ . ಅಳತೆಯು.
10 ಸೆಂ.ಮೀ ತ್ರಿಜೃವುಳ್ಳ ವೃತ್ತದಲ್ಲಿನ ಒಂದು ಜ್ಯಾವು ವೃತ್ತಕೇಂದ್ರದಲ್ಲಿ ಲಂಬಕೋನವನ್ನುಂಟು ಮಾಡುತ್ತದೆ. ಜ್ಯಾ ದಿಂದ ಉಂಟಾದ ಅಧಿಕ ತ್ರಿಜ್ಯಾಂತರ ಖಂಡದ ವಿಸ್ತೀರ್ಣ ಕಂಡುಹಿಡಿಯಿರಿ.
A (-2, 2) ಮತ್ತು B (2, 8) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು 4 ಸಮಭಾಗಗಳನ್ನಾಗಿ ಮಾಡುವ ಬಿಂದುಗಳ ನಿರ್ದೇಶಾಂಕಗಳನ್ನು ಕಂಡುಹಿಡಿಯಿರಿ.
A(2, 3) B(4, K) ಮತ್ತು C(6, -3) ಎಂಬ ಬಿಂದುಗಳು ಸರಳ ರೇಖಾಗತವಾಗಿದ್ದರೆ 'K' ಬೆಲೆ ಕಂಡುಹಿಡಿಯಿರಿ.
ವ್ಯಾಖ್ಯಾನಿಸಲ್ಪಟ್ಟ ಹೇಳಿಕೆಗಳಲ್ಲಿನ ಕೋನಗಳು ಲಘುಕೋಣಗಳಾಗಿವೆ, ಈ ಕೆಳಗಿನ ಸಮೀಕರಣಗಳನ್ನು ಸಾಧಿಸಿ. `(cos A)/(1 + sin A) + ((1 + sin A)/cos A) = 2secA`
`(1+sectheta - tantheta)/ (1+sec theta +tantheta)` = `(1-sintheta)/ (costheta)` ಎಂದು ಸಾಧಿಸಿ.
ಈ ಕೆಳಗಿನ ಪ್ರಪ್ರಾಂಕಗಳಿಗೆ ಸರಾಸರಿ ಕಂಡುಹಿಡಿಯಿರಿ.
ಈ ಕೆಳಗಿನ ಪ್ರಾಪ್ತಾಂಕಗಳಿಗೆ ಬಹುಲಕ ಕಂಡುಹಿಡಿಯಿರಿ.
10m ಎತ್ತರವಿರುವ ಏಣಿಯು ನೆಲದಿಂದ 8m ಎತ್ತರಹಲ್ಲಿ ಗೋಡೆಯಲ್ಲಿರುವ ಕಿಟಕಿಯನ್ನು ಮುಟ್ಟುತ್ತದೆ ಹಾಗಾದರೆ ಏಣಿಯ ಪಾದವು, ನೆಲದಿಂದ ಎಷ್ಟು ದೂರದಲ್ಲಿದೆ?
ಈ ಕೆಳಗಿನ ವಿತರಣೆಯನ್ನು ಅಧಿಕ ಇರುವ ವಿಧಾನದ ವಿತರಣೆಯಾಗಿ ಬದಲಾಯಿಸಿ ಇದರ ಓಜೀವ್ ಎಳೆಯಿರಿ.
ಕಟ್ಟಡವೊಂದರ ಕೆಲಸದಗುತ್ತಿಗೆಗೆ ಒಂದು ನಿರ್ದಿಷ್ಟ ಸಮಯದ ನಂತರ ತಡವಾಗಿ ಕೆಲಸ ಪೂರ್ಣಗೊಳಿಸಿದರೆ, ನಿರ್ದಿಷ್ಟ. ರೂಪದ ದಂಡವನ್ನು ವಿಧಿಸಲಾಗಿತ್ತು. ಅದು ಹೀಗಿದೆ: ಮೊದಲನೇ ದಿನಕ್ಕೆ Rs.200, ಎರಡನೇ ದನಕ್ಕೆ Rs.250, 3ನೇದಿನಕ್ಕೆ Rs.300 ಇತ್ಯಾದಿ. ಪ್ರತಿ ದಿನದ. ದಂಡವು ಅದರ ಹಿಂದಿನ ದಿನದ ದಂಡಕ್ಕಿಂತ' Rs.50 ಜಾಸ್ತಿ. ಒಬ್ಬ ಗುತ್ತಿಗೆದಾರನು ಒಂದು ಕೆಲಸವನ್ನು ಪೂರ್ತಿಗೊಳಿಸಲು 30 ದಿನಗಳ ಕಾಲ ಹೆಚ್ಚು ತೆಗೆದುಕೊಂಡರೆ ಅವನು ಕೊಡಬೇಕಾದ ದಂಡವನ್ನು ಲೆಕ್ಕಚಾರ ಮಾಡಿ?
`2x -y =2` , `4x - y =4` ಬಿಡಿಸಿ.
ಬಿರುಗಾಳಿಗೆ ಸಿಕ್ಕಿ ಒಂದು ಮರವು ಮುರಿದು, ನೆಲಕ್ಕೆ ತಾಗಿದಾಗ ನೆಲದೊಂದಿಗೆ `30^o` ಕೋನವನ್ನು ಉಂಟುಮಾಡಿದೆ ಮತ್ತು ಮರದ ತುದಿಯು ಮರದ ಬುಡದಿಂದ 8 m ದೂರದಲ್ಲಿ ನೆಲಕ್ಕೆ ತಾಗಿದೆ. ಹಾಗಾದರೆ ಮುರಿದು ಬೀಳುವ ಮುನ್ನ ಮರದ ಎತ್ತರ ಎಷ್ಟಿತ್ತೆಂದು ಕಂಡುಹಿಡಿಯಿರಿ
ಒಂದು ಔಷದದ ಕ್ಯಾಪುಲ್‌ನ ಆಕಾರವು. ಒಂದು ಸಿಲಿಂಡರಿನ ಪ್ರತಿ ಪಾದಗಳಲ್ಲಿ ಎರಡು ಅರ್ಧಗೋಳವನ್ನು ಅಂಟಿನದೆ. ಕ್ಯಾಪ್ಸುಲ್‌ನ ಸಂಪೂರ್ಣ ಉದ್ದವು 14 mm ಮತ್ತು ಅದರ ವ್ಯಾಸವು 5mm ಇದೆ. ಅದರ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಒಂದು ಶಂಕುವಿನ ಭಿನ್ನಕದ ಓರೆ ಎತ್ತರವು 4cm ಮತ್ತು ಅದರ ವೃತ್ತಾಕಾರದ ಪಾದದ ಸುತ್ತಳತೆ ( ಪರಿಧಿ ) ಗಳು 18cm ಮತ್ತು 6cm ಶಂಕುವಿನ ಭಿನ್ನಕದ ಪಾರ್ಶ್ವ ಮೇಲೈ ವಿಸತೀರ್ಣವನ್ನು ಕಂಡುಹಿಡಿಯಿರಿ .
ಫೈಥಾಗೋರಸ್‌ನ ವಿಲೋಮ ಪ್ರಮೇಯವನ್ನು ನಿರೂಪಿಸಿ ಮತ್ತು ಸಾಧಿಸಿ.
Example questions and complete solutions for chapter ನೂತನ ಮಾದರಿ ಪ್ರಶ್ನೆ ಪತ್ರಿಕೆ 6 of CAMBRIDGE MATHS (KANNADA) of Class 10