Class 10 | CHEMISTRY |
Chapter | ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು |
OSWAAL PUBLICATION | EXERCISE |
Number Of Questions | 100 |
Academic Year | 2023-24 |
ಬಾಯಿಯ pH ಮೌಲ್ಯ ಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಹುಳುಕು ಪ್ರಾರಂಭವಾಗುತ್ತದೆ:
ಆಮ್ಲೀಯ ಆಕ್ಸೈಡನ್ನು ಉಂಟುಮಾಡುವ ಧಾತು ?
ಹೊಂದಿಸಿ ಬರೆಯಿರಿ.
ಇರುವೆ ಕಡಿತದ ಆಮ್ಲದ ಹೆಸರನ್ನು ತಿಳಿಸಿ.
ಶುದ್ಧ ಹಾಲಿನ pH ಮೌಲ್ಯ 6.ಇದು ಮೊಸರಾಗಿ ಬದಲಾದಾಗ ಇದರ pH ಮೌಲ್ಯ ಹೆಚ್ಚುತ್ತದೆಯೇ ಅಥವಾ ಕಡಿಮೆಯಾಗುತ್ತಿದೆಯೇ ? ಏಕೆ?
ಲೋಹಗಳೊಂದಿಗೆ ಆಮ್ಲಗಳು ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು ?
pH = 5 ಅಥವಾ pH = 2 ಇವೆರಡರಲ್ಲಿ ಪ್ರಬಲ ಆಮ್ಲವನ್ನು ತಿಳಿಸಿ ?
1 ಮೋಲ್ HCl ಅಥವಾ 1 ಮೋಲ್ `CH_3COOH` ಗಳಿಗೆ ಸಂಬಂಧಿಸಿದಂತೆ H+ ಅಯಾನುಗಳ ಸಾರತೆಯ ಪರಿಣಾಮವೇನು?
ಬಾಯಿಯ pH 5.5ಕ್ಕಿಂತ ಕಡಿಮೆಯಿರುವಾಗ ದಂತಕ್ಷಯವು ಏಕೆ ಪ್ರಾರಂಭವಾಗುತ್ತದೆ?
ಆಮ್ಲವನ್ನು ಸಾರಾರಿಕ್ತಗೊಳಿಸಿದಾಗ , ಹೈಡ್ರೋನಿಯಂ ಅಯಾನುಗಳ ಸಾರತೆಯ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ?
ದ್ರಾವಣದ pH ಇದರ ಅರ್ಥವೇನು ? A ಮತ್ತು B ನಗರಗಳಿಂದ ಸಂಗ್ರಹಿಸಿದ ಮಳೆ ನೀರಿನ pH ಕ್ರಮವಾಗಿ 6 ಮತ್ತು 5 ನ್ನು ಹೊಂದಿದೆ.ಹಾಗಾದರೆ ಯಾವ ನಗರದ ನೀರು ಹೆಚ್ಚು ಆಮ್ಲೀಯವಾಗಿದೆ?
ಕ್ಷಾರಗಳೆಂದರೇನು ?ಎರಡು ಉದಾಹರಣೆ ಕೊಡಿ.
ಕೆಳಗಿನವುಗಳನ್ನು ಆಮ್ಲೀಯ ಆಕ್ಸೈಡ್ ಮತ್ತು ಪ್ರತ್ಯಾಮ್ಲೀಯ ಆಕ್ಸೈಡ್ ಗಳಾಗಿ ವಿಂಗಡಿಸಿ: `Na_2O` ,` SO_2` , MgO ,`CO_2`
ಕೆಳಗಿನವುಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ : ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲ .
ಈ ಕೆಳಗಿನವುಗಳನ್ನು ಹೆಸರಿಸಿ ಆಮ್ಲ ಮತ್ತು ಪ್ರತ್ಯಾಮ್ಲವು ವರ್ತಿಸಿ ನೀರು ಮತ್ತು ಲವಣವನ್ನು ಕೊಡುವ ಕ್ರಿಯೆ.
ಕೆಳಗಿನವುಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :ನೀರಿನಲ್ಲಿ ವಿಲೀನವಾದಾಗ `H^+` ಅಯಾನುಗಳನ್ನುಉತ್ಪತ್ತಿ ಮಾಡುವ ವಸ್ತು .
ಕೆಳಗಿನವುಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :ನೀರಿನಲ್ಲಿ ವಿಲೀನವಾದಾಗ ಹೈಡ್ರಾಕ್ಸೈಡ್ (OH)- ಅಯಾನುಗಳನ್ನುಉತ್ಪತ್ತಿ ಮಾಡುವ ವಸ್ತು .
ಸೋಡಿಯಂ ಸಲ್ಫೇಟ್ ತಟಸ್ಥ ದ್ರಾವಣ. ಆದರೆ ಸೋಡಿಯಂ ಕಾರ್ಬೋನೇಟ್ ಪ್ರತ್ಯಾಮ್ಲೀಯ ಏಕೆ? ವಿವರಿಸಿ
ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಸಾಮಾನ್ಯವಾಗಿ ಯಾವ ಅನಿಲ ಬಿಡುಗಡೆಯಾಗುತ್ತದೆ ಉದಾಹರಣೆಯೊಂದಿಗೆ ವಿವರಿಸಿ.ಈ ಅನಿಲದ ಅಸ್ತಿತ್ವವನ್ನು ನೀವು ಹೇಗೆ ಪರೀಕ್ಷಿಸುವಿರಿ?
ಹಾಲು ಮೊಸರಾಗಿ ಬದಲಾದಾಗ ಅದರ pH ಮೌಲ್ಯ ಹೇಗೆ ಬದಲಾಗುತ್ತದೆ ? ವಿವರಿಸಿ.
ಹಸಿರು ಬಣ್ಣದ ಫೆರಸ್ ಸಲ್ಪೇಟ್ ಹರಳುಗಳನ್ನು ಕಾಯಿಸಿದಾಗ ಉಂಟಾಗುವ ಬದಲಾವಣೆಯನ್ನು ಸಮೀಕರಣದೊಂದಿಗೆ ತೋರಿಸಿ .ಇಲ್ಲಿ ಉಂಟಾಗುವ ಬದಲಾವಣೆಗೆ ಕಾರಣವನ್ನು ತಿಳಿಸಿ.
ಹಣ್ಣನ್ನು ಕತ್ತರಿಸಿದ ಚಾಕುವನ್ನು ನೀಲಿ ಲಿಟ್ಮಸ್ ದ್ರಾವಣದಲ್ಲಿ ಅದ್ದಿದರೆ, ದ್ರಾವಣದ ಬಣ್ಣ ಕೆಂಪು ಬಣ್ಣಕ್ಕೆ ಬದಲಾಗಿದೆ.ಇದು ಹಣ್ಣಿನ ಯಾವ ಗುಣವನ್ನು ಸೂಚಿಸುತ್ಥದೆ ಮತ್ತು ಏಕೆ?
ಶುಷ್ಕ HCl ಅನಿಲ , ಶುಷ್ಕ ನೀಲಿ ಲಿಟ್ಮಸ್ ಕಾಗದ ಬಣ್ನವನ್ನು ಬದಲಾಯಿಸುವುದಿಲ್ಲ ಏಕೆ?
HCl ಮತ್ತು `HNO_3` ಗಳು ಜಲೀಯ ದ್ರಾವಣದಲ್ಲಿ ಆಮ್ಲೀಯ ಗುಣಗಳನ್ನು ಪ್ರದರ್ಶಿಸುತ್ತವೆ. ಆದರೆ ಆಲ್ಕೋಹಾಲ್ ಮತ್ತು ಗ್ಲುಕೋಸ್ ನ ದ್ರಾವಣಗಳು ಆಮ್ಲೀಯ ಗುಣ ಪ್ರದರ್ಶಿಸುವುದಿಲ್ಲ ಏಕೆ?
ಆಲ್ಕೋಹಾಲ್ ಮತ್ತು ಗ್ಲುಕೋಸ್ ಅಣುಗಳು ಹೈಡ್ರೋಜನ್ ಪರಮಾಣವನ್ನು ಹೊಂದಿದ್ದರೂ ಸಹ ಅವುಗಳು ಆಮ್ಲಗಳಲ್ಲ ಏಕೆ?
ಹೊಳಪು ಕಳೆದುಕೊಂಡ ತಾಮ್ರದ ಪಾತ್ರೆಗಳನ್ನು ಲಿಂಬೆ ಅಥವಾ ಹುಣಸೆ ಹಣ್ಣಿನ ರಸದಿಂದ ಸ್ವಚ್ಛಗೊಳಿಸುವುದನ್ನು ನೀವು ನೋಡಿರುತ್ತೀರಿ . ಈ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ಹಳೆ ವಸ್ತುಗಳು ಏಕೆ ಪರಿಣಾಮಕಾರಿಯಾಗಿವೆ ವಿವರಿಸಿ .
ಕಿತ್ತಳೆ ರಸದ ಹನಿಗಳನ್ನು ಶುದ್ಧ ನೀರಿಗೆ ಸೇರಿಸಿದಾಗ , ಶುದ್ಧ ನೀರಿನ pH ಮೌಲ್ಯ ಹೇಗೆ ಬದಲಾಗುತ್ತದೆ ? ಅದೇ ರೀತಿ ನಿಂಬೆ ರಸದ ಹನಿಗಳನ್ನು ಶುದ್ಧ ನೀರಿಗೆ ಸೇರಿಸಿದರೆ pH ಮೌಲ್ಯದಲ್ಲಿ ಹೆಚ್ಚಿನ ಬದಲಾವಣೆ ಆಗುತ್ತದೆಯೇ?
ಮನೆ ನಿರ್ಮಿಸುವಾಗ ನಿರ್ಮಾಣಕಾರರು ನೆಲ ಮತ್ತು ಅಡುಗೆ ಟೇಬಲ್ ಗೆ ಅಮೃತ ಶಿಲೆ ಕಲ್ಲನ್ನು ಬಳಸುತ್ತಾರೆ .ಆದರೆ ಅಡುಗೆ ಮನೆಯಲ್ಲಿ ಹೆಚ್ಚಾಗಿ ವಿನೇಗರ್ , ನಿಂಬೆರಸ ಮತ್ತು ಹುಣಸೆ ರಸವನ್ನು ಅಡುಗೆಗೆ ಬಳಸುತ್ತಾರೆ.ನೀವು ಮೇಲಿನ ಆಯ್ಕೆಯನ್ನು ಒಪ್ಪುವಿರಾ ಏಕೆ?
ಕೆಳಗಿನವುಗಳೊಂದಿಗೆ ಲಿಟ್ಮಸ್ ನ ವರ್ತನೆ ಏನು? ಅಮೋನಿಯಾ ಅನಿಲ .
ಕೆಳಗಿನ ಜಲೀಯ ದ್ರಾವಣಗಳಿಗೆ ಸೋಡಿಯಂ ಹೈಡ್ರಾಕ್ಸೈಡನ್ನು ಬೆರೆಸಿದಾಗ ಉಂಟಾಗುವ ಬದಲಾವಣೆಗಳನ್ನು ವೀಕ್ಷಿಸಿ ಸರಿದೂಗಿಸಿದ ಸಮೀಕರಣ ಬರೆಯಿರಿ: ಅಲ್ಯೂಮಿನಿಯಂ ಕ್ಲೋರೈಡ್ .
ಪ್ರಬಲ ಮತ್ತು ದುರ್ಬಲ ಆಮ್ಲಗಳಾವುವು? ಈ ಕೆಳಗಿನವುಗಳನ್ನು ಪ್ರಬಲ ಮತ್ತು ದುರ್ಬಲ ಆಮ್ಲಗಳಾಗಿ ವರ್ಗೀಕರಿಸಿ? ಹೈಡ್ರೋಕ್ಲೋರಿಕಾಮ್ಲ, ಸಿಟ್ರಿಕ್ ಆಮ್ಲ, ಅಸಿಟಿಕ್ ಆಮ್ಲ, ನೈಟ್ರಿಕ್ ಆಮ್ಲ, ಫಾರ್ಮಿಕ್ ಆಮ್ಲ, ಸುಲ್ಪುರಿಕ್ ಆಮ್ಲ?
ನೀರಿನಲ್ಲಿ ಸರಾಗವಾಗಿ ವಿಲೀನವಾಗುವ ಪ್ರತ್ಯಾಮ್ಲಗಳನ್ನು ಏನೆಂದು ಕರೆಯುತ್ತಾರೆ?ಉದಾಹರಣೆ ಕೊಡಿ.
ಹಲ್ಲಿನ ಕುಳಿಗೆ pH ಹೇಗೆ ಕಾರಣವಾಗಿದೆ? ಇದನ್ನು ಹೇಗೆ ತಡೆಗಟ್ಟಬಹುದು?
ಜೇನು ಕಡಿತದಿಂದ ನೋವು ಮತ್ತು ಉರಿಯುತ ಉಂಟಾಗುತ್ತದೆ ಏಕೆ? ಕಡಿತದ ಜಾಗದಲ್ಲಿ ಅಡುಗೆ ಸೋಡದಿಂದ ಉಜ್ಜುವುದರಿಂದ ನೋವು ಮತ್ತು ಉರಿಯುತ ಕಡಿಮೆಯಾಗುತ್ತದೆ ಹೇಗೆ?
X ಮತ್ತು Y ಎಂಬ ಎರಡು ದ್ರಾವಣಗಳನ್ನು ಸಾರ್ವತ್ರಿಕ ಸೂಚಕದಿಂದ ಪರೀಕ್ಷಿಸಲಾಗಿದೆ. ದ್ರಾವಣ X ಕಿತ್ತಳೆ ಬಣ್ಣಕ್ಕೆ, ದ್ರಾವಣ Y ಕೆಂಪು ಬಣ್ಣಕ್ಕೆ ಬದಲಾಗಿದೆ,ಇವುಗಳಲ್ಲಿ ಯಾವುದು ಪ್ರಬಲ ಆಮ್ಲ ?
ಪ್ರಬಲ ಮತ್ತು ದುರ್ಬಲ ಆಮ್ಲಗಳ ಅರ್ಥ ತಿಳಿಸಿ.ಒಂದೊಂದು ಉದಾಹರಣೆ ಕೊಡಿ.
ಕೆಳಗಿನವುಗಳಲ್ಲಿ ಆಮ್ಲಗಳನ್ನು ಹೆಸರಿಸಿ : ವಿನೇಗರ್ .
ಕೆಳಗಿನವುಗಳಲ್ಲಿ ಆಮ್ಲಗಳನ್ನು ಹೆಸರಿಸಿ : ಟೊಮೊಟೊ.
ಕೆಳಗಿನವುಗಳಲ್ಲಿ ಆಮ್ಲಗಳನ್ನು ಹೆಸರಿಸಿ : ಹುಣಸೆ .
ಒಂದು ದ್ರವದ pH 7 ಕ್ಕಿಂತ ಕಡಿಮೆ ಇದೆ ಅದು ಆಮ್ಲೀಯ ದ್ರಾವಣವಾಗಿದೆ: 7 ರಿಂದ 14 pH ಹೊಂದಿರುವ ದರಾವಣದ ಸ್ಥಿತಿಯನ್ನು ಹೆಸರಿಸಿ.
ಒಂದು ದ್ರವದ pH 7 ಕ್ಕಿಂತ ಕಡಿಮೆ ಇದೆ ಅದು ಆಮ್ಲೀಯ ದ್ರಾವಣವಾಗಿದೆ: pH ಮೌಲ್ಯ ಹೆಚ್ಚಿದ ಹಾಗೆ ದ್ರಾವಣದಲ್ಲಿನ ಯಾವ ಆಯಾನುಗಳ ಸಾರತೆ ಹೆಚ್ಚುತ್ತದೆ ?
ಒಂದು ದ್ರವದ pH 7 ಕ್ಕಿಂತ ಕಡಿಮೆ ಇದೆ ಅದು ಆಮ್ಲೀಯ ದ್ರಾವಣವಾಗಿದೆ: pH ಮೌಲ್ಯ ಪತ್ತೆ ಹಚ್ಚಲು ಬಳಸುವ ವಿಧಾನವನ್ನು ತಿಳಿಸಿ.
ಕಾರಣದೊಂದಿಗೆ ತಿಳಿಸಿ : ಯಾವುದು ವಿದ್ಯುತ್ ವಾಹಕ ಮತ್ತು ವಿದ್ಯುತ್ತಿನ ಅವಾಹಕ? : ಗ್ಲುಕೋಸ್ ದ್ರಾವಣ .
ಕಾರಣದೊಂದಿಗೆ ತಿಳಿಸಿ : ಯಾವುದು ವಿದ್ಯುತ್ ವಾಹಕ ಮತ್ತು ವಿದ್ಯುತ್ತಿನ ಅವಾಹಕ? : ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲ
ಒಂದೇ ಸಾರತೆಯ `CH_3CHOOH` ಮತ್ತು HCl ಗಳಲ್ಲಿ ಯಾವುದು ಪ್ರಬಲ ಏಕೆ?
ನೀರನ್ನು ಸೇರಿಸುವುದರಿಂದ ಪ್ರಬಲತೆಯ ಮೇಲೆ ಉಂಟಾಗುವ ಪರಿಣಾಮವೇನು ?
10 ml ನೀರು ಮತ್ತು 5 ml ಸಲ್ಫೂರಿಕ್ ಆಮ್ಲವನ್ನು ಒಂದು ಬೀಕರಿನಲ್ಲಿ ಮಿಶ್ರಣಮಾಡಿ : ಇಲ್ಲಿ ಬಳಸುವ ವಿಧಾನವನ್ನು ತಿಳಿಸಿ.
10 ml ನೀರು ಮತ್ತು 5 ml ಸಲ್ಫೂರಿಕ್ ಆಮ್ಲವನ್ನು ಒಂದು ಬೀಕರಿನಲ್ಲಿ ಮಿಶ್ರಣಮಾಡಿ :ಈ ವಿಧಾನವನ್ನೇ ಬಳಸಲು ಕಾರಣವೇನು ?
10 ml ನೀರು ಮತ್ತು 5 ml ಸಲ್ಫೂರಿಕ್ ಆಮ್ಲವನ್ನು ಒಂದು ಬೀಕರಿನಲ್ಲಿ ಮಿಶ್ರಣಮಾಡಿ :ಈ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ
ಆಮ್ಲಗಳ ಯಾವುದಾದರೂ ಮೂರು ರಾಸಾಯನಿಕ ಲಕ್ಷಣಗಳನ್ನು ಉದಾಹರಣೆಯೊಂದಿಗೆ ವಿವರಿಸಿ.
ಸುಗಂಧ ತನ್ನ ಶಾಲಾ ಪ್ರಯೋಗಾಲಯದಲ್ಲಿ ಕೆಲವು ರಾಸಾಯನಿಕಗಳನ್ನು ಬಳಸಿ HCl ಅನಿಲವನ್ನು ತಯಾರಿಸಿದ್ದಾಳೆ.ಅವಳು ಶುಷ್ಕ ಮತ್ತು ಹಸಿ ಲಿಟ್ಮಸ್ ಕಾಗದವನ್ನು ಅನಿಲದ ಸಂಪರ್ಕಕ್ಕೆ ತರುತ್ತಾಳೆ: HCl ಅನಿಲ ತಯಾರಿಸಲು ಬಳಸಿದ ರಾಸಾಯನಿಕಗಳನ್ನು ಹೆಸರಿಸಿ.
ಸುಗಂಧ ತನ್ನ ಶಾಲಾ ಪ್ರಯೋಗಾಲಯದಲ್ಲಿ ಕೆಲವು ರಾಸಾಯನಿಕಗಳನ್ನು ಬಳಸಿ HCl ಅನಿಲವನ್ನು ತಯಾರಿಸಿದ್ದಾಳೆ. ಅವಳು ಶುಷ್ಕ ಮತ್ತು ಹಸಿ ಲಿಟ್ಮಸ್ ಕಾಗದವನ್ನು ಅನಿಲದ ಸಂಪರ್ಕಕ್ಕೆ ತರುತ್ತಾಳೆ : ಶುಷ್ಕ ಮತ್ತು ತೇವ ಲಿಟ್ಮಸ್ ಕಾಗದಗಳು ಯಾವ ಬಣ್ನಕ್ಕೆ ಬದಲಾದವು?
ಸುಗಂಧ ತನ್ನ ಶಾಲಾ ಪ್ರಯೋಗಾಲಯದಲ್ಲಿ ಕೆಲವು ರಾಸಾಯನಿಕಗಳನ್ನು ಬಳಸಿ HCl ಅನಿಲವನ್ನು ತಯಾರಿಸಿದ್ದಾಳೆ.ಅವಳು ಶುಷ್ಕ ಮತ್ತು ಹಸಿ ಲಿಟ್ಮಸ್ ಕಾಗದವನ್ನು ಅನಿಲದ ಸಂಪರ್ಕಕ್ಕೆ ತರುತ್ತಾಳೆ : HCl ಅನಿಲ ನೀರಿನೊಂದಿಗೆ ವಲೀನವಾದಾಗ ಉಂಟಾಗುವ ಅಯಾನುಗಳನ್ನು ತೋರಿಸಿ.
A ವಿದ್ಯಾರ್ಥಿ A,B ಮತ್ತು C ಎಂಬ ಮೂರು ಬೀಕರಗಳಲ್ಲಿ ಕ್ರಮವಾಗಿ ಗ್ಲುಕೋಸ್, ಆಲ್ಕೋಹಾಲ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲದ ಜಲೀಯ ದ್ರಾವಣಗಳನ್ನು ಚಿತ್ರದಲ್ಲಿರುವಂತೆ ಭರ್ತಿಮಾಡಲಾಗಿದೆ:ಸ್ವಿಚ್ ಆನ್ ಮಾಡಿ ಬಲ್ಬ್ ಪ್ರಜ್ವಲಿಸುವುದನ್ನು ವೀಕ್ಷಿಸಿ ನಿಮ್ಮ ತೀರ್ಮಾನ ತಿಳಿಸಿ.
`(#OSW_CHE_QB_X_C02_U01_E05_029_Q01#)`
A ವಿದ್ಯಾರ್ಥಿ A,B ಮತ್ತು C ಎಂಬ ಮೂರು ಬೀಕರಗಳಲ್ಲಿ ಕ್ರಮವಾಗಿ ಗ್ಲುಕೋಸ್, ಆಲ್ಕೋಹಾಲ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲದ ಜಲೀಯ ದ್ರಾವಣಗಳನ್ನು ಚಿತ್ರದಲ್ಲಿರುವಂತೆ ಭರ್ತಿಮಾಡಲಾಗಿದೆ:ಮೇಲಿನ ವೀಕ್ಷಣೆಗೆ ಸೂಕ್ತಕಾರಣ ನೀಡಿ.
A ವಿದ್ಯಾರ್ಥಿ A,B ಮತ್ತು C ಎಂಬ ಮೂರು ಬೀಕರಗಳಲ್ಲಿ ಕ್ರಮವಾಗಿ ಗ್ಲುಕೋಸ್, ಆಲ್ಕೋಹಾಲ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲದ ಜಲೀಯ ದ್ರಾವಣಗಳನ್ನು ಚಿತ್ರದಲ್ಲಿರುವಂತೆ ಭರ್ತಿಮಾಡಲಾಗಿದೆ:ಸ್ಬೀಕರ್ B ನಲ್ಲಿ ಆಲ್ಕೋಹಾಲ್ ತೆಗೆದು , ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ ತುಂಬಿ ಪ್ರಯೋಗ ಪುನರಾವರ್ತಿಸಿ.ಸೂಕ್ತ ಕಾರಣ ನೀಡಿ.
ಸಾರರಿಕ್ತ ಸಲ್ಫೂರಿಕ್ ಆಮ್ಲದೊಂದಿಗೆ ಲೋಹವನ್ನು ವರ್ತಿಸುವಂತೆ ಮಾಡಿದಾಗ ಬಿಡುಗಡೆಯಾಗುವ ಅನಿಲವನ್ನು ಸಂಗ್ರಹಿಸುವ ವಿಧಾನವನ್ನು ಚಿತ್ರದ ಮೂಲಕ ತೋರಿಸಿ:ಅನಿಲವನ್ನು ಹೆಸರಿಸಿ.
ಸಾರರಿಕ್ತ ಸಲ್ಫೂರಿಕ್ ಆಮ್ಲದೊಂದಿಗೆ ಲೋಹವನ್ನು ವರ್ತಿಸುವಂತೆ ಮಾಡಿದಾಗ ಬಿಡುಗಡೆಯಾಗುವ ಅನಿಲವನ್ನು ಸಂಗ್ರಹಿಸುವ ವಿಧಾನವನ್ನು ಚಿತ್ರದ ಮೂಲಕ ತೋರಿಸಿ : ಅನಿಲ ನೀರಿನಲ್ಲಿ ವಿಲೀನವಾಗುತ್ತದೋ ಅಥವಾ ಇಲ್ಲವೋ?
ಸಾರರಿಕ್ತ ಸಲ್ಫೂರಿಕ್ ಆಮ್ಲದೊಂದಿಗೆ ಲೋಹವನ್ನು ವರ್ತಿಸುವಂತೆ ಮಾಡಿದಾಗ ಬಿಡುಗಡೆಯಾಗುವ ಅನಿಲವನ್ನು ಸಂಗ್ರಹಿಸುವ ವಿಧಾನವನ್ನು ಚಿತ್ರದ ಮೂಲಕ ತೋರಿಸಿ : ಅನಿಲವನ್ನು ಹೇಗೆ ಪರೀಕ್ಷಿಸುವಿರಿ?
ಸಾರರಿಕ್ತ ಸಲ್ಫೂರಿಕ್ ಆಮ್ಲದೊಂದಿಗೆ ಲೋಹವನ್ನು ವರ್ತಿಸುವಂತೆ ಮಾಡಿದಾಗ ಬಿಡುಗಡೆಯಾಗುವ ಅನಿಲವನ್ನು ಸಂಗ್ರಹಿಸುವ ವಿಧಾನವನ್ನು ಚಿತ್ರದ ಮೂಲಕ ತೋರಿಸಿ : ಮೇಲಿನ ಕ್ರಿಯೆಯಲ್ಲಿ ಸತುವನ್ನು ಬಳಸಿದ್ದರೆ ಅದರ ರಾಸಾಯನಿಕ ಸಮೀಕರಣ ಬರೆಯಿರಿ.
ಸಾರರಿಕ್ತ ಸಲ್ಫೂರಿಕ್ ಆಮ್ಲದೊಂದಿಗೆ ಲೋಹವನ್ನು ವರ್ತಿಸುವಂತೆ ಮಾಡಿದಾಗ ಬಿಡುಗಡೆಯಾಗುವ ಅನಿಲವನ್ನು ಸಂಗ್ರಹಿಸುವ ವಿಧಾನವನ್ನು ಚಿತ್ರದ ಮೂಲಕ ತೋರಿಸಿ : ಬಿಡುಗಡೆಯಾಗುವ ಅನಿಲದ ಒಂದು ಕೈಗಾರಿಕಾ ಉಪಯೋಗವನ್ನು ತಿಳಿಸಿ.
ಕೆಳಗಿನವುಗಳೊಂದಿಗೆ ಸಾರರಿಕ್ತ HCl ನ ವರ್ತನೆಯನ್ನು ರಾಸಾಯನಿಕ ಸಮೀಕರಣದೊಂದಿಗೆ ತಿಳಿಸಿ : ಮೆಗ್ನಿಸಿಯಂ ರಿಬ್ಬನ್ .
ಕೆಳಗಿನವುಗಳೊಂದಿಗೆ ಸಾರರಿಕ್ತ HCl ನ ವರ್ತನೆಯನ್ನು ರಾಸಾಯನಿಕ ಸಮೀಕರಣದೊಂದಿಗೆ ತಿಳಿಸಿ : ಸೋಡಿಯಂ ಹೈಡ್ರಾಕ್ಸೈಡ್.
ಕೆಳಗಿನವುಗಳೊಂದಿಗೆ ಸಾರರಿಕ್ತ HCl ನ ವರ್ತನೆಯನ್ನು ರಾಸಾಯನಿಕ ಸಮೀಕರಣದೊಂದಿಗೆ ತಿಳಿಸಿ : ಪುಡಿಮಾಡಿದ ಮೊಟ್ಟೆಯ ಕವಚಗಳು
ತಾಮ್ರದ ಸಲ್ಫೇಟಿನ ಕೆಲವು ಹರಳುಗಳನ್ನು B/F ಶುಷ್ಕ ಪ್ರನಾಳದಲ್ಲಿ ಕಾಸಿದಾಗ : ಕಾಸುವುದಕ್ಕೂ ಮೊದಲು ಮತ್ತು ನಂತರ ಅದರ ಬಣ್ಣವೇನು ?
ತಾಮ್ರದ ಸಲ್ಫೇಟಿನ ಕೆಲವು ಹರಳುಗಳನ್ನು B/F ಶುಷ್ಕ ಪ್ರನಾಳದಲ್ಲಿ ಕಾಸಿದಾಗ : ಬಣ್ಣ ಬದಲಾಗಲು ಕಾರಣವೇನು?
ತಾಮ್ರದ ಸಲ್ಫೇಟಿನ ಕೆಲವು ಹರಳುಗಳನ್ನು B/F ಶುಷ್ಕ ಪ್ರನಾಳದಲ್ಲಿ ಕಾಸಿದಾಗ : ಪುನಃ ಮೊದಲಿನ ಬಣ್ಣಕ್ಕೆ ಬರುತ್ತದೆಯೇ ? ಹೇಗೆ ?
ಊಟ ಮಾಡುವಾಗ ಸಾಂಬರಿನ ಕೆಲವು ಹನಿ ಬಿಳಿ ಶರ್ಟ್ ನ ಮೇಲೆ ಬಿದ್ದಿದೆ.ನೀವು ತಕ್ಷಣ ಸಾಬೂನಿನಿಂದ ಅದನ್ನು ಉಜ್ಜಿ ತೊಳೆಯುತ್ತೀರಿ.ಸಾಬೂನಿನಿಂದ ತೊಳೆದಾಗ ಹಳದಿ ಬಣ್ಣ ಏನಾಗುತ್ತದೆ? ಏಕೆ? ಪುನಃ ಸಾಕಷ್ಟು ನೀರಿನಿಂದ ಶರ್ಟನ್ನು ತೊಲೆದಾಗ ಉಂಟಾಗುವ ಬದಲಾವಣೆ ಏನು?
ತಂಪು ಪಾನೀಯ ಕುಡಿದ ನಂತರ ವ್ಯಕ್ತಿ ಆಮ್ಲೀಯತೆಯಿಂದ ಬಳಲುತ್ತಾನೆ ಏಕೆ ?
ಕೆಳಗಿನ ಚಿತ್ರದಲ್ಲಿ ಹೈಡ್ರೋಜನ್ ಅನಿಲದ ಉತ್ಪಾದನೆಯನ್ನು ತೋರಿಸಲಾಗಿದೆ. ಕೆಳಗಿನ ಬದಲಾವಣೆಗಳಿಂದ ಉಂಟಾಗುವ ಪರಿಣಾಮಗಳೇನು ? : ಸತುವಿನ ತುಣುಕುಗಳ ಬದಲಾಗಿ ಅಷ್ಟೇ ಪ್ರಮಾಣದ ಸತುವಿನ ಪುಡಿಯನ್ನು ಗಾಜಿನ ಪ್ರನಾಳದಲ್ಲಿ ತೆಗೆದುಕೊಳ್ಳುವುದು.
ಕೆಳಗಿನ ಚಿತ್ರದಲ್ಲಿ ಹೈಡ್ರೋಜನ್ ಅನಿಲದ ಉತ್ಪಾದನೆಯನ್ನು ತೋರಿಸಲಾಗಿದೆ. ಕೆಳಗಿನ ಬದಲಾವಣೆಗಳಿಂದ ಉಂಟಾಗುವ ಪರಿಣಾಮಗಳೇನು ? : ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ ಬದಲಾಗಿ ಸಾರರಿಕ್ತ HCl ಬಳಸುವುದು.
ಕೆಳಗಿನ ಚಿತ್ರದಲ್ಲಿ ಹೈಡ್ರೋಜನ್ ಅನಿಲದ ಉತ್ಪಾದನೆಯನ್ನು ತೋರಿಸಲಾಗಿದೆ. ಕೆಳಗಿನ ಬದಲಾವಣೆಗಳಿಂದ ಉಂಟಾಗುವ ಪರಿಣಾಮಗಳೇನು ? : ಸತುವಿನ ಬದಲಾಗಿ, ತಾಮ್ರದ ತುಣುಕುಗಳನ್ನು ಬಳಸುವುದು.
ಕೆಳಗಿನ ಚಿತ್ರದಲ್ಲಿ ಹೈಡ್ರೋಜನ್ ಅನಿಲದ ಉತ್ಪಾದನೆಯನ್ನು ತೋರಿಸಲಾಗಿದೆ. ಕೆಳಗಿನ ಬದಲಾವಣೆಗಳಿಂದ ಉಂಟಾಗುವ ಪರಿಣಾಮಗಳೇನು ?: ಸಾರರಿಕ್ತ `H_2SO_4` ಬದಲಾಗಿ ,NaOH ನ್ನು ಪ್ರನಾಳದಲ್ಲಿ ಬಳಸುವುದು.
pH ಅಳತೆ ಪಟ್ಟಿ ಎಂದರೇನು ? H+(aq) ಮತ್ತು OH-(aq) ಅಯಾನುಗಳ ಸಾರತೆಗೆ ಅನುಗುಣವಾಗಿ pH ನ ಬದಲಾವಣೆ ತೋರಿಸುವ ಚಿತ್ರ ಬರೆಯಿರಿ.
ಆಮ್ಲೀಯ, ಪ್ರತ್ಯಾಮ್ಲೀಯ ಮತ್ತು ತಟಸ್ಥ ದ್ರಾವಣಗಳ pH ವ್ಯಾಪ್ತಿಯನ್ನು ಕ್ರಮವಾಗಿ ತಿಳಿಸಿ.
ಸಾರ್ವತ್ರಿಕ ಸೂಚಕ ಇದನ್ನು ವ್ಯಾಖ್ಯಾನಿಸಿ.ಯಾವ ಉದ್ದೇಶಕ್ಕೆ ಇದನ್ನು ಬಳಸುತ್ತಾರೆ ?
A ಮತ್ತುB ದ್ರಾವಣದ ಮೌಲ್ಯ ಕ್ರಮವಾಗಿ 3.0 ಮತ್ತು 9.5 ಇವುಗಳಲ್ಲಿ ಯಾವುದು ನೀಲಿ ಲಿಟ್ಮಸ್ ನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸುತ್ತದೆ.ಯಾವುದು ಪಿನಾಫ್ತಲಿನ್ ನನ್ನು ನೇರಳೆ ಬಣ್ಣಕ್ಕೆ ಬದಲಾಯಿಸುತ್ತದೆ ?
ನೀರು ತಟಸ್ಥ ವಸ್ತು. ಅಸವಿತ ನೀರು ತುಂಬಿರುವ ಗಾಜಿನ ಪ್ರನಾಳಕ್ಕೆ ಕೆಲವು ಹನಿ ಸಾರ್ವತ್ರಿಕ ಸೂಚಕ ಹಾಕಿದಾಗ, ಅದು ಯಾವ ಬಣ್ನಕ್ಕೆ ಬದಲಾಗುತ್ತದೆ?
ಕೆಳಗಿನವುಗಳಿಗೆ ಉತ್ತರಿಸಿ: ಜಲೀಯ ದ್ರಾವಣದ H+ ಅಯಾನುಗಳ ಸಾರತೆಗೂ ಮತ್ತು ಅದರ pH ಗೂ ಇರುವ ಸಂಬಂಧವನ್ನು ತಿಳಿಸಿ.
ಕೆಳಗಿನವುಗಳಿಗೆ ಉತ್ತರಿಸಿ: ಒಂದು ದ್ರಾವಣದ pH ಮೌಲ್ಯ 7.0 ಇದು ಆಮ್ಲೀಯವೇ,ಪ್ರತ್ಯಾಮ್ಲೀಯವೇ ಅಥವಾ ತಟಸ್ಥವೇ ?
ಕೆಳಗಿನವುಗಳಿಗೆ ಉತ್ತರಿಸಿ: 1 ಮೋಲ್ HCl ಅಥವಾ 1 ಮೋಲ್ NaOH ದ್ರಾವಣ ಇವುಗಳಲ್ಲಿ ಯಾವುದು ಹೆಚ್ಚಿನ pH ಮೌಲ್ಯ ಹೊಂದಿದೆ?
ಕೆಳಗಿನವುಗಳಿಗೆ ಉತ್ತರಿಸಿ: ಹಲ್ಲಿನ ಎನಾಮಲ್ ನಮ್ಮ ದೇಹದಲ್ಲಿನ ಗಟ್ಟಿಯಾದ ವಸ್ತು ಚಾಕೊಲೇಟ್ ಅಥವಾ ಸಿಹಿ ತಿನ್ನುವುದರಿಂದ ಇದು ಹೇಗೆ ಹಾನಿಗೊಳಗಾಗುತ್ತದೆ? ಇದನ್ನು ತಟೆಗಟ್ಟಲು ನಾವು ಏನು ಮಾಡಬೇಕು?
ಆಮ್ಲಗಳು ಮತ್ತು ಪ್ರತ್ಯಾಮ್ಲಗಳೂ ಸಹ ನೀರಿನಲ್ಲಿ ಅಯಾನೀಕರಣ ಹೊಂದುತ್ತವೆ. ಅವು ಉತ್ಪತ್ತಿ ಮಾಡುವ ಅಯಾನುಗಳನ್ನು ಹೆಸರಿಸಿ.
ಒಂದೇ ಸಾರತೆಯ `CH_3CHOOH` ಮತ್ತು HCl ಗಳಲ್ಲಿ ಯಾವುದು ಪ್ರಬಲ ಏಕೆ?
ಆಮ್ಲವನ್ನು ಸಾರಾರಿಕ್ತಗೊಳಿಸಿದಾಗ , ಹೈಡ್ರೋನಿಯಂ ಅಯಾನುಗಳ ಸಾರತೆಯ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ?
ಅಸಿಟಿಕ್ ಆಮ್ಲಕ್ಕಿಂತ ಹೈಡ್ರೋಕ್ಲೋರಿಕ್ ಆಮ್ಲ ಹೆಚ್ಚು ಪ್ರಬಲ ಆಮ್ಲ ಏಕೆ? ವಿವರಿಸಿ. ಇದನ್ನು ಹೇಗೆ ಪರೀಕ್ಷಿಸಲಾಗುತ್ತದೆ?
ನಿಮಗೆ A,B,C ಮತ್ತು D ಎಂಬ ನಾಲ್ಕು ದ್ರಾವಣಗಳನ್ನು ನೀಡಲಾಗಿದೆ.ಅವುಗಳ pH ಕ್ರಮವಾಗಿ 6,9,12 ಮತ್ತು 7 : ಅತಿಯಾದ ಆಮ್ಲೀಯ, ಅತಿಯಾದ ಪ್ರತ್ಯಾಮ್ಲೀಯ ದ್ರಾವಣಗಳನ್ನು ಗುರುತಿಸಿ.
ನಿಮಗೆ A,B,C ಮತ್ತು D ಎಂಬ ನಾಲ್ಕು ದ್ರಾವಣಗಳನ್ನು ನೀಡಲಾಗಿದೆ.ಅವುಗಳ ಕ್ರಮವಾಗಿ 6,9,12 ಮತ್ತು 7 : ಮೇಲಿನ ನಾಲ್ಕು ದ್ರಾವಣಗಳನ್ನು `H^+` ಅಯಾನುಗಳ ಸಾರತೆಯ ಏರಿಕೆಯ ಕ್ರಮದಲ್ಲಿ ಜೋಡಿಸಿ.
ನಿಮಗೆ A,B,C ಮತ್ತುD ಎಂಬ ನಾಲ್ಕು ದ್ರಾವಣಗಳನ್ನು ನೀಡಲಾಗಿದೆ.ಅವುಗಳ ಕ್ರಮವಾಗಿ 6,9,12 ಮತ್ತು 7 : C ಮತ್ತು D ದ್ರಾವಣದಲ್ಲಿ pH ಪೇಪರನ್ನು ಅದ್ದಿದಾಗ ಉಂಟಾಗುವ ಬಣ್ಣದ ಬದಲಾವಣೆಯನ್ನು ತಿಳಿಸಿ.
ಕೆಳಗಿನ ಕೋಷ್ಟಕದಲ್ಲಿ ಸೂಚಕಗಳಾದ ಲಿಟ್ಮಸ್, ಪೀನಾಫ್ತಲಿನ್ ಮತ್ತು ಮಿಥೈಲ್ ಆರೆಂಜ್ ನೀಡಲಾಗಿದೆ.ಆಮ್ಲ ಮತ್ತು ಪ್ರತ್ಯಾಮ್ಲಗಳಲ್ಲಿ ಅವುಗಳ ಬಣ್ಣಗಳನ್ನು ತಿಳಿಸಿ.
A ಮತ್ತು B ದ್ರಾವಣಗಳನ್ನು ಆಮ್ಲೀಯ ಮತ್ತು ಪ್ರತ್ಯಾಮ್ಲೀಯವಾಗಿ ವರ್ಗೀಕರಿಸಿ. ಕಾರಣ ಕೊಡಿ.ದ್ರಾವಣ `A :[H^+]` ಅಯಾನುಗಳ ಸಂಖ್ಯೆ `1.0 **10^7` ಗಿಂತ ಹೆಚ್ಚು .
A ಮತ್ತು B ದ್ರಾವಣಗಳನ್ನು ಆಮ್ಲೀಯ ಮತ್ತು ಪ್ರತ್ಯಾಮ್ಲೀಯವಾಗಿ ವರ್ಗೀಕರಿಸಿ. ಕಾರಣ ಕೊಡಿ.ದ್ರಾವಣ `B :[H^+]` ಅಯಾನುಗಳ ಸಂಖ್ಯೆ `1.0 **10^-7` ಗಿಂತ ಹೆಚ್ಚು
ಹಳ್ಳಿಯ ಬೀದಿಯಲ್ಲಿ ಮ್ಯಾಜಿಕ್ ತೋರಿಸುತ್ತಿರುವ ಸ್ಥಳೀಯ ಮ್ಯಾಜಿಷಿಯನ್ (ಮಾಂತ್ರಿಕ) ಮೊಟ್ಟೆಯ ಕವಚದ ತುಣುಕು.ಗಳಿಗೆ ದ್ರಾವಣವನ್ನು ಸುರಿಯುತ್ತಾನೆ. ಇದರಿಂದ ನೊರೆಯೊಂದಿಗೆ ಅನಿಲ ಬಿಡುಗಡೆಯಾಗುತ್ತದೆ.ಇದರ ಸಮೀಪಕ್ಕೆ ತಂದ ಉರಿಯುತ್ತಿರುವ ಬೆಂಕಿ ಕಡ್ಡಿ ನಂದುತ್ತದೆ.: ಮಾಂತ್ರಿಕ ಬಳಸಿದ ದ್ರಾವಣ ಮತ್ತು ಮೊಟ್ಟೆಯ ಕವಚದಲ್ಲಿ ರಾಸಾಯನಿಕವನ್ನು ಗುರುತಿಸಿ.
ಹಳ್ಳಿಯ ಬೀದಿಯಲ್ಲಿ ಮ್ಯಾಜಿಕ್ ತೋರಿಸುತ್ತಿರುವ ಸ್ಥಳೀಯ ಮ್ಯಾಜಿಷಿಯನ್ (ಮಾಂತ್ರಿಕ) ಮೊಟ್ಟೆಯ ಕವಚದ ತುಣುಕು.ಗಳಿಗೆ ದ್ರಾವಣವನ್ನು ಸುರಿಯುತ್ತಾನೆ. ಇದರಿಂದ ನೊರೆಯೊಂದಿಗೆ ಅನಿಲ ಬಿಡುಗಡೆಯಾಗುತ್ತದೆ.ಇದರ ಸಮೀಪಕ್ಕೆ ತಂದ ಉರಿಯುತ್ತಿರುವ ಬೆಂಕಿ ಕಡ್ಡಿ ನಂದುತ್ತದೆ.:ನೊರೆ ಉಂಟಾಗಲು ಕಾರಣವೇನು ? ದ್ರಾವಣ B ಮತ್ತು C ಗಳು ಪ್ರತ್ಯಾಮ್ಲೀಯ ಸ್ವಭಾವ ಹೊಂದಿವೆಯೆ?
ಹಳ್ಳಿಯ ಬೀದಿಯಲ್ಲಿ ಮ್ಯಾಜಿಕ್ ತೋರಿಸುತ್ತಿರುವ ಸ್ಥಳೀಯ ಮ್ಯಾಜಿಷಿಯನ್ (ಮಾಂತ್ರಿಕ) ಮೊಟ್ಟೆಯ ಕವಚದ ತುಣುಕು.ಗಳಿಗೆ ದ್ರಾವಣವನ್ನು ಸುರಿಯುತ್ತಾನೆ. ಇದರಿಂದ ನೊರೆಯೊಂದಿಗೆ ಅನಿಲ ಬಿಡುಗಡೆಯಾಗುತ್ತದೆ.ಇದರ ಸಮೀಪಕ್ಕೆ ತಂದ ಉರಿಯುತ್ತಿರುವ ಬೆಂಕಿ ಕಡ್ಡಿ ನಂದುತ್ತದೆ.: ಸರಿದೂಗಿಸಿದ ಸಮೀಕರಣ ಬರೆಯಿರಿ.
ಹಳ್ಳಿಯ ಬೀದಿಯಲ್ಲಿ ಮ್ಯಾಜಿಕ್ ತೋರಿಸುತ್ತಿರುವ ಸ್ಥಳೀಯ ಮ್ಯಾಜಿಷಿಯನ್ (ಮಾಂತ್ರಿಕ) ಮೊಟ್ಟೆಯ ಕವಚದ ತುಣುಕು.ಗಳಿಗೆ ದ್ರಾವಣವನ್ನು ಸುರಿಯುತ್ತಾನೆ. ಇದರಿಂದ ನೊರೆಯೊಂದಿಗೆ ಅನಿಲ ಬಿಡುಗಡೆಯಾಗುತ್ತದೆ.ಇದರ ಸಮೀಪಕ್ಕೆ ತಂದ ಉರಿಯುತ್ತಿರುವ ಬೆಂಕಿ ಕಡ್ಡಿ ನಂದುತ್ತದೆ.: ಮೊಟ್ಟೆಯ ಕವಚದಲ್ಲಿನ ರಾಸಾಯನಿಕ ಸಾಮಾನ್ಯ ಹೆಸರನ್ನು ತಿಳಿಸಿ.
ಆಮ್ಲೀಯ ದ್ರಾವಣ ವಿದ್ಯುತ್ಪ್ರವಾಹ ಉಂಟು ಮಾಡುವ ಪ್ರಯೋಗದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.
ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಸಾಮಾನ್ಯವಾಗಿ ಯಾವ ಅನಿಲ ಬಿಡುಗಡೆಯಾಗುತ್ತದೆ ಉದಾಹರಣೆಯೊಂದಿಗೆ ವಿವರಿಸಿ.ಈ ಅನಿಲದ ಅಸ್ತಿತ್ವವನ್ನು ನೀವು ಹೇಗೆ ಪರೀಕ್ಷಿಸುವಿರಿ?
ಸತುವಿನೊಂದಿಗೆ ವರ್ತನೆಯ ರಾಸಾಯನಿಕ ಸಮೀಕರಣ ಬರೆಯಿರಿ.: ಹೈಡ್ರೋಕ್ಲೋರಿಕ್ ಆಮ್ಲ
ಸತುವಿನೊಂದಿಗೆ ವರ್ತನೆಯ ರಾಸಾಯನಿಕ ಸಮೀಕರಣ ಬರೆಯಿರಿ.: ಸೋಡಿಯಂ ಹೈಡ್ರಾಕ್ಸೈಡ್, ಎರಡು ಕ್ರಿಯೆಗಳಿಂದ ಉಂಟಾಗುವ ಲವಣಗಳನ್ನು ಹೆಸರಿಸಿ.
EXERCISE questions and complete solutions for chapter ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು of OSWAAL PUBLICATION of Class 10