Class 8 | CHEMISTRY |
Chapter | ಹದಿ ಹರೆಯಕ್ಕೆ ಪ್ರವೇಶ |
CAMBRIDGE PUBLICATION(KANNAD) | EXERCISE |
Number Of Questions | 50 |
Academic Year | 2023-24 |
ದೇಹದಲ್ಲಿ ನಡೆಯುವ ಬದಲಾವಣೆಗಳಿಗೆ ಕಾರಣವಾಗುವ ಅಂತಃಸ್ರಾವಕ ಗ್ರಂಥಿಗಳು ಸ್ರವಿಸುವ ರಾಸಾಯನಿಕಗಳನ್ನು ಸೂಚಿಸಲು ಬಳಸುವ ಪದ ಯಾವುದು?
ಹದಿಹರೆಯವನ್ನು ವ್ಯಾಖ್ಯಾನಿಸಿ.
ಋತುಸ್ರಾವ ಎಂದರೇನು? ವಿವರಿಸಿ.
ಪ್ರೌಢಾವಸ್ಥೆಯಲ್ಲಿ ನಡೆಯುವ ದೈಹಿಕ ಬದಲಾವಣೆಗಳನ್ನು ಪಟ್ಟಿಮಾಡಿ.
ಅಂತಃಸ್ರಾವಕ ಗ್ರಂಥಿಗಳು ಮತ್ತು ಹಾರ್ಮೋನ್‌ಗಳ ಹೆಸರುಗಳನ್ನು ತೋರಿಸುವ ಎರಡು ಕಂಬಸಾಲುಗಳನ್ನು ಹೊಂದಿರುವ ಕೋಷ್ಟಕ ತಯಾರಿಸಿ.
ಲೈಂಗಿಕ ಹಾರ್ಮೋನ್‌ಗಳು ಎಂದರೇನು?ಅವನ್ನು ಹಾಗೆ ಏಕೆ ಹೆಸರಿಡಲಾಗಿದೆ? ಅವುಗಳ ಕಾರ್ಯವನ್ನು ತಿಳಿಸಿ.
ಸರಿಯಾದ ಆಯ್ಕೆಯನ್ನು ಆರಿಸಿ : ತಾವು ತಿನ್ನುವ ಆಹಾರದ ಬಗ್ಗೆ ಹದಿಹರೆಯದವರು ಜಾಗರೂಕರಾಗಿರಬೇಕು. ಏಕೆಂದರೆ,
ಸರಿಯಾದ ಆಯ್ಕೆಯನ್ನು ಆರಿಸಿ : ಮಹಿಳೆಯರಲ್ಲಿ ಸಂತಾನೋತ್ಪತ್ತಿ ವಯಸ್ಸು ಆರಂಭವಾಗುವುದು,
ಸರಿಯಾದ ಆಯ್ಕೆಯನ್ನು ಆರಿಸಿ : ಹದಿಹರೆಯದವರ ಸರಿಯಾದ ಆಹಾರವು ಇವುಗಳನ್ನು ಒಳಗೊಂಡಿರುತ್ತದೆ.
ಈ ಕೆಳಗಿನವುಗಳ ಬಗ್ಗೆ ಟಿಪ್ಪಣಿ ಬರೆಯಿರಿ : ಆಡಮ್ಸ್ ಆಪಲ್
ಈ ಕೆಳಗಿನವುಗಳ ಬಗ್ಗೆ ಟಿಪ್ಪಣಿ ಬರೆಯಿರಿ : ದ್ವಿತೀಯಕ ಲೈಂಗಿಕ ಲಕ್ಷಣಗಳು
ಈ ಕೆಳಗಿನವುಗಳ ಬಗ್ಗೆ ಟಿಪ್ಪಣಿ ಬರೆಯಿರಿ : ಹುಟ್ಟುವ ಮಗುವಿನ ಲಿಂಗ ನಿರ್ಧರಣೆ
ಪ್ರೌಢಾವಸ್ಥೆ ಎಂದರೇನು?
ಪೂರ್ಣ ಎತ್ತರ ಕಂಡು ಹಿಡಿಯುವ ಸೂತ್ರ ಯಾವುದು? ಒಂದು ಉದಾಹರಣೆಯನ್ನು ಕೊಡಿ.
ಬೆವರು ಮತ್ತು ತೈಲ ಗ್ರಂಥಿಗಳ ಚಟುವಟಿಕೆಯನ್ನು ತಿಳಿಸಿ.
ನಿರ್ನಾಳ ಗ್ರಂಥಿಗಳು ಎಂದರೇನು?
ಮಾನವನ ದೇಹದಲ್ಲಿ ಅಂತಃಸ್ರಾವಕ ಗ್ರಂಥಿಗಳ ಸ್ಥಾನವನ್ನು ತೋರಿಸುವ ಅಂದವಾದ ಚಿತ್ರ ಬರೆದು, ಗ್ರಂಥಿಗಳ ಸ್ಥಾನವನ್ನು ಹೆಸರಿಸಿ.
ಋತುಚಕ್ರ ಎಂದರೇನು?
ಋತು ಬಂಧ ಅಥವಾ ಮೆನೋಪಾಸ್ ಎಂದರೇನು?
ಸಮತೋಲಿತ ಆಹಾರ ಎಂದರೇನು?
ಹದಿಯರೆಯದವರಿಗೆ ಯಾವ ಆಹಾರ ಒಳ್ಳೆಯದು?
ವೈಯಕ್ತಿಕ ನೈರ್ಮಲ್ಯವು ಏಕೆ ಅಗತ್ಯ?
ಮಾದಕ ವಸ್ತುಗಳಿಂದ ಆಗುವ ಹಾನಿಗಳಾವುವು?
ಅಪಾಯಕಾರಿ ವೈರಸ್ ಯಾವುದು? ಅದರಿಂದ ಏನಾಗುತ್ತದೆ? ಅದು ಹೇಗೆ ಹರಡುತ್ತದೆ?
ಬಿಟ್ಟ ಸ್ಥಳವನ್ನು ತುಂಬಿರಿ : ಹದಿಹರೆಯದವರ ಬೆಳವಣಿಗೆಯಲ್ಲಿ _____ ಹೆಚ್ಚಳ ಕಂಡು ಬರುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ತಾರುಣ್ಯಾವಸ್ಥೆಯವರನ್ನು ______ ಎಂದು ಕರೆಯಲಾಗುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಹುಡುಗರಲ್ಲಿ ಬೆಳೆಯುತ್ತಿರುವ ಧ್ವನಿ ಪೆಟ್ಟಿಗೆಯನ್ನು _____ ಎಂದು ಕರೆಯುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಹುಡುಗರಲ್ಲಿ ಮುಖದ ಮೇಲೆ ಗಡ್ಡ ಮೀಸೆ ಬರಲು ಪ್ರಾರಂಭವಾಗುವ ಸ್ಥಿತಿಯನ್ನು ______ ಲಕ್ಷಣಗಳೆಂದು ಕರೆಯುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಹಾರ್ಮೋನ್‌ಗಳು _____ ಪದಾರ್ಥಗಳು.
ಬಿಟ್ಟ ಸ್ಥಳವನ್ನು ತುಂಬಿರಿ : ಹಾರ್ಮೋನ್‌ಗಳು _____ ಗಳಿಂದ ಸ್ರವಿಸಲ್ಪಡುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಋತು ಚಕ್ರದ ಪ್ರಾರಂಭವನ್ನು ______ ಆಗುವುದು ಎಂದು ಕರೆಯುತ್ತಾರೆ.
ಬಿಟ್ಟ ಸ್ಥಳವನ್ನು ತುಂಬಿರಿ : ಥೈರಾಯಿಡ್ ಗ್ರಂಥಿಯ ಸ್ರವಿಸುಕೆಯ ಕೊರತೆಯಿಂದ ಬರುವ ರೋಗ ______.
ಬಿಟ್ಟ ಸ್ಥಳವನ್ನು ತುಂಬಿರಿ : ಮೇದೋಜೀರಕ ಗ್ರಂಥಿಯು ಸ್ರವಿಸುವ ಹಾರ್ಮೋನ್ ________
ಬಿಟ್ಟ ಸ್ಥಳವನ್ನು ತುಂಬಿರಿ : ಕಬ್ಬಿಣ ಸಮೃದ್ಧ ಆಹಾರಗಳು _______
ಬಿಟ್ಟ ಸ್ಥಳವನ್ನು ತುಂಬಿರಿ : ಕೀಟಗಳಲ್ಲಿನ ರೂಪಪರಿವರ್ತನೆಯು ______ ಗಳಿಂದ ನಿಯಂತ್ರಣಗೊಳ್ಳುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಹದಿಹರೆಯವರಿಗೆ ______ ಆಹಾರ ಅಗತ್ಯ.
ಬಿಟ್ಟ ಸ್ಥಳವನ್ನು ತುಂಬಿರಿ : ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ _____ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ.
ಬಿಟ್ಟ ಸ್ಥಳವನ್ನು ತುಂಬಿರಿ : ಮಾದಕ ವಸ್ತುಗಳು ಸೇವನೆಯಿಂದ _____ ಹಾಳಾಗುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಅಪಾಯಕಾರಿ ವೈರಸ್ ಆಗಿರುವ _______ ಸೋಂಕಿನಿಂದ ಏಡ್ಸ ರೋಗ ಉಂಟಾಗುತ್ತದೆ.
ಬಿಟ್ಟ ಸ್ಥಳವನ್ನು ತುಂಬಿರಿ : ಹದಿಹರೆಯವು ವ್ಯಕ್ತಿಯ ______ ವಿಧಾನದಲ್ಲಿ ಕೂಡಾ ಬದಲಾವಣೆಯಾಗುವ ಸಮಯ.
ಹೊಂದಿಸಿ ಬರೆಯಿರಿ
ಹದಿಹರೆಯವನ್ನು ವ್ಯಾಖ್ಯಾನಿಸಿ.
ಪ್ರೌಢಾವಸ್ಥೆಯಲ್ಲಿ ಹುಡುಗಿಯರ ದೇಹದಲ್ಲಾಗುವ ಬದಲಾವಣೆಗಳನ್ನು ತಿಳಿಸಿ.
ಮಾನವನ ದೇಹದಲ್ಲಿ ಅಂತಃಸ್ರಾವಕ ಗ್ರಂಥಿಗಳ ಸ್ಥಾನವನ್ನು ತೋರಿಸುವ ಅಂದವಾದ ಚಿತ್ರ ಬರೆದು, ಗ್ರಂಥಿಗಳ ಸ್ಥಾನವನ್ನು ಹೆಸರಿಸಿ.
ಪ್ರೌಢಾವಸ್ಥೆಯಲ್ಲಿ ನಡೆಯುವ ದೈಹಿಕ ಬದಲಾವಣೆಗಳನ್ನು ಪಟ್ಟಿಮಾಡಿ.
ಬಿಟ್ಟ ಸ್ಥಳವನ್ನು ತುಂಬಿರಿ : ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ _____ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ.
ಬಿಟ್ಟ ಸ್ಥಳಗಳನ್ನು ತುಂಬಿರಿ : ಸ್ತ್ರೀಯರಲ್ಲಿ ಋತುಚಕ್ರದ ನಿಲುಗಡೆಯನ್ನು ______ ಎನ್ನುತ್ತಾರೆ.
ಬಿಟ್ಟ ಸ್ಥಳಗಳನ್ನು ತುಂಬಿರಿ : ಇನ್ಸುಲಿನ್ ಹಾರ್ಮೋನ್ ಉತ್ಪತ್ತಿಯಾಗುವ ಅಂಗ ______
ಬಿಟ್ಟ ಸ್ಥಳಗಳನ್ನು ತುಂಬಿರಿ : ಹೆಣ್ಣು ಮಗುವಾಗುವಾಗ ಇರುವ ವರ್ಣತಂತು _______
ಬಿಟ್ಟ ಸ್ಥಳಗಳನ್ನು ತುಂಬಿರಿ : ಪುರುಷ ಹಾರ್ಮೋನ್
EXERCISE questions and complete solutions for chapter ಹದಿ ಹರೆಯಕ್ಕೆ ಪ್ರವೇಶ of CAMBRIDGE PUBLICATION(KANNAD) of Class 8