Class 10 | CHEMISTRY |
Chapter | ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು - ಲವಣ, ಅವುಗಳ ಲಕ್ಷಣಗಳು ಮತ್ತು ಉಪಯೋಗಗಳು |
OSWAAL PUBLICATION | EXERCISE |
Number Of Questions | 100 |
Academic Year | 2023-24 |
P , Q ,R ಮತ್ತು S ದ್ರಾವಣಗಳ pH ಮೌಲ್ಯ ಕ್ರಮವಾಗಿ 7.8, 1.0,13.0 ಮತ್ತು 1.4 ಇವುಗಳಲ್ಲಿ ಹೆಚ್ಚಿನ H+ ಅಯಾನುಗಳ ಸಾರತೆ ಹೊಂದಿರುವ ದ್ರಾವಣವನ್ನು ತಿಳಿಸಿ ?
ಸೋಂಕು ನಿವಾರಕವಾಗಿ ಬಳಸುವ ಸಂಯುಕ್ತವನ್ನು ತಿಳಿಸಿ.
ಬೇಕರಿಯಲ್ಲಿ ಕೇಕ್ ತಯಾರಿಸುವಾಗ ಅದಕ್ಕೆ ಬೇಕಿಂಗ್ ಪೌಡರ್ ನ್ನು ಬೆರೆಸಿರುವುದಿಲ್ಲ. ಇದರಿಂದ ಗಟ್ಟಿಯಾದ ಮತ್ತು ಸಣ್ಣದಾದ ಬ್ರೆಡ್ ಉಂಟಾಗುತ್ತದೆ.ಇದಕ್ಕೆ ಸೂಕ್ತ ಕಾರಣ ತಿಳಿಸಿ.
ಸೋಡಿಯಂ ಕಾರ್ಬೊನೇಟ್ ದ್ರಾವಣದಲ್ಲಿ ಲಿಟ್ಮಸ್ ನ ಬಣ್ನವೇನು ?
ನೀರಿನ ಅಂಶವನ್ನು ಹೊಂದಿರುವ ಲವಣದ ಹರಳುಗಳನ್ನು ಹೆಸರಿಸಿ.
ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತವನ್ನು ಹೆಸರಿಸಿ.
`CaOCl_2` ಸಂಯುಕ್ತದ ಸಾಮಾನ್ಯ ಹೆಸರೇನು?
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ನೀರು ಇವುಗಳ ನಡುವಿನ ಕ್ರಿಯೆಯನ್ನು ತೋರಿಸುವ ಸಮೀಕರಣ ಬರೆಯಿರಿ
ಕೆಳಗಿನ ಲವಣಗಳನ್ನು ಆಮ್ಲೀಯ, ಪ್ರತ್ಯಾಮ್ಲೀಯ ಅಥವಾ ತಟಸ್ಥವಾಗಿ ವಿಂಗಡಿಸಿ. (i)NaCl , (ii)`Na_2SO_4`,(iii) `CaCl_2`,(iv) `K_2CO_3`
ಚಲುವೆ ಪುಡಿ ಎಂದರೇನು? ಇದನ್ನು ಹೇಗೆ ತಯಾರಿಸುತ್ತಾರೆ? ಚಲುವೆ ಪುಡಿಯ ಎರಡು ಉಪಯೋಗಗಳನ್ನು ತಿಳಿಸಿ.
ಲವಣಗಳನ್ನು ಆಮ್ಲೀಯ, ಪ್ರತ್ಯಾಮ್ಲೀಯ ಮತ್ತು ತಟಸ್ಥ ದ್ರಾವಣಗಳಾಗಿ ವಿಂಗಡಿಸಿ.ಪೊಟಾಸಿಯಂ ಸಲ್ಫೇಟ್, ಅಮೋನಿಯಂ ಕ್ಲೋರೈಡ್ , ಸೋಡಿಯಂ ಕಾರ್ಬೊನೇಟ್ , ಸೋಡಿಯಂ ಕ್ಲೋರೈಡ್ .
ಸೋಡಿಯಂ ಸಲ್ಫೇಟ್ ತಟಸ್ಥ ದ್ರಾವಣ. ಆದರೆ ಸೋಡಿಯಂ ಕಾರ್ಬೋನೇಟ್ ಪ್ರತ್ಯಾಮ್ಲೀಯ ಏಕೆ? ವಿವರಿಸಿ
ಜಿಪ್ಸಂನ ರಾಸಾಯನಿಕ ಹೆಸರು ಮತ್ತು ಅದರ ಅಣುಸೂತ್ರ ಬರೆಯಿರಿ. ಜಿಪ್ಸಂನ್ನು 373 K. ತಾಪಕ್ಕೆ ಕಾಯಿಸಿದಾಗ ಉಂಟಾಗುವ ಬದಲಾವಣೆಯ ರಾಸಾಯನಿಕ ಸಮೀಕರಣ ಬರೆಯಿರಿ.
ಅಡುಗೆ ಸೋಡಾದ ರಾಸಾಯನಿಕ ಸೂತ್ರ ಬರೆಯಿರಿ. ಇದನ್ನು ಹೇಗೆ ತಯಾರಿಸುತ್ತಾರೆ? ಆಹಾರ ಬೇಯಿಸುವಾಗ ಉಂಟಾಗುವ ರಾಸಾನಿಕ ಕ್ರಿಯೆಯ ಸಮೀಕರಣ ಬರೆಯಿರಿ.
ಸಾರರಿಕ್ತ HCL ನೊಂದಿಗೆ ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು? ಅದನ್ನು ಹೇಗೆ ಪರೀಕ್ಷಿಸಲಾಗುತ್ತದೆ?
ಕಬ್ಬಿಣದ ಮೊಳೆಯನ್ನು ಮುಳುಗಿಸಿಟ್ಟಾಗ ತಾಮ್ರದ ಸಲ್ಫೇಟ್ ದ್ರಾವಣದ ಬಣ್ಣ ಬದಲಾಗುವುದೇಕೆ?
ಬ್ರೆಡ್ ಮತ್ತು ಕೇಕ್ ತಯಾರಿಸುವಾಗ ಅವು ಮೃದು ಮತ್ತು ಉಬ್ಬಲು ಬಳಸುವ ಬಿಳಿ ಪೌಡರ್ ಯಾವುದು? ಅದರಲ್ಲಿನ ಪ್ರಮುಖ ಘಟಕಗಳಾವುವು?
ಹಸಿರು ಬಣ್ಣದ ಲೋಹಿಯ ಹೈಡ್ರೇಟ್ ಲವಣವನ್ನು ಕಾಯಿಸಿದಾಗ ಅದರ ಹರಳುಗಳು ನೀರನ್ನು ಕಳೆದುಕೊಂಡು ಸುಟ್ಟ ಗಂಧಕದ ವಾಸನೆ ಬರುತ್ತದೆ. ಹಾಗಾದರೆ ಆ ಲವಣವನ್ನು ಗುರ್ತಿಸಿ ಮತ್ತು ಕ್ರಿಯೆಯ ಸಮೀಕರಣ ಬರೆಯಿರಿ.
`FeSO_4*7H_2O` ಹರಳುಗಳ ಬಣ್ಣವೇನು? ಕಾಯಿಸುವುದರಿಮದ ಅದರ ಬಣ್ಣ ಹೇಗೆ ಬದಲಾಗುತ್ತದೆ. ರಾಸಾಯನಿಕ ಸಮೀಕರಣ ಬರೆಯಿರಿ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ನೀರು ಇವುಗಳ ನಡುವಿನ ಕ್ರಿಯೆಯನ್ನು ತೋರಿಸುವ ಸಮೀಕರಣ ಬರೆಯಿರಿ
ಒಂದು ವಸ್ತುವಿನ ಕೆಲವು ಹರಳುಗಳನ್ನು ಮುಚ್ಚಿದ ಪ್ರನಾಳದಲ್ಲಿ ಕಾಯಿಸಿದಾಗ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ. ಅದನ್ನು ತಂಪಾಗಲು ಬಿಟ್ಟರೆ ಕೆಲಸಮಯದ ನಂತರ ಮೊದಲಿನ ಬಣ್ನ ಪಡೆದುಕೊಳ್ಳುತ್ತದೆ.: ಆ ವಸ್ತುವನ್ನು ಹೆಸರಿಸಿ.
ಒಂದು ವಸ್ತುವಿನ ಕೆಲವು ಹರಳುಗಳನ್ನು ಮುಚ್ಚಿದ ಪ್ರನಾಳದಲ್ಲಿ ಕಾಯಿಸಿದಾಗ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ. ಅದನ್ನು ತಂಪಾಗಲು ಬಿಟ್ಟರೆ ಕೆಲಸಮಯದ ನಂತರ ಮೊದಲಿನ ಬಣ್ನ ಪಡೆದುಕೊಳ್ಳುತ್ತದೆ: ಅಲ್ಲಿ ನಡೆಯುವ ವಿದ್ಯಾಮಾನವನ್ನು ಹೆಸರಿಸಿ.
ಅಲ್ಯೂಮಿನಿಯಂ ಕ್ಯಾನನ್ನು, ಫೆರಸ್ ಸಲ್ಫೇಟನ್ನು ಸಂಗ್ರಹಿಸಲು ಬಳಸಲಾಗಿದೆ. ಕೆಲವು ದಿನಗಳ ನಂತರ ವೀಕ್ಷಿಸಿದರೆ ಕ್ಯಾನಿನಲ್ಲಿ ರಂಧ್ರಗಳು ಉಂಟಾಗಿರುತ್ತವೆ. ಈ ರೀತಿಯಾಗಲು ಕಾರಣವೇನು? ವಿವರಿಸಿ ಮತ್ತು ಅದರ ರಾಸಾಯನಿಕ ಸಮೀಕರಣ ಬರೆಯಿರಿ.
ತಾಮ್ರದ ಆಕ್ಸೈಡನ್ನು ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಮಿಶ್ರಣ ಮಾಡಿದಾಗ ಉಂಟಾಗುವ ದ್ರಾವಣದ ಬಣ್ಣವೇನು?
ಪ್ರತ್ಯಾಮ್ಲವು ಆಮ್ಲದಿಂದ ತಟಸ್ಥ ಹೊಂದುವ ಕ್ರಿಯೆಯ ಸಮೀಕರಣ ಬರೆಯಿರಿ
ಕೊಟ್ಟಿರುವ ಲವಣ ಲೋಹಿಯ ಕಾರ್ಬೋನೇಟ್ ಎಂದು ಹೇಗೆ ಸಾಧಿಸುವಿರಿ?
ಸ್ಫಟಕೀಕರಣ ನೀರು ಏಂದರೇನು ? ಅದಕ್ಕೆ ಎರಡು ಉದಾಹರಣೆಗಳನ್ನು ನೀಡಿ.ಅದರ ಇರುವಿಕೆಯನ್ನು ಉದಾಹರಣೆಯ ಮೂಲಕ ಸಾಧಿಸಿ
ಸಜಲ ಲವಣಗಳು ಎಂದರೇನು ?
ಎರಡು ಬಿಳಿಯ ಸಜಲ ಲವಣಗಳಿಗೆ, ಅವುಗಳ ರಾಸಾಯನಿಕ ಸೂತ್ರದೊಂದಿಗೆ ಉದಾಹರಣೆ ಕೊಡಿ.
ಸ್ಫಟಕೀಕರಣ ನೀರು ಎಂಬುದರ ಅರ್ಥವೇನು ? ಸಜಲ ತಾಮ್ರದ ಸಲ್ಫೇಟ್ ನಲ್ಲಿರುವ ನೀರಿನ ಅಣುಗಳ ಸಂಖ್ಯೆ ತಿಳಿಸಿ. ಅದರ ಅಣುಸೂತ್ರ ಬರೆಯಿರಿ. ಅದನ್ನು ಕಾಯಿಸಿದಾಗ ಉಂಟಾಗುವ ಬಣ್ಣದ ಬದಲಾವಣೆಯನ್ನು ವೀಕ್ಷಿಸಿ.
ನೀರಿನ ಟ್ಯಾಂಕಿನ ಸೋಂಕು ನಿವಾರಣೆಗೆ ಕ್ಲೋರಿನ್ ಅನಿಲದ ಘಾಟು ವಾಸನೆಯ ಬಿಳಿ ರಾಸಾಯನಿಕವನ್ನು ಬಳಸುತ್ತಾರೆ.: ಬಿಳಿಯ ರಾಸಾಯನಿಕವನ್ನು ಗುರುತಿಸಿ, ಅದರ ರಾಸಾಯನಿಕ ಸೂತ್ರ ಬರೆಯಿರಿ.
ನೀರಿನ ಟ್ಯಾಂಕಿನ ಸೋಂಕು ನಿವಾರಣೆಗೆ ಕ್ಲೋರಿನ್ ಅನಿಲದ ಘಾಟು ವಾಸನೆಯ ಬಿಳಿ ರಾಸಾಯನಿಕವನ್ನು ಬಳಸುತ್ತಾರೆ.:ಇದನ್ನು ತಯಾರಿಸುವ ರಾಸಾಯನಿಕ ಸಮೀಕರಣ ಬರೆಯಿರಿ.
ನೀರಿನ ಟ್ಯಾಂಕಿನ ಸೋಂಕು ನಿವಾರಣೆಗೆ ಕ್ಲೋರಿನ್ ಅನಿಲದ ಘಾಟು ವಾಸನೆಯ ಬಿಳಿ ರಾಸಾಯನಿಕವನ್ನು ಬಳಸುತ್ತಾರೆ.:ಸೋಂಕು ನಿವಾರಣೆಯನ್ನು ಹೊರತುಪಡಿಸಿ , ಇತರ ಎರಡು ಉಪಯೋಗಗಳನ್ನು ತಿಳಿಸಿ.
ಸೋಡಿಯಂ ಹೈಡ್ರಾಕ್ಸೈಡನ್ನು ಉತ್ಪಾದಿಸುವ ಒಂದು ಕೈಗಾರಿಕೆಯಲ್ಲಿ , ಅನಿಲ 'X' ಉಪ ಉತ್ಪನ್ನವಾಗಿದೆ.'X' ಅನಿಲ ಶುಷ್ಖ ಅರಳಿದ ಸುಣ್ಣದೊಂದಿಗೆ ವರ್ತಿಸಿ 'Y' ಸಂಯುಕ್ತವನ್ನು ಕೊಡುತ್ತದೆ. ಇದನ್ನು ಚಲುವೆಕಾರಕವಾಗಿ ಬಟ್ಟೆ ಕಾರ್ಖಾನೆಯಲ್ಲಿ ಬಳಸುತ್ತಾರೆ .X ಮತ್ತು Y ನ್ನು ಗುರುತಿಸಿ. ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆಯಿರಿ.
ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್, ಕ್ಯಾಲ್ಸಿಯಂ ಕ್ಲೋರೈಡಿಗಿಂತ ರಾಸಾಯನಿಕವಾಗಿ ಹೇಗೆ ಭಿನ್ನವಾಗಿದೆ ?
ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್, ಸಲ್ಫೂರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಉಂಟಾಗುವ ಬದಲಾವಣೆ ಏನು ? ಅದರ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆಯಿರಿ.
ಚಲುವೆ ಪುಡಿ ಎಂದರೇನು? ಇದನ್ನು ಹೇಗೆ ತಯಾರಿಸುತ್ತಾರೆ? ಚಲುವೆ ಪುಡಿಯ ಎರಡು ಉಪಯೋಗಗಳನ್ನು ತಿಳಿಸಿ.
ಕ್ರೀಯಾಶೀಲ ಆಮ್ಲರೋಧಕವಾಗಿ ಬಳಸುವ ಬಿಳಿಯ ಪುಡಿಯನ್ನು, ಬೇಕಿಂಗ್ ಪುಡಿ ತಯಾರಿಕೆಗೆ ಬಳಸುತ್ತಾರೆ. ಬಿಳಿಯ ಪುಡಿಯ ಹೆಸರೇನು? ಅದನ್ನು ಹೇಗೆ ತಯಾರಿಸುತ್ತಾರೆ ವಿವರಿಸಿ. ಸಮೀಕರಣ ಬರೆಯಿರಿ.
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ಒಂದು ಪ್ರತ್ಯಾಮ್ಲೀಯ ಲವಣ : ಈ ಹೇಳಿಕೆಯನ್ನು ಸಮರ್ಥಿಸಿ. ಇದನ್ನು ವಾಷಿಂಗ್ ಸೋಡಾವಾಗಿ ಹೇಗೆ ಬದಲಾಯಿಸಲಾಗುತ್ತದೆ. ವಿವರಿಸಿ.
ಒಬ್ಬ ವಿದ್ಯಾರ್ಥಿ ಗಾಜಿನ ಪ್ರನಾಳದಲ್ಲಿನ ಸಾರರಿಕ್ತ HCl ಗೆ ಕೆಲವು ಅಮೃತ ಶಿಲೆಯ ಚೂರುಗಳನ್ನು ಹಾಕುತ್ತಾನೆ. ಅದರಿಂದ ಬಿಡುಗಡೆಯಾಗುವ ಅನಿಲವನ್ನು ಸುಣ್ಣದ ತಿಳಿ ನೀರಿನ ಮೂಲಕ ಹಾಸಿದಾಗ, ಸುಣ್ಣದ ತಿಳಿನೀರಿನಲ್ಲಾಗುವ ಬದಲಾವಣೆ ಏನು?ಹೆಚ್ಚಿನ ಅನಿಲವನ್ನುಸುಣ್ಣದ ತಿಳಿನೀರಿನ ಮೂಲಕ ಹಾಸಿದಾಗ ಉಂಟಾಗುವ ಬದಲಾವಣೆ ಏನು?
ಅಡುಗೆ ಸೋಡಾವನ್ನು ಕಾಯಿಸಿದಾಗ ಉಂಟಾಗುವ ಬದಲಾವಣೆ ಏನು? ಅದರ ರಾಸಾನಿಕ ಸಮೀಕರಣ ಬರೆಯಿರಿ.ಬ್ರೆಡ್ ಮೃದುವಾಗಲು ಮತ್ತು ಸ್ಪಂಜಿನಂತಾಗಲು ಕಾರಣವಾದ ವಸ್ತು ಯಾವುದು?
ಜಿಪ್ಸಂನ ರಾಸಾಯನಿಕ ಹೆಸರು ಮತ್ತು ಅದರ ಅಣುಸೂತ್ರ ಬರೆಯಿರಿ. ಜಿಪ್ಸಂನ್ನು 373 K. ತಾಪಕ್ಕೆ ಕಾಯಿಸಿದಾಗ ಉಂಟಾಗುವ ಬದಲಾವಣೆಯ ರಾಸಾಯನಿಕ ಸಮೀಕರಣ ಬರೆಯಿರಿ.
ತಾಮ್ರದ ಸಲ್ಫೇಟಿನ ಕೆಲವು ಹರಳುಗಳನ್ನು B/F ಶುಷ್ಕ ಪ್ರನಾಳದಲ್ಲಿ ಕಾಸಿದಾಗ : ಪುನಃ ಮೊದಲಿನ ಬಣ್ಣಕ್ಕೆ ಬರುತ್ತದೆಯೇ ? ಹೇಗೆ ?
ಒಬ್ಬ ವಿದ್ಯಾರ್ಥಿ ಗಾಜಿನ ಪ್ರನಾಳದಲ್ಲಿನ ಸಾರರಿಕ್ತ HCl ಗೆ ಕೆಲವು ಅಮೃತ ಶಿಲೆಯ ಚೂರುಗಳನ್ನು ಹಾಕುತ್ತಾನೆ. ಅದರಿಂದ ಬಿಡುಗಡೆಯಾಗುವ ಅನಿಲವನ್ನು ಸುಣ್ಣದ ತಿಳಿ ನೀರಿನ ಮೂಲಕ ಹಾಸಿದಾಗ, ಸುಣ್ಣದ ತಿಳಿನೀರಿನಲ್ಲಾಗುವ ಬದಲಾವಣೆ ಏನು?ಹೆಚ್ಚಿನ ಅನಿಲವನ್ನುಸುಣ್ಣದ ತಿಳಿನೀರಿನ ಮೂಲಕ ಹಾಸಿದಾಗ ಉಂಟಾಗುವ ಬದಲಾವಣೆ ಏನು?
ಕೆಳಗಿನವುಗಳ ರಾಸಾಯನಿಕ ಸೂತ್ರ ಬರೆಯಿರಿ: ಪ್ಲಾಸ್ಟರ್ ಆಫ್ ಪ್ಯಾರಿಸ್.
ಕೆಳಗಿನವುಗಳ ರಾಸಾಯನಿಕ ಸೂತ್ರ ಬರೆಯಿರಿ: ಜಿಪ್ಸಂ
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ನೀರು ಇವುಗಳ ನಡುವಿನ ಕ್ರಿಯೆಯನ್ನು ತೋರಿಸುವ ಸಮೀಕರಣ ಬರೆಯಿರಿ
ಪ್ಲಾಸ್ಟರ್ ಆಫ್ ಪ್ಯಾರಿಸ್ ಉಪಯೋಗ ತಿಳಿಸಿ.
ಸಂಯುಕ್ತ 'x' ಅಪೂರ್ಣವಾಗಿ ಸ್ಪಟಕೀಕರಣ ನೀರನ್ನು ಕಳೆದುಕೊಂಡು 'y' ಸಂಯುಕ್ತವನ್ನು ಕೊಡುತ್ತದೆ. ಇದನ್ನು ಚಾಕ್ ಪೀಸ್ ಮತ್ತು ಆಟದ ಸಾಮಾನುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ 'x' ಅತಿಯಾಗಿ ಕಾಯಿಸಿದಾಗ 'z' ದೊರೆಯುತ್ತದೆ. ಇದನ್ನು ಶುಷ್ಕಕಾರಿಯಾಗಿ ಬಳಸುತ್ತಾರೆ. x,y,z ಗಳನ್ನು ಗುರ್ತಿಸಿ, ರಾಸಾಯನಿಕ ಸಮೀಕರಣ ಬರೆಯಿರಿ
ಆಮ್ಲಗಳು , ಪ್ರತ್ಯಾಮ್ಲಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನವನ್ನು ಸೂಚಿಸಿ. ಈ ಕ್ರಿಯೆಯ ರಾಸಾಯನಿಕ ಸಮೀಕರಣ ಬರೆಯಿರಿ. ಈ ಕ್ರಿಯೆ ಯಾವ ವಿಧದ ರಾಸಾಯನಿಕ ಕ್ರಿಯೆ?
ಕ್ಲೋರ್ - ಆಲ್ಕಲಿ ಪ್ರಕ್ರಿಯೆಯಿಂದ ಉಂಟಾಗುವ ಮೂರು ಉತ್ಪನ್ನಗಳನ್ನು ಹೆಸರಿಸಿ. ಈ ಉತ್ಪನ್ನಗಳಿಂದ ತಯಾರಿಸಿದ ಉತ್ಪನ್ನಗಳು ಕೈಗಾರಿಕೆಗಳಲ್ಲಿ ಹೇಗೆ ಉಪಯುಕ್ತವಾಗಿವೆ ?
ಒಂದು ವಸ್ತುವಿನ ಕೆಲವು ಹರಳುಗಳನ್ನು ಮುಚ್ಚಿದ ಪ್ರನಾಳದಲ್ಲಿ ಕಾಯಿಸಿದಾಗ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ. ಅದನ್ನು ತಂಪಾಗಲು ಬಿಟ್ಟರೆ ಕೆಲಸಮಯದ ನಂತರ ಮೊದಲಿನ ಬಣ್ನ ಪಡೆದುಕೊಳ್ಳುತ್ತದೆ: ಅಲ್ಲಿ ನಡೆಯುವ ವಿದ್ಯಾಮಾನವನ್ನು ಹೆಸರಿಸಿ.
ಕೆಳಗಿನ ಲವಣಗಳನ್ನು ಉತ್ಪಾದಿಸಲು ಬಳಸುವ ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಹೆಸರಿಸಿ : ಪೊಟಾಸಿಯಂ ಸಲ್ಫೇಟ್
ಕೆಳಗಿನ ಲವಣಗಳನ್ನು ಉತ್ಪಾದಿಸಲು ಬಳಸುವ ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಹೆಸರಿಸಿ : ಅಮೋನಿಯಂ ಕ್ಲೋರೈಡ್
ಕೆಳಗಿನ ಹೇಳಿಕೆಗಳಿಗೆ ಸೂಕ್ತ ಕಾರಣಗಳನ್ನು ಕೊಡಿ : ಮಳೆ ನೀರು ವಿದ್ಯುದ್ವಾಹಕ ಆದರೆ ಅಸವಿತ ನೀರಲ್ಲ.
ಕೆಳಗಿನ ಹೇಳಿಕೆಗಳಿಗೆ ಸೂಕ್ತ ಕಾರಣಗಳನ್ನು ನೀಡಿ : ಹೆಚ್ಚು ಆಹಾರ ಸೇವಿಸಿದಾಗ , ಜಠರದ ಉರಿಯನ್ನು ಅನುಭವಿಸುತ್ತವೆ.
ಕೆಳಗಿನ ಹೇಳಿಕೆಗಳಿಗೆ ಸೂಕ್ತ ಕಾರಣಗಳನ್ನು ನೀಡಿ : ನಿಂಬೆ ರಸದಿಂದ ಉಜ್ಜಿದಾಗ ಮಸುಕಾದ ತಾಮ್ರದ ಪಾತ್ರೆ ಹೊಳೆಯುತ್ತದೆ.
ಕೆಳಗಿನ ಹೇಳಿಕೆಗಳಿಗೆ ಸೂಕ್ತ ಕಾರಣಗಳನ್ನು ನೀಡಿ : ಗಾಳಿಗೆ ತೆರೆದಿಟ್ಟಾಗ ವಾಷಿಂಗ್ ಸೋಡಾದದ ಹರಳುಗಳು ಬಿಳಿ ಪುಡಿಯಾಗುತ್ತದೆ.
ಸಜಲ ತಾಮ್ರದ ಸಲ್ಫೇಟ್ ಮತ್ತು ನಿರ್ಜಲ ತಾಮ್ರದ ಸಲ್ಫೇಟ್ ನ ಅಣು ಸೂತ್ರ ಬರೆಯಿರಿ. ಅವು ಎರಡು ಪರಸ್ಪರ ಬದಲಾಗುತ್ತದೆ ಎಂಬುದನ್ನು ಸರಳ ಪ್ರಯೋಗದ ಮೂಲಕ ತಿಳಿಸಿ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಜಿಪ್ಸಂ ನ ರಾಸಾಯನಿಕ ಹೆಸರು ಮತ್ತು ಸೂತ್ರ ಬರೆಯಿರಿ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಜಿಪ್ಸಂ ನ ರಾಸಾಯನಿಕ ಹೆಸರು ಮತ್ತು ಸೂತ್ರ ಬರೆಯಿರಿ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ನೀರು ಇವುಗಳ ನಡುವಿನ ಕ್ರಿಯೆಯನ್ನು ತೋರಿಸುವ ಸಮೀಕರಣ ಬರೆಯಿರಿ
ವಾಷಿಂಗ್ ಸೋಡಾದ ಎರಡು ಉಪಯೋಗಗಳನ್ನು ತಿಳಿಸಿ.
ಕ್ಲೋರ್ - ಆಲ್ಕಲಿ ಕ್ರಿಯೆ ಎಂದರೇನು? ಈ ಕ್ರಿಯೆಯಿಂದ ಉಂಟಾಗುವ ಎರಡು ಉತ್ಪನ್ನಗಳನ್ನು ಹೆಸರಿಸಿ.
ನಮ್ಮ ಆಹಾರದಲ್ಲಿ ಬಳಸುವ ಅಡುಗೆ ಉಪ್ಪನ್ನು ತಯಾರಿಸಲು ಬಳಸುವ ಆಮ್ಲ ಮತ್ತು ಪ್ರತ್ಯಾಮ್ಲವನ್ನು ಗುರುತಿಸಿ. ಆ ಲವಣದ ಹೆಸರು ಮತ್ತು ಸೂತ್ರ ಬರೆಯಿರಿ. ಅದನ್ನು ಪಡೆಯುವ ಮೂಲವನ್ನು ಹೆಸರಿಸಿ.
ಕಲ್ಲುಪ್ಪು ಲವಣ ಎಂದರೇನು ? ಅದರ ಬಣ್ಣವನ್ನು ತಿಳಿಸಿ . ಆ ಬಣ್ಣ ಹೊಂದಿರಲು ಕಾರಣವೇನು ?
ಬ್ರೈನ್ ದ್ರಾವಣದ ಮೂಲಕ ವಿದ್ಯುತ್ ಹರಿಸಿದಾಗ ಉಂಟಾಗುವ ಬದಲಾವಣೆಯ ಸಮೀಕರಣ ಬರೆಯಿರಿ.
`CaOCl_2` ನ ಸಾಮಾನ್ಯ ಹೆಸರೇನು? ಇದನ್ನು ಹೇಗೆ ತಯಾರಿಸಲಾಗುತ್ತದೆ. ಈ ಕ್ರಿಯೆಯ ರಾಸಾಯನಿಕ ಸಮೀಕರಣ ಬರೆಯಿರಿ. ಅದರ 2 ಉಪಯೋಗಗಳನ್ನು ತಿಳಿಸಿ.
ವಾಷಿಂಗ್ ಸೋಡಾದ ರಾಸಾಯನಿಕ ಹೆಸರನ್ನು ತಿಳಿಸಿ. ಅದನ್ನು ಹೇಗೆ ತಯಾರಿಸುತ್ತಾರೆ? ಅದರ ಸಮೀಕರಣ ತಿಳಿಸಿ
ವಾಷಿಂಗ್ ಸೋಡಾದ ರಾಸಾಯನಿಕ ಹೆಸರು ಮತ್ತು ಸೂತ್ರ ಬರೆಯಿರಿ.
ಸೋಡಿಯಂ ಕ್ಲೋರೈಡ್ ಬಳಸಿ ಇದನ್ನು ಹೇಗೆ ಪಡೆಯಲಾಗುತ್ತದೆ?ಇಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆಯಿರಿ.
ಅದನ್ನು ಪ್ರತ್ಯಾಮ್ಲೀಯ ಲವಣ ಎನ್ನಲು ಕಾರಣವೇನು? ಅದರ 2 ಉಪಯೋಗಗಳನ್ನು ತಿಳಿಸಿ.
ಅಡಿಗೆ ಉಪ್ಪಿನ ರಾಸಾಯನಿಕ ಹೆಸರು ಮತ್ತು ಸೂತ್ರವನ್ನು ಬರೆಯಿರಿ. ಪ್ರಕೃತಿಯಲ್ಲಿ NaCl ನ ಎರಡು ಆಕರಗಳನ್ನು ತಿಳಿಸಿ.ಸಾಮಾನ್ಯ ಉಪ್ಪಿನ ಯಾವುದಾದರೂ ಎರಡು ಉಪಯೋಗ ತಿಳಿಸಿ. ಸ್ವಾತಂತ್ರ್ಯ ಹೋರಾಟಕ್ಕೆ ಇದು ಹೇಗೆ ಸಂಬಂಧಿಸಿದೆ?
`Na_2CO_3*10H_2O` ಮತ್ತು `Na_2CO_3` ಗಳ ರಾಸಾಯನಿಕ ಹೆಸರನ್ನು ತಿಳಿಸಿ. `10H_2O` ಪ್ರಾಮುಖ್ಯತೆ ಏನು? ಲವಣಗಳು ಹೊಂದಿರುವ ನೀರಿನ ಅಣುಗಳನ್ನು ಸೂಚಿಸಲು ಬಳಸುವ ಪದವನ್ನು ತಿಳಿಸಿ. ಎರಡು ಲವಣಗಳ ತಯಾರಿಕೆಯ ವಿಧಾನವನ್ನು ಸಮೀಕರಣದ ಮೂಲಕ ತಿಳಿಸಿ.` Na_2CO_3*10H_2O `ನ ಎರಡು ಉಪಯೋಗಗಳನ್ನು ಬರೆಯಿರಿ.
ಕೆಳಗಿನ ರಾಸಾಯನಿಕ ಸಮೀಕರಣವನ್ನು ಅಭ್ಯಾಸ ಮಾಡಿ. `CaSO_4*2H_2O rarr (373 K) rarrCaSo_4*1/2H_2O+3/2H_2O ` ಪ್ರತಿವರ್ತಕ ಮತ್ತು ಉತ್ಪನ್ನವನ್ನು ಹೆಸರಿಸಿ.ಉತ್ಪನ್ನದ ಒಂದು ಉಪಯೋಗ ತಿಳಿಸಿ.
ಕೆಳಗಿನ ಲವಣಗಳು ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆಯಿಂದ ಉಂಟಾಗಿವೆ : ಸೋಡಿಯಂ ಕ್ಲೋರೈಡ್ : ಆಮ್ಲ ಪ್ರತ್ಯಾಮ್ಲಗಳನ್ನು ಗುರ್ತಿಸಿ. ಕೋಷ್ಟಕದ ಅಂಶಗಳಿಗೆ ಉತ್ತರಿಸಿ.
ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ನೀರಿನಲ್ಲಿ ವಿಲೀನಗೊಳಿಸಿ ಬಳಸುತ್ತೇವೆ. ಇದರಿಂದ ಬಟ್ಟೆಗಳು ಹಾಳಾಗುತ್ತವೆ. ನಾವು ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳು ಲೋಹಗಳ ಉತ್ಕರ್ಷಣೆಯಿಂದ ಅಥವಾ ಇಂಜಿನ್ ಆಯಿಲ್ ಮಿಶ್ರಿತ ಕೈಗರಿಕಾ ವರ್ಣಕಗಳಾಗಿವೆ. ಡಾಕ್ಟರ್ ಹೇಳುತ್ತಾರೆ, ಈ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇವುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ತಯಾರಾಕರು ಬಣ್ಣಗಳಿಗೆ ವರ್ಣಕಗಳನ್ನು ಮಿಶ್ರಮಾಡಿ ಲಾಭಕ್ಕಾಗಿ ಮಾರಾಟಮಾಡುತ್ತಾರೆ.ಹೋಳಿಪ್ರೀಯರು ನೈಸರ್ಗಿಕ ಬಣ್ಣ ಬಳಸಿ ಹೋಳಿಯನ್ನು ವರ್ಣಮಯವಾಗಿಸುತ್ತಾರೆ. ನೈಸರ್ಗಿಕ ಬಣ್ಣಗಳು ಸೂರ್ಯನ ಕಿರಣಗಳ ಸಂಪರ್ಕಕ್ಕೆ ಬಂದರೆ ನಿಧಾನವಾಗಿ ಬಣ್ಣ ಮರೆಯಾಗುತ್ತದೆ : ಸಂಶ್ಲೇಷಿತ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕಗಳೆಂದು ಡಾಕ್ಟರ್ ಹೇಳುತ್ತಾರೆ ಏಕೆ?
ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ನೀರಿನಲ್ಲಿ ವಿಲೀನಗೊಳಿಸಿ ಬಳಸುತ್ತೇವೆ. ಇದರಿಂದ ಬಟ್ಟೆಗಳು ಹಾಳಾಗುತ್ತವೆ. ನಾವು ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳು ಲೋಹಗಳ ಉತ್ಕರ್ಷಣೆಯಿಂದ ಅಥವಾ ಇಂಜಿನ್ ಆಯಿಲ್ ಮಿಶ್ರಿತ ಕೈಗರಿಕಾ ವರ್ಣಕಗಳಾಗಿವೆ. ಡಾಕ್ಟರ್ ಹೇಳುತ್ತಾರೆ, ಈ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇವುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ತಯಾರಾಕರು ಬಣ್ಣಗಳಿಗೆ ವರ್ಣಕಗಳನ್ನು ಮಿಶ್ರಮಾಡಿ ಲಾಭಕ್ಕಾಗಿ ಮಾರಾಟಮಾಡುತ್ತಾರೆ.ಹೋಳಿಪ್ರೀಯರು ನೈಸರ್ಗಿಕ ಬಣ್ಣ ಬಳಸಿ ಹೋಳಿಯನ್ನು ವರ್ಣಮಯವಾಗಿಸುತ್ತಾರೆ. ನೈಸರ್ಗಿಕ ಬಣ್ಣಗಳು ಸೂರ್ಯನ ಕಿರಣಗಳ ಸಂಪರ್ಕಕ್ಕೆ ಬಂದರೆ ನಿಧಾನವಾಗಿ ಬಣ್ಣ ಮರೆಯಾಗುತ್ತದೆ : ನೈಸರ್ಗಿಕ ಬಣ್ಣಗಳಾವುವು?
ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ನೀರಿನಲ್ಲಿ ವಿಲೀನಗೊಳಿಸಿ ಬಳಸುತ್ತೇವೆ. ಇದರಿಂದ ಬಟ್ಟೆಗಳು ಹಾಳಾಗುತ್ತವೆ. ನಾವು ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳು ಲೋಹಗಳ ಉತ್ಕರ್ಷಣೆಯಿಂದ ಅಥವಾ ಇಂಜಿನ್ ಆಯಿಲ್ ಮಿಶ್ರಿತ ಕೈಗರಿಕಾ ವರ್ಣಕಗಳಾಗಿವೆ. ಡಾಕ್ಟರ್ ಹೇಳುತ್ತಾರೆ, ಈ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇವುಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ತಯಾರಾಕರು ಬಣ್ಣಗಳಿಗೆ ವರ್ಣಕಗಳನ್ನು ಮಿಶ್ರಮಾಡಿ ಲಾಭಕ್ಕಾಗಿ ಮಾರಾಟಮಾಡುತ್ತಾರೆ.ಹೋಳಿಪ್ರೀಯರು ನೈಸರ್ಗಿಕ ಬಣ್ಣ ಬಳಸಿ ಹೋಳಿಯನ್ನು ವರ್ಣಮಯವಾಗಿಸುತ್ತಾರೆ. ನೈಸರ್ಗಿಕ ಬಣ್ಣಗಳು ಸೂರ್ಯನ ಕಿರಣಗಳ ಸಂಪರ್ಕಕ್ಕೆ ಬಂದರೆ ನಿಧಾನವಾಗಿ ಬಣ್ಣ ಮರೆಯಾಗುತ್ತದೆ : ನೀವು ವಿದ್ಯಾರ್ಥಿಯಾಗಿ ನೈಸರ್ಗಿಕ ಬಣ್ಣ ಬಳಸಲು ನಿಮ್ಮ ಸ್ನೇಹಿತರನ್ನು ಹೇಗೆ ಪ್ರಚೋದಿಸುವಿರಿ? ಯಾವುದಾದರು ಎರಡು ಸಲಹೆಗಳನ್ನು ನೀಡಿ.
ನಿಮಗೆ ಮೂರು ಗಾಜಿನ ಪ್ರಾನಾಳಗಳನ್ನು ನೀಡಿದ್ದು, ಒಂದರಲ್ಲಿ ಭಟ್ಟಿ ಇಳಿಸಿದ ನೀರನ್ನು ಮತ್ತು ಇನ್ನೆರಡರಲ್ಲಿ ಕ್ರಮವಾಗಿ ಆಮ್ಲ ಮತ್ತು ಪ್ರತ್ಯಾಮ್ಲಗಳ ದ್ರಾವಣಗಳಿವೆ. ನಿಮಗೆ ಕೇವಲ ಕೆಂಪು ಲಿಟ್ಮಸ್ ಕಾಗದವನ್ನು ಮಾತ್ರ ನೀಡಿದರೆ ಪ್ರನಾಳದಲ್ಲಿ ಪ್ರತಿಯೊಂದು ಮಾದರಿಯನ್ನು ಹೇಗೆ ಗುರ್ತಿಸುವಿರಿ.
ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಏಕೆ ಸಂಗ್ರಹಿಸಿಡಬಾರದು ?
ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಸಾಮಾನ್ಯವಾಗಿ ಯಾವ ಅನಿಲ ಬಿಡುಗಡೆಯಾಗುತ್ತದೆ ಉದಾಹರಣೆಯೊಂದಿಗೆ ವಿವರಿಸಿ.ಈ ಅನಿಲದ ಅಸ್ತಿತ್ವವನ್ನು ನೀವು ಹೇಗೆ ಪರೀಕ್ಷಿಸುವಿರಿ?
ಲೋಹೀಯ ಸಂಯುಕ್ತ ‘ಎ’ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿ ಗುಳ್ಳೆಗಳನ್ನು (effervescence) ಉತ್ಪತ್ತಿ ಮಾಡುತ್ತದೆ. ಬಿಡುಗಡೆಯಾದ ಅನಿಲ ಉರಿಯುವ ಮೇಣದ ಬತ್ತಿಯನ್ನು ಆರಿಸುತ್ತದೆ. ಈ ಕ್ರಿಯೆಯಲ್ಲಿ ಉಂಟಾದ ಒಂದು ಸಂಯುಕ್ತ ಕ್ಯಾಲ್ಸಿಯಂ ಕ್ಲೋರೈಡ್ ಆದರೆ ಕ್ರಿಯೆಯ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ.
`HCl, HNO_3` ಇತ್ಯಾದಿಗಳು ಜಲೀಯ ದ್ರಾವಣದಲ್ಲಿ ಆಮ್ಲೀಯ ಗುಣಗಳನ್ನು ಪ್ರದರ್ಶಿಸುತ್ತದೆ ಆದರೆ ಆಲ್ಕೋಹಾಲ್ ಮತ್ತು ಗ್ಲುಕೋಸ್‍ನಂತಹ ಸಂಯುಕ್ತಗಳ ದ್ರಾವಣಗಳು ಆಮ್ಲೀಯ ಗುಣಗಳನ್ನು ಪ್ರದರ್ಶಿಸುವುದಿಲ್ಲ ಏಕೆ?
ಆಮ್ಲದ ಜಲೀಯ ದ್ರಾವಣ ವಿದ್ಯುತ್ತಿನ ವಾಹಕವಾಗಿದೆ ಏಕೆ?
ಶುಷ್ಕ HCl ಅನಿಲ , ಶುಷ್ಕ ನೀಲಿ ಲಿಟ್ಮಸ್ ಕಾಗದ ಬಣ್ನವನ್ನು ಬದಲಾಯಿಸುವುದಿಲ್ಲ ಏಕೆ?
ಆಮ್ಲವನ್ನು ಸಾರರಿಕ್ತಗೊಳಿಸುವಾಗ, ಆಮ್ಲವನ್ನೇ ನೀರಿಗೆ ಸೇರಿಸಬೇಕೆಂದೂ ಮತ್ತು ಆಮ್ಲಕ್ಕೆ ನೀರನ್ನು ಸೇರಿಸಬಾರದೆಂದು ಶಿಫಾರಸು ಮಾಡುವುದೇಕೆ?
ಆಮ್ಲದ ದ್ರಾವಣವನ್ನು ಸಾರರಿಕ್ತಗೊಳಿಸಿದಾಗ ಹೈಡ್ರೋನಿಯಂ ಅಯಾನು `(H_3O^+)` ಗಳ ಸಾರತೆಯು ಹೇಗೆ ಪ್ರಭಾವಿತಗೊಳ್ಳುತ್ತದೆ?
ಸೋಡಿಯಂ ಹೈಡ್ರಾಕ್ಸೈಡ್‍ನ ದ್ರಾವಣದಲ್ಲಿ ಹೆಚ್ಚಿನ ಪ್ರಮಾಣದ ಪ್ರತ್ಯಾಮ್ಲವನ್ನು ಕರಗಿಸಿದಾಗ ಹೈಡ್ರಾಕ್ಸೈಡ್ ಅಯಾನು`(OH^–)` ಗಳ ಸಾರತೆಯು ಹೇಗೆ ಪ್ರಭಾವಿತಗೊಳ್ಳುತ್ತದೆ?
ನಿಮ್ಮಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ದ್ರಾವಣಗಳಿವೆ. ದ್ರಾವಣ `ಎ’ ಯ pH– 6 ಮತ್ತು ದ್ರಾವಣ ‘ಬಿ’ ಯ pH – 8. ಯಾವ ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳ ಸಾರತೆ ಹೆಚ್ಚಿದೆ? ಇವುಗಳಲ್ಲಿ ಯಾವುದು ಆಮ್ಲ ಮತ್ತು ಯಾವುದು ಪ್ರತ್ಯಾಮ್ಲ?
`H^+(aq)` ಅಯಾನುಗಳ ಸಾರತೆಯು ದ್ರಾವಣದ ಸ್ವಭಾವದ ಮೇಲೆ ಯಾವ ಪರಿಣಾಮ ಹೊಂದಿದೆ?
ಪ್ರತ್ಯಾಮ್ಲೀಯ ದ್ರಾವಣಗಳೂ `H^+(aq)` ಅಯಾನುಗಳನ್ನು ಹೊಂದಿವೆಯೇ?ಹೌದಾದರೆ ಅವು ಏಕೆ ಪ್ರತ್ಯಾಮ್ಲೀಯವಾಗಿವೆ?
ಯಾವ ಸಂದರ್ಭಗಳಲ್ಲಿ ಒಬ್ಬ ರೈತ ತನ್ನ ಕೃಷಿ ಭೂಮಿಯ ಮಣ್ಣಿಗೆ ಸುಟ್ಟ ಸುಣ್ಣ(ಕ್ಯಾಲ್ಸಿಯಂ ಆಕ್ಸೈಡ್) ಅಥವಾ ಅರಳಿದ ಸುಣ್ಣ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್) ಅಥವಾ ಸೀಮೆಸುಣ್ಣ(ಕ್ಯಾಲ್ಸಿಯಂ ಕಾರ್ಬೋನೇಟ್) ಬೆರೆಸುತ್ತಾನೆ?
`CaOCl_2` ಸಂಯುಕ್ತದ ಸಾಮಾನ್ಯ ಹೆಸರೇನು?
ಕ್ಲೋರಿನ್‍ನೊಂದಿಗೆ ವರ್ತಿಸಿದಾಗ ಚೆಲುವೆ ಪುಡಿ ಉತ್ಪತ್ತಿಮಾಡುವ ವಸ್ತುವನ್ನು ಹೆಸರಿಸಿ.
ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತವನ್ನು ಹೆಸರಿಸಿ.
ಸೋಡಿಯಂ ಹೈಡ್ರೋಜನ್‍ಕಾರ್ಬೋನೇಟ್ ದ್ರಾವಣವನ್ನು ಕಾಸಿದರೆ ಏನಾಗುತ್ತದೆ? ಈ ಕ್ರಿಯೆಯ ಸಮೀಕರಣ ಬರೆಯಿರಿ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ನೀರು ಇವುಗಳ ನಡುವಿನ ಕ್ರಿಯೆಯನ್ನು ತೋರಿಸುವ ಸಮೀಕರಣ ಬರೆಯಿರಿ
ಒಂದು ದ್ರಾವಣ ಕೆಂಪು ಲಿಟ್ಮಸ್‍ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ, ಅದರ pH ಮೌಲ್ಯವು
ಒಂದು ದ್ರಾವಣ ಪುಡಿ ಮಾಡಿದ ಮೊಟ್ಟೆಯ ಚೂರುಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ಸುಣ್ಣದ ತಿಳಿನೀರನ್ನು ಬಿಳಿಯಾಗಿಸುತ್ತದೆ. ದ್ರಾವಣ ಇದನ್ನು ಒಳಗೊಂಡಿದೆ.
EXERCISE questions and complete solutions for chapter ಆಮ್ಲ, ಪ್ರತ್ಯಾಮ್ಲಗಳು ಮತ್ತು ಲವಣಗಳು - ಲವಣ, ಅವುಗಳ ಲಕ್ಷಣಗಳು ಮತ್ತು ಉಪಯೋಗಗಳು of OSWAAL PUBLICATION of Class 10